Karnataka Times
Trending Stories, Viral News, Gossips & Everything in Kannada

Gold Rate: ಅಮೇರಿಕಾದಲ್ಲಿ ಭಾರತಕ್ಕಿಂತಲೂ ಕಡಿಮೆ ಬೆಲೆಗೆ ಚಿನ್ನ ಸಿಗುತ್ತಾ? ಅಮೆರಿಕದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು?

advertisement

ಭಾರತದಲ್ಲಿ ಚಿನ್ನ ಯಾರಿಗೆ ಇಷ್ಟ ಇಲ್ಲ ಹೇಳಿ ? ಚಿನ್ನ ಮತ್ತು ಚಿನ್ನದ ಆಭರಣಗಳು ಭಾರತದಲ್ಲಿ ಎಲ್ಲರಿಗೂ ಪ್ರಿಯವಾಗಿದೆ. ಮಗು ಆದಾಗಿನಿಂದ ಪ್ರಾರಂಭವಾಗಿ ಎಲ್ಲಾ ಸಂತೋಷದ ಸಂದರ್ಭದಲ್ಲಿ ಚಿನ್ನದ ಖರೀದಿ ಭಾರತದಲ್ಲಿ ಸಾಮಾನ್ಯ ಆಗಿದೆ. ಕೇವಲ ಇಂಥ ಸಂದರ್ಭದಲ್ಲಿ ಅಲ್ಲದೇ ಅಕ್ಷಯ ತೃತೀಯ ಮತ್ತು ಇನ್ನು ಹಲವು ಹಬ್ಬದ ಸಂದರ್ಭಗಳಲ್ಲಿ ಕೂಡ ಚಿನ್ನ ಖರೀದಿ (Gold Purchase) ಜೋರಾಗಿಯೇ ನಡೆಯುತ್ತದೆ. ಚಿನ್ನವನ್ನು ಕೇವಲ ಆಭರಣಗಳಿಗಾಗಿ ಮಾತ್ರ ಅಲ್ಲದೆ ಒಂದು ಹೂಡಿಕೆಯ ದೃಷ್ಟಿಯಿಂದಲೂ ಬಹಳ ಮಂದಿ ಖರೀದಿಸುತ್ತಾರೆ.

ಕಷ್ಟದ ಸಂದರ್ಭಗಳಲ್ಲೂ ಕೂಡ ನಮಗೆ ನಮ್ಮ ಬೇರೆ ಹೂಡಿಕೆಗಳಂತೆಯೇ ಚಿನ್ನ ನೆರವಾಗುತ್ತದೆ. ನಾವು ಇಂದು ತೆಗೆದುಕೊಂಡ ಚಿನ್ನಕ್ಕೆ ಖಂಡಿತವಾಗಿ ವರ್ಷಗಳು ಕಳೆದಂತೆ ಬೆಲೆ ಜಾಸ್ತಿ ಸಿಗುತ್ತಾ ಬರುತ್ತದೆ. ಹೀಗಾಗಿ ಒಂದು ವೇಳೆ ಯಾವುದೋ ಒಂದು ಕಷ್ಟದ ಸಂದರ್ಭ ಬಂದಾಗ ನಮ್ಮ ಬಳಿ ಚಿನ್ನ ಇದೆ ಎಂದಾದಲ್ಲಿ ನಾವು ನೆಮ್ಮದಿಯಿಂದ ಇರಬಹುದು. ಹಲವು ಕಮ್ ಬ್ಯಾಕ್ ಸ್ಟೋರಿ ಗಳಲ್ಲಿ ಕೊನೆಗೆ ಮನೆಯಲ್ಲಿದ್ದ ಚಿನ್ನವನ್ನೂ ಮಾರಿದೆ. ನಂತರ ಹಂತ ಹಂತವಾಗಿ ಬೆಳೆಯುತ್ತಾ ಬಂದೆ ಎಂಬ ಮಾತುಗಳನ್ನು ನೀವು ಕೇಳಿರಬಹುದು.

ದುಬೈಗಿಂತ ಕಡಿಮೆ ಬೆಲೆಗೆ ಚಿನ್ನ ಸಿಗುವ ದೇಶ ಇದೆಯೇ ?

 

advertisement

 

ಚಿನ್ನದ ದರಗಳು (Gold Rates) ಹೆಚ್ಚು ಕಮ್ಮಿ ಆಗುತ್ತಿರುತ್ತವೆ ಆದರೆ ವರ್ಷದಲ್ಲಿ ಆಗುವ ಬದಲಾವಣೆ ಗಮನಿಸಿದರೆ ಚಿನ್ನದ ಬೆಲೆಗಳು ಏರುಮುಖವಾಗಿಯೇ ಇರುತ್ತವೆ. ಭಾರತದಲ್ಲಿ ಪ್ರಸ್ತುತ 10 ಗ್ರಾಂ ಚಿನ್ನದ ಬೆಲೆ 63,000 ರೂಪಾಯಿಗಳ ಆಸುಪಾಸಿನಲ್ಲಿದೆ. ಹೀಗೆಂದು ಚಿನ್ನ ಖರೀದಿಸಿದೆ ಇರುವವರು ಇಲ್ಲ. ಯಾವ ಬೆಲೆಗಾದರೂ ಸರಿ ಚಿನ್ನ ಖರೀದಿ (Gold Purchase) ಮಾಡುವವರು ಖಂಡಿತ ಖರೀದಿ ಮಾಡಿಯೇ ಮಾಡಿರುತ್ತಾರೆ. ಆದರೆ ಭಾರತದಲ್ಲಿ ಈಗ ಇರುವ ಚಿನ್ನದ ಬೆಲೆಗಳಿಗಿಂತ ಕಡಿಮೆ ಬೆಲೆಗೆ ಚಿನ್ನ ಎಲ್ಲಾದರೂ ದೊರಕುತ್ತದೆಯೇ ? ಖಂಡಿತ ನಿಮ್ಮ ತಲೆಯಲ್ಲಿ ದುಬೈ ನ ಹೆಸರು ಓಡಾಡುತ್ತಿರಬಹುದು. ದುಬೈ (Dubai) ಮತ್ತು ಭಾರತದ ಚಿನ್ನದ ಬೆಲೆ (Gold Price) ಗಳಲ್ಲಿ ವ್ಯತ್ಯಾಸ ಇದ್ದರೂ ಬಹಳಷ್ಟಲ್ಲ. ಅದಕ್ಕಿಂತಲೂ ಕಮ್ಮಿ ಬೆಲೆಗೆ ಚಿನ್ನ ಸಿಗುವ ಜಾಗವನ್ನು ನಾವು ಇಂದು ಹೇಳಲಿದ್ದೇವೆ.

ಅಮೇರಿಕಾದಲ್ಲಿ ಭಾರತದ ಬೆಲೆಗಳಿಗಿಂತ ಕಡಿಮೆ ಬೆಲೆ ಚಿನ್ನ

ಅಮೆರಿಕದಲ್ಲಿ ಭಾರತಕ್ಕಿಂತ ಚಿನ್ನದ ಬೆಲೆ (Gold Rate) ಕಡಿಮೆ ಎಂದರೆ ನೀವು ನಂಬುತ್ತೀರಾ ? ನೀವು ನಂಬಲೇಬೇಕು. ಅಮೆರಿಕದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 650 ಡಾಲರ್ ಗಳಾಗಿದೆ ಇಂದಿನ ಎಕ್ಸ್ಚೇಂಜ್ ದರಗಳನ್ನು ಗಮನದಲ್ಲಿಟ್ಟುಕೊಂಡರೆ ಇದರ ಬೆಲೆ 53,500 ರೂಪಾಯಿಗಳ ಆಸು ಪಾಸು ಆಗುತ್ತದೆ. ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ 600 ಯು ಎಸ್ ಡಾಲರ್ ಆಗಿದೆ ಇದು ಭಾರತದ ರೂಪಾಯಿ ಮೌಲ್ಯಕ್ಕೆ ಬದಲಾಯಿಸಿದಾಗ ಸುಮಾರು 49,000 ರೂಪಾಯಿಗಳು ಆಗುತ್ತದೆ. ಹೀಗೆ ಅಮೆರಿಕದಲ್ಲಿ ಭಾರತಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಚಿನ್ನ ದೊರಕುತ್ತಿದೆ.

advertisement

Leave A Reply

Your email address will not be published.