Karnataka Times
Trending Stories, Viral News, Gossips & Everything in Kannada

LPG Cylinder: ಗುಡ್ ನ್ಯೂಸ್! ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಪಡೆಯಿರಿ ಕೇವಲ 600 ರೂ.ಗಳಿಗೆ!

advertisement

ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಇತ್ತೀಚೆಗೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ (LPG Cylinder) ಸಬ್ಸಿಡಿ ಕುರಿತಂತೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಈ ಬಗ್ಗೆ ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ (Hardeep Singh Puri) ಅವರು ಮಾಹಿತಿ ನೀಡಿದ್ದಾರೆ.

ಸಂಸತ್ತಿನಲ್ಲಿ ಬಡ ಕುಟುಂಬಗಳಿಗೆ ಅಗ್ಗದ ದರದಲ್ಲಿ ಅಡುಗೆ ಅನಿಲ ಒದಗಿಸಬೇಕು ಎನ್ನುವ ವಿಚಾರದ ಬಗ್ಗೆ ಕೂಲಂಕುಶವಾಗಿ ಚರ್ಚೆ ನಡೆಸಲಾಗಿತ್ತು ಎಂದು ಸಚಿವ ಹರದಿಪ್ ಸಿಂಗ್ ಪುರಿ ಅವರು ಹೇಳಿದ್ದಾರೆ ಸರ್ಕಾರ ಬಡವರಿಗೆ ಅತಿ ಕಡಿಮೆ ದರದಲ್ಲಿ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ (LPG Cylinder) ಒದಗಿಸಲು ಹೊಸ ಉಪಕ್ರಮ ಕೈಗೊಂಡಿದೆ ಎಂದು ಸಚಿವರು ತಿಳಿಸಿದ್ದಾರೆ.

ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ LPG Cylinder ಬೆಲೆ ಅತಿ ಕಡಿಮೆ:

ಗ್ಯಾಸ ಸಿಲೆಂಡರ್ ದರ (LPG Cylinder Price) ಭಾರತದಲ್ಲಿ ಜಾಸ್ತಿ ಎಂದೇ ನಾವು ಭಾವಿಸುತ್ತೇವೆ. ಆದರೆ ಭಾರತಕ್ಕಿಂತಲೂ ಇತರ ಹೊರ ರಾಷ್ಟ್ರಗಳಲ್ಲಿ ಎಲ್‌ಪಿಜಿ ಬೆಲೆ ಗಗನಕ್ಕೇರಿದೆ. ಉದಾಹರಣೆಗೆ ಪಾಕಿಸ್ತಾನ (Pakistan), ನೇಪಾಳ (Nepal), ಶ್ರೀಲಂಕಾ ಮೊದಲಾದ ರಾಷ್ಟ್ರಗಳಲ್ಲಿ ಭಾರತಕ್ಕಿಂತ ಎಲ್ ಪಿಜಿ ಸಿಲಿಂಡರ್ ಬೆಲೆ ಬಹಳ ಹೆಚ್ಚಾಗಿದೆ. ನಮ್ಮಲ್ಲಿ 900 ರೂಪಾಯಿಗಳಿಂದ ಸಬ್ಸಿಡಿ ಆಧಾರದ ಮೇಲೆ 600 ವರೆಗೂ ಎಲ್‌ಪಿಜಿ ಸಿಲಿಂಡರ್ ಲಭ್ಯವಿದೆ ಆದರೆ ಮೇಲೆ ಹೇಳಿದ ರಾಷ್ಟ್ರಗಳಲ್ಲಿ ಸಾವಿರಕ್ಕೂ ಅಧಿಕ ಹಣವನ್ನು ಪಾವತಿ ಮಾಡಿ ಅಡುಗೆ ಅನಿಲ ಖರೀದಿಸುವ ಪರಿಸ್ಥಿತಿ ಇದೆ ಎಂದು ಸಚಿವ ಹರದೀಪ್ ಮಾಹಿತಿ ನೀಡಿದ್ದಾರೆ.

PM Ujjwala Yojana ಅಡಿಯಲ್ಲಿ ಉಚಿತ ಗ್ಯಾಸ್ ಕನೆಕ್ಷನ್:

 

advertisement

 

ದೇಶದಲ್ಲಿ ವಾಸಿಸುವ ಬಡ ಹೆಣ್ಣು ಮಕ್ಕಳಿಗೆ ಅನುಕೂಲವಾಗಲು ಕೇಂದ್ರ ಸರ್ಕಾರ ಉಚಿತ ಗ್ಯಾಸ್ ಕನೆಕ್ಷನ್ (Free Gas Connection) ನೀಡುವುದು ಮಾತ್ರವಲ್ಲದೆ, ಪ್ರತಿ ಗ್ಯಾಸ್ ಸಿಲೆಂಡರ್ ಮೇಲೆ 300 ರೂಪಾಯಿಗಳ ವರೆಗೆ ಸಬ್ಸಿಡಿ ಕೂಡ ಘೋಷಿಸಿದೆ. ಇದೀಗ ಸಿಲಿಂಡರ್ ರಿಫಿಲ್ ನಲ್ಲಿಯೂ ಸುಧಾರಣೆಯಾಗಿದ್ದು 2019- 20 ರಲ್ಲಿ 3.1 ಸಿಲಿಂಡರ್ ಮರುಪೂರಣವಾಗಿದ್ದು ಈಗ ಅಂದರೆ 2023 24ರಲ್ಲಿ 3.8 ಪ್ರಮಾಣದಲ್ಲಿ ಏರಿಕೆಯಾಗಿದೆ.

ಕೇವಲ 600 ಕ್ಕೆ ಸಿಗುತ್ತೆ LPG Cylinder:

ಪ್ರಧಾನಮಂತ್ರಿಯ ಉಜ್ವಲ ಯೋಜನೆ (PM Ujjwala Yojana) ಯ ಅಡಿಯಲ್ಲಿ ಬಡವರಿಗೆ ಉಚಿತ ಗ್ಯಾಸ್ ಕನೆಕ್ಷನ್ ನೀಡುತ್ತಿರುವುದು ಮಾತ್ರವಲ್ಲದೆ 300 ರೂಪಾಯಿಗಳ ಸಬ್ಸಿಡಿ ಕೂಡ ನೀಡಲಾಗುತ್ತಿದೆ. ಹಾಗಾಗಿ 14.2 ಕೆಜಿ ಸಿಲಿಂಡರ್ ಇಂದು ದೆಹಲಿಯಲ್ಲಿ 600 ರೂಪಾಯಿಗಳಿಗೆ ಲಭ್ಯವಿದೆ. ಸಿಲಿಂಡರ್ ಖರೀದಿ ಮಾಡುವಾಗ ಗ್ರಾಹಕರು 903 ರೂಪಾಯಿಗಳನ್ನು ಪಾವತಿಸಬೇಕು ನಂತರ 300 ರೂಪಾಯಿಗಳ ಸಬ್ಸಿಡಿ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

PM Ujjwala Yojana ಗೆ ಇಂದೇ ಅರ್ಜಿ ಸಲ್ಲಿಸಿ:

ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ನೀವು ಕೂಡ ಉಚಿತ ಗ್ಯಾಸ್ ಕನೆಕ್ಷನ್ (Free Gas Connection) ಪಡೆದುಕೊಳ್ಳಲು ಅರ್ಹರಾಗಿದ್ದರೆ ಕೂಡಲೇ ಸರ್ಕಾರದ www.Pmuy.gov.in ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ನೀವು ಸರಿಯಾದ ಮಾಹಿತಿಯನ್ನ ನೀಡಿ ಗ್ಯಾಸ್ ಸಿಲೆಂಡರ್ ಪಡೆಯಲು ಬಯಸುವ ಕಂಪನಿಯ ಹೆಸರನ್ನು ಆಯ್ಕೆ ಮಾಡಿಕೊಳ್ಳಬೇಕು. ಮೂಲಕ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಅರ್ಜಿಗಳನ್ನು ಪರಿಶೀಲನೆ ಮಾಡಿ ನಂತರ ಕೆಲವೇ ದಿನಗಳಲ್ಲಿ ಅರ್ಹರಿಗೆ ಉಚಿತ ಗ್ಯಾಸ್ ಕನೆಕ್ಷನ್ ಹಾಗೂ ಸಬ್ಸಿಡಿ ಗ್ಯಾಸ್ ಸಿಲಿಂಡರ್ ನೀಡಲಾಗುತ್ತದೆ.

advertisement

Leave A Reply

Your email address will not be published.