Karnataka Times
Trending Stories, Viral News, Gossips & Everything in Kannada

LPG Cylinder: ಮುಂದಿನ 9 ತಿಂಗಳವರೆಗೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಗ್ಗೆ ಹೊಸ ಘೋಷಣೆ! ಸಿಹಿಸುದ್ದಿ

advertisement

ಕೇಂದ್ರ ಸರ್ಕಾರದಲ್ಲಿ ಮೋದಿ ರವರ ಆಡಳಿತ ಮೂರನೇ ಬಾರಿಗೆ ಬಂದಿರುವುದರಿಂದಾಗಿ ಈಗಾಗಲೇ ಅವರು ಜಾರಿಗೆ ತಂದಿರುವಂತಹ ಪ್ರತಿಯೊಂದು ಯೋಜನೆಗಳು ಕೂಡ ಮುಂದುವರೆಯುವುದು ಖಚಿತವಾಗಿದ್ದು ಅದರಲ್ಲೂ ವಿಶೇಷವಾಗಿ ನಾವು ಇವತ್ತಿನ ಈ ಲೇಖನದ ಮೂಲಕ ಮಾತನಾಡುವುದಕ್ಕೆ ಹೊರಟಿರೋದು ಉಜ್ವಲ್ ಗ್ಯಾಸ್ ಸಿಲಿಂಡರ್ ಯೋಜನೆಯ ಬಗ್ಗೆ. ಹೌದು ಪ್ರಧಾನ ಮಂತ್ರಿ ಉಜ್ವಲ್ ಯೋಜನೆ (PM Ujjwala Yojana) ಅಡಿಯಲ್ಲಿ ಸಿಗುತ್ತಿರುವಂತಹ ಗ್ಯಾಸ್ ಸಿಲಿಂಡರ್ (LPG Cylinder) ಮೇಲೆ 300 ರೂಪಾಯಿಗಳ ಸಬ್ಸಿಡಿ ಇನ್ನು ಮುಂದಿನ ಒಂಬತ್ತು ತಿಂಗಳವರೆಗೂ ಕೂಡ ಮುಂದುವರೆಯಲಿದೆ ಎಂಬುದಾಗಿ ತಿಳಿದು ಬಂದಿದೆ. ದೇಶದ ರಾಜಧಾನಿಯಲ್ಲಿ ಗ್ಯಾಸ್ ಸಿಲೆಂಡರ್ 803 ರೂಪಾಯಿಗಳಿಗೆ ಸಿಗುತ್ತಿದ್ದು 300 ರೂಪಾಯಿಗಳ ಸಬ್ಸಿಡಿಯ ನಂತರ ಇದು 503 ರೂಪಾಯಿಗಳಿಗೆ ಸಿಗುತ್ತಿದೆ.

WhatsApp Join Now
Telegram Join Now

9 ತಿಂಗಳ ತನಕ ಯಾಕೆ ಸಬ್ಸಿಡಿ ಸಿಕ್ತಾ ಇದೆ?

 

Image Source: The Statesman

 

ಕಳೆದ ಮಾರ್ಚ್ ತಿಂಗಳಲ್ಲಿ ಕ್ಯಾಬಿನೆಟ್ ನಲ್ಲಿ ಪ್ರಧಾನಿಯಾಗಿರುವಂತಹ ನರೇಂದ್ರ ಮೋದಿ (Narendra Modi) ಅವರು ಉಜ್ವಲ ಯೋಜನೆ ಅಡಿಯಲ್ಲಿ ಸಿಗುವಂತಹ ಅನ್ನು ಜಾರಿಗೆ ತಂದಿದ್ದರು ಮಾರ್ಚ್ ತಿಂಗಳವರೆಗೂ ಅಂದರೆ 2025ರ ಮಾರ್ಚ್ ತಿಂಗಳವರೆಗೂ ಕೂಡ ಇದು ಮುಂದುವರೆಯಲಿದೆ.

advertisement

ಉಜ್ವಲ್ ಯೋಜನೆ (PM Ujjwala Yojana) ಯನ್ನು ಪ್ರಾರಂಭ ಮಾಡಿರುವುದು 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ರವರ ನೇತೃತ್ವದಲ್ಲಿ. 2024 ಹಾಗೂ 25ನೇ ಒಂದು ವರ್ಷದಲ್ಲಿ 12 ಬಾರಿ ಗ್ಯಾಸ್ ಅನ್ನು ತುಂಬಿಸಿಕೊಳ್ಳುವಂತಹ ಅವಕಾಶವನ್ನ ನೀಡಲಾಗುತ್ತದೆ. ಈ ಯೋಜನೆ ಅಡಿಯಲ್ಲಿ 14.2 ಕಿ.ಗ್ರಾಂ ಜ್ಯಾಸ್ತಿಲಿಂಡರ್ ಮೇಲೆ 300 ರೂಪಾಯಿಗಳ ಸಬ್ಸಿಡಿಯನ್ನು ನೀಡಲಾಗುತ್ತದೆ. ಮುಂದಿನ ಮಾರ್ಚ್ ತಿಂಗಳವರೆಗೆ 10.27 ಕೋಟಿ ಲಾಭಾರ್ತಿಗಳು ಈ ಯೋಜನೆ ಅಡಿಯಲಿ ಸಬ್ಸಿಡಿಯನ್ನು ಪಡೆದುಕೊಳ್ಳಲಿದ್ದಾರೆ. 2024 ಹಾಗೂ 25 ನೇ ಆರ್ಥಿಕ ವರ್ಷದಲ್ಲಿ ಈ ಯೋಜನೆಗಾಗಿ ಒಟ್ಟಾರೆಯಾಗಿ 12,000 ಕೋಟಿ ರೂಪಾಯಿಗಳ ಖರ್ಚು ಆಗಲಿದೆ.

 

Image Source: Business League

 

ಈ ಯೋಜನೆ ಅಡಿಯಲ್ಲಿ ಸರ್ಕಾರ 75 ಲಕ್ಷ ಹೊಸ ಕನೆಕ್ಷನ್ ಅನ್ನು ನೀಡುವಂತಹ ಕೆಲಸವನ್ನು ಕೂಡ ಮಾಡೋಕೆ ಸಿದ್ಧವಾಗಿದೆ. ದೇಶದ ಬಹುತೇಕ 60 ಪ್ರತಿಶತ ಸಿಲಿಂಡರ್ ಅವಶ್ಯಕತೆಯನ್ನು ಸರ್ಕಾರ ಪೂರೈಸುವಂತಹ ಗುರಿಯನ್ನು ಹೊಂದಿದೆ ಎಂದು ಹೇಳಬಹುದಾಗಿದೆ.

ಇನ್ನು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗ್ಯಾಸ್ ಬೆಲೆ ಏರಿಕೆ ಇಳಿಕೆ ಆಗಿರುವುದು ಯಾವುದೇ ಕಾರಣಕ್ಕೂ ಜನರ ಮೇಲೆ ಪರಿಣಾಮ ಬೀರಬಾರದು ಎನ್ನುವ ಕಾರಣಕ್ಕಾಗಿ ಈ ಯೋಜನೆಯ ಮೇಲೆ ಸರ್ಕಾರ ಸಬ್ಸಿಡಿ ದರವನ್ನು ನೀಡುತ್ತಿದೆ. ಹೀಗಾಗಿ ಉಜ್ವಲ್ ಗ್ಯಾಸ್ ಯೋಜನೆ (PM Ujjwala Yojana) ಅಡಿಯಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಖರೀದಿ ಮಾಡುತ್ತಿರುವವರಿಗೆ ಮುಂದಿನ ಮಾರ್ಚ್ ತಿಂಗಳವರೆಗೆ ಯಾವುದೇ ಕಾರಣಕ್ಕೂ ಕೂಡ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಯಾಕೆಂದರೆ 300 ರೂಪಾಯಿಗಳ ಭರ್ಜರಿ ಸಬ್ಸಿಡಿ ದೊರಕುತ್ತಿದೆ.

advertisement

Leave A Reply

Your email address will not be published.