Karnataka Times
Trending Stories, Viral News, Gossips & Everything in Kannada

Gold: ಚಿನ್ನ ಖರೀದಿ ಹಾಗೂ ವಿನಿಮಯ ಮಾಡುವವರಿಗೆ ಹೊಸ ನಿಯಮ ಜಾರಿಗೆ ತಂದ ಆರ್‌ಬಿಐ!

advertisement

ಎಲ್ಲಾ ಸಮಯಕ್ಕೂ ಚಿನ್ನ ಅನುಕೂಲಕರ. ಚಿನ್ನ (Gold) ದ ಮೇಲೆ ಹೂಡಿಕೆ ಮಾಡಿದರೆ ನಷ್ಟವಂತೂ ಆಗುವುದಿಲ್ಲ ಎಂಬ ನಂಬಿಕೆ ಬಹಳಷ್ಟು ಜನರಲ್ಲಿ ಇದ್ದೆ ಇದೆ. ಹೂಡಿಕೆ ಅಂತ ಬಂದಾಗ ಹೆಚ್ಚಿನ ಮಹತ್ವವನ್ನು ಚಿನ್ನ ಪಡೆಯುತ್ತಿದೆ. ಹಣದುಬ್ಬರದ ವಿರುದ್ಧ ಆಪತ್ಬಾಂಧವ ಎಂದೇ ಚಿನ್ನಕ್ಕೆ ಹೆಚ್ಚಿನ ಒತ್ತು ಸಹ ನೀಡುತ್ತಾರೆ.ಬೆಲೆ ಏರಿಕೆ ಯಾದರೂ ಚಿನ್ನ ಖರೀದಿ ಮಾಡುವ ಗ್ರಾಹಕರು ಕಡಿಮೆ ಯಾಗಿಲ್ಲ, ಯಾಕಂದ್ರೆ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಎಂಬ ಭಾವನೆ ಪ್ರತಿಯೊಬ್ಬರ ಮನದಲ್ಲಿಯು ಇದೆ‌.

ಇಂದು ಖರೀದಿ, ವಿನಿಮಯದಲ್ಲಿ ಮೋಸ ಮಾಡುವಂತಿಲ್ಲ:

ಹಿಂದೆಲ್ಲಾ ಚಿನ್ನ (Gold) ವನ್ನು ಖರೀದಿ ಮಾಡುವಾಗ, ವಿನಿಮಯ ಮಾಡುವಾಗ ವ್ಯಾಪಾರಿಗಳು ಗ್ರಾಹಕರನ್ನು ಮೋಸ ಮಾಡುವ ಉದಾಹರಣೆಗಳು ಇತ್ತು. ಆದರೆ ಇಂದು ಚಿನ್ನದ ಮಾರುಕಟ್ಟೆಯೇ ಬದಲಾಗಿದ್ದು ಮೋಸ ಮಾಡಲು ಸಹ ಸಾಧ್ಯವಿಲ್ಲ. ಚಿನ್ನವನ್ನು ಅಧುನಿಕ ಕ್ಯಾರೆಟ್ ಮೀಟರ್ ಉಪಕರಣದ ಮೂಲಕ ಸರಿಯಾದ ತೂಕ, ಲಾಭ,ನಷ್ಟ ಮಾಹಿತಿ ಸಿಗುತ್ತದೆ.

ನಿಯಮ ಬದಲಾವಣೆ:

 

advertisement

 

ಆರ್‌ಬಿಐ ಚಿನ್ನದ ಕುರಿತಂತೆ ನಿಯಮ ಬದಲಾವಣೆ ಮಾಡಿದ್ದು RBI ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಡ್ಜಿಂಗ್ ಸೌಲಭ್ಯ ಕಲ್ಪಿಸುವುದಾಗಿ ಘೋಷಣೆ ಮಾಡಿದೆ. ಈ ಹೆಡ್ಜಿಂಗ್ ಸೌಲಭ್ಯ ಸರಕುಗಳ ಬೆಲೆಗಳಲ್ಲಿನ ಏರಿಳಿತಗಳಿಂದ ಉಂಟಾಗುವ ನಷ್ಟವನ್ನು ತಪ್ಪಿಸಲು ಬಳಕೆಗೆ ತರಲಾಗಿದ್ದು, ಹೂಡಿಕೆದಾರರು ಅಥವಾ ಉದ್ಯಮಿಗಳು ಅಪಾಯವನ್ನು ಕಡಿಮೆ ಮಾಡಲು ಹೆಡ್ಜಿಂಗ್ ಸಾಧನವನ್ನು ಬಳಸಬಹುದಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಹೆಡ್ಜಿಂಗ್:

ಇದೀಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಹೆಡ್ಜಿಂಗ್ ಅನ್ನು ಮಾಡಬಹುದಾಗಿದ್ದು ಆರ್‌ಬಿಐ ಈ ನಿರ್ಧಾರದಿಂದ ಉದ್ಯಮಕ್ಕೆ ಲಾಭವಾಗಲಿದೆ. ಮೊದಲು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಡ್ಜಿಂಗ್ ಸೌಲಭ್ಯ ಇರಲಿಲ್ಲ. RBI ಈ ನಿರ್ಧಾರವು ಚಿನ್ನದ ಬೆಲೆಗಳನ್ನು ನಿರ್ಧರಿಸಲು ಸುಲಭವಾಗುತ್ತದೆ. ಅದೇ ರೀತಿ ಚಿನ್ನದ ರಫ್ತಿನಲ್ಲಿ ಬದಲಾವಣೆ ತರಲಿದೆ.

advertisement

Leave A Reply

Your email address will not be published.