Karnataka Times
Trending Stories, Viral News, Gossips & Everything in Kannada

Gold Price: 2025 ಕ್ಕೆ ಬಂಗಾರದ ಬೆಲೆ ಎಷ್ಟಾಗಲಿದೆ ಗೊತ್ತೆ? ಉತ್ತರ ಕೊಟ್ಟ ತಜ್ಞರು

advertisement

ಚಿನ್ನ ಮಹಿಳೆಯರ ಪ್ರಿಯವಾದ ವಸ್ತು, ಇಂದು ಆಭರಣಗಳನ್ನು ತೊಡುವುದಕ್ಕಿಂತ ಹೆಚ್ಚಾಗಿ ಹೂಡಿಕೆ ಮಾಡುವುದೇ ಹೆಚ್ಚಳವಾಗಿ ಬಿಟ್ಟಿದೆ. ಯಾಕಂದ್ರೆ ಕಷ್ಟ ಕಾಲದಲ್ಲಿ ನೆರವಾಗುವುದೇ ಚಿನ್ನದ ಹೂಡಿಕೆ, ಅದೇ ರೀತಿ ಇದರ ಬೆಲೆ (Gold Price) ಯು ಕೂಡ ಯಾವತ್ತಿಗೂ ಕಡಿಮೆಯಾಗುದಿಲ್ಲ, ವರ್ಷದಿಂದ ವರ್ಷಕ್ಕೆ ಬೆಲೆ ಹೆಚ್ಚಾಗುತ್ತಲೆ ಸಾಗುತ್ತದೆ. ಇನ್ನು ಚಿನ್ನಾಭರಣವನ್ನು ಹಿಂದಿನ‌ ಕಾಲದಿಂದಲೂ ಹೆಚ್ಚಾಗಿ ಬಳಸಿಕೊಂಡೇ ಬರುತ್ತಿದ್ದಾರೆ. ಹಿಂದಿನ ಸಂಪ್ರದಾಯ ದಂತೆ ಚಿನ್ನವೂ ಅಗತ್ಯ ವಸ್ತು. ಹಾಗಾಗಿ ಯಾವುದೇ ಶುಭ ಸಮಾರಂಭ ಇರುವುದಾದರೂ ಚಿನ್ನ,ಬೆಳ್ಳಿಗೆ ಅಧಿಕ ಪ್ರಶಾಸ್ತ್ಯ ನೀಡಲಾಗುತ್ತದೆ.

ಚಿನ್ನದ ಬೆಲೆ (Gold Price) ಹೆಚ್ಚಳ

ಇಂದು‌ ಚಿನ್ನ ವರ್ಷಕ್ಕೆ ಕನಿಷ್ಠ ಶೇ. 8ರಿಂದ 25ರಷ್ಟು ಬೆಲೆ ಏರಿಕೆ ಮಾಡಿಕೊಂಡು ಬರುತ್ತಿರುವ ಅಪೂರ್ವ ವಸ್ತುವಾಗಿದ್ದು ಇಂದು ಬ್ಯಾಂಕ್ ಗಳು ಕೂಡ ಚಿನ್ನದ ಸಾಲವನ್ನು ಅತೀ ಸುಲಭವಾಗಿ ಯಾವುದೇ ದಾಖಲೆ ಇಲ್ಲದೆ ನೀಡುತ್ತಿದೆ.ಹಾಗಾಗಿ ಹೆಚ್ಚಿನ ಗ್ರಾಹಕರು ಸಾಲ ಮಾಡಿಯಾದರೂ ಚಿನ್ನದ ಹೂಡಿಕೆ ಮಾಡುತ್ತಾರೆ. ಇದೀಗ ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೂಡ ಚಿನ್ನದ ಬೆಲೆ ದಾಖಲೆಯ ಮಟ್ಟ ತಲುಪಿದ್ದು , ಜಾಗತಿಕ ಮಾರುಕಟ್ಟೆಯಲ್ಲಿಯು ಚಿನ್ನದ ಬೆಲೆ ದುಪ್ಪಟ್ಟು ಆಗಿದೆ.

Image Source: Moneycontrol

ಎಷ್ಟಾಗಿದೆ ಇಂದಿನ ಬೆಲೆ?

advertisement

ಇಂದು ಕೂಡ ಬೆಲೆಯಲ್ಲಿ ಏರಿಕೆ ಕಂಡಿದ್ದು ದೆಹಲಿಯಲ್ಲಿ ಇಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 62,890 ರೂ.ಗಳಾಗಿದ್ದು, 24 ಕ್ಯಾರೆಟ್ ಚಿನ್ನದ 68,590 ರೂ ಆಗಿದೆ. ಬೆಂಗಳೂರಿನಲ್ಲಿ ಪ್ರಸ್ತುತ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯು 62,740 ರೂ.ಗಳಾಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 68,440 ರೂ. ಆಗಿದೆ.

2025ರಲ್ಲಿ ಎಷ್ಟಾಗಲಿದೆ ಬೆಲೆ?

ಇದೀಗ 2024ನೇ ಹಣಕಾಸು ವರ್ಷದ ವಹಿವಾಟಿನಲ್ಲಿ ಸ್ಪಾಟ್ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 2,254 ಡಾಲರ್‌ನಲ್ಲಿ ಮುಕ್ತಾಯವಾಗಿದ್ದು 2025 ರಲ್ಲಿ ಔನ್ಸ್‌ಗೆ 3000 ಕ್ಕಿಂತ ಹೆಚ್ಚಿನ ಮುನ್ಸೂಚನೆಯನ್ನು ನೀಡಲಾಗಿದೆ. ಹೌದು ಮುಂದಿನ ಹಣಕಾಸು ವರ್ಷದಲ್ಲಿ ಚಿನ್ನದ ಬೆಲೆಯು 10 ಗ್ರಾಂಗೆ 75,000 ರೂ.ಗೆ ತಲುಪುವ ನಿರೀಕ್ಷೆಯಿದೆ ಎನ್ನುವ ಮಾಹಿತಿ ವಿವಿಧ ಮೂಲಗಳಿಂದ ಲಭ್ಯವಾಗಿದೆ. ಈ ಸಲದ ಹಣಕಾಸು ವರ್ಷದಲ್ಲಿ ಕಳೆದ ಎರಡು ತ್ರೈಮಾಸಿಕಗಳಲ್ಲಿ 10 ಗ್ರಾಂ ಚಿನ್ನದ ಬೆಲೆ 11,000 ರೂ.ಗಳಷ್ಟು ಜಾಸ್ತಿಯಾಗಿದ್ದು ಮುಂದಿನ ವರ್ಷದಲ್ಲಿ ಚಿನ್ನ ದರವು ಮತ್ತಷ್ಟು ದುಪ್ಪಟ್ಟು ಆಗಲಿದೆ ಎನ್ನಲಾಗಿದೆ.

Image Source: Business Today

ಯಾಕಾಗಿ ಬೆಲೆ ಹೆಚ್ಚಳ?

ಹೆಚ್ಚಾಗಿ ಹಣದುಬ್ಬರ ಹೆಚ್ಚಾದಂತೆ, ಚಿನ್ನದ ಬೇಡಿಕೆಯು ಕೂಡ ಹೆಚ್ಚಾಗುತ್ತ ಹೋಗುತ್ತದೆ. ಈಗಾಗಲೇ ವಿಶ್ವದ ಹಲವು ರಾಷ್ಟ್ರಗಳ ಕೇಂದ್ರ ಬ್ಯಾಂಕುಗಳಿಂದ ಬೃಹತ್‌ ಪ್ರಮಾಣ ದಲ್ಲಿ ಚಿನ್ನ ಖರೀದಿಯಾಗಿರುವುದರಿಂದ ಚಿನ್ನದ ಬೆಲೆ ಏರಿಕೆಯಾಗಿದೆ. ಅದೇ ರೀತಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿಯು ಚಿನ್ನದ ದರ ಹೆಚ್ಚಾಗಿದ್ದು, ಭೌತಿಕ ಚಿನ್ನದ ದರದದ ಬೆಲೆಯು ಹೆಚ್ಚಾಗಿದೆ. ಇನ್ನು ಡಾಲರ್, ಬಾಂಡ್ ಇಳುವರಿ ಕುಸಿತವಾಗಿದ್ದು ವಿಶ್ವದ ರಾಜಕೀಯ ಆರ್ಥಿಕ ಪರಿಸ್ಥಿತಿಯಿಂದಾಗಿಯು ಚಿನ್ನದ ಬೆಲೆ ಹೆಚ್ಚಾಗಿದೆ.

advertisement

Leave A Reply

Your email address will not be published.