Karnataka Times
Trending Stories, Viral News, Gossips & Everything in Kannada

Tata: ಟಾಟಾ ಸಂಸ್ಥೆಯಿಂದ ಬರಲಿದೆ 8 ಸೀಟರ್ ಕಾರು! ಅತ್ಯಂತ ಕಡಿಮೆ ಬೆಲೆ

advertisement

ಭಾರತದ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಈಗ ಮಾರುಕಟ್ಟೆಯಲ್ಲಿ ಪ್ರತಿಯೊಬ್ಬರು ಕೂಡ ಹೆಚ್ಚಿನ ಸೀಟಿಂಗ್ ಅಥವಾ ಸ್ಪೇಸ್ ವ್ಯವಸ್ಥೆಯನ್ನು ಹೊಂದಿರುವಂತಹ ಕಾರುಗಳ ಬೇಡಿಕೆ ಹೆಚ್ಚಾಗ್ತಾ ಇದೆ. ಈ ಬೇಡಿಕೆಯನ್ನು ಪೂರೈಸಲು ಎಲ್ಲರ ನಂಬಿಕೆ ಆಗಿರುವಂತಹ ಟಾಟಾ (Tata) ಕಂಪನಿ ಈಗ ಹೊಸ ಎಂಟು ಸೀಟ್ ಕಾರನ್ನು ಲಾಂಚ್ ಮಾಡೋದಕ್ಕೆ ತಯಾರಿ ನಡೆಸಿಕೊಳ್ಳುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ. ಹೌದು ನಾವ್ ಮಾತಾಡ್ತಾ ಇರೋದು ಟಾಟಾ ಸಂಸ್ಥೆ ಪರಿಚಯಿಸಲು ಹೊರಟಿರುವಂತಹ ಎಂಟು ಸೀಟ್ ಕಾರ್ ಆಗಿರುವ Tata Sumo 2024 ಬಗ್ಗೆ.

WhatsApp Join Now
Telegram Join Now

Tata Sumo 2024 Features and Price:

 

Image Source: Ecovahan.in

 

advertisement

Tata Sumo 2024 ಕಾರಣ ಇದೇ ವರ್ಷ ಲಾಂಚ್ ಮಾಡುವಂತಹ ತಯಾರಿಯನ್ನು ಟಾಟಾ (Tata) ಸಂಸ್ಥೆ ನಡೆಸಿಕೊಳ್ಳುತ್ತಿದೆ ಎಂಬುದಾಗಿ ತಿಳಿದು ಬಂದಿದ್ದು ಕೇವಲ ಎಂಟು ಸೀಟರ ಮಾತ್ರವಲ್ಲ 10 ಸೀಟರ್ ವೇರಿಯಂಟ್ ಅನ್ನು ಕೂಡ ಲಾಂಚ್ ಮಾಡುವ ಬಗ್ಗೆ ಟಾಟಾ ಸಂಸ್ಥೆ ಮಾಡಿದೆ ಎನ್ನುವ ಮಾಹಿತಿ ಸಿಕ್ಕಿದೆ. 10 ಇಂಚಿನ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಹಾಗೂ 8 ಇಂಚಿನ ಟಚ್ ಸ್ಕ್ರೀನ್ ಸಿಸ್ಟಮ್ ಅನ್ನು ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ.

ವಯರ್ಲೆಸ್ ಚಾರ್ಜಿಂಗ್, ಬೆಸ್ಟ್ ಕ್ವಾಲಿಟಿಯ ಮ್ಯೂಸಿಕ್ ಸಿಸ್ಟಮ್, ಉತ್ತಮ ಸ್ಟೇರಿಂಗ್ ವೀಲ್ ಹಾಗೂ 360 ಡಿಗ್ರಿ ಕ್ಯಾಮೆರಾ, ಅಡ್ಜಸ್ಟೇಬಲ್ ಸೀಟ್ ಹಾಗೂ ಎಸಿ, ಕ್ರೂಸ್ ಕಂಟ್ರೋಲ್, ಕ್ಲೈಮೇಟ್ ಕಂಟ್ರೋಲ್, ಅಲೆಕ್ಸಾ ಸೇರಿದಂತೆ ಸಾಕಷ್ಟು ಅಡ್ವಾನ್ಸ್ ಫೀಚರ್ ಗಳನ್ನು ನೀವು ಈ ಕಾರ್ ನಲ್ಲಿ ಕಾಣಬಹುದಾಗಿದೆ.

ಇನ್ನು ಕಾರಿನಲ್ಲಿ 2956 ಸಿಸಿ ನಾಲ್ಕು ಸಿಲಿಂಡರ್ ಡೀಸೆಲ್ ಇಂಜಿನ್ ಅನ್ನು ಅಳವಡಿಸುವಂತಹ ಯೋಜನೆಯ ಕಂಪನಿ ಹಾಕಿಕೊಂಡಿದೆ ಎನ್ನುವ ಮಾಹಿತಿ ಸಿಕ್ಕಿದೆ. ಪೆಟ್ರೋಲ್ ಇಂಜಿನ್ ಅನ್ನು ಕೂಡ ಕಾರಿನಲ್ಲಿ ಅಳವಡಿಸುವಂತಹ ಮಾತುಕತೆ ನಡಿತಾ ಇದೆ ಎನ್ನುವುದಾಗಿ ಕೂಡ ಸುದ್ದಿ ಇದೆ. ಮೈಲೇಜ್ ಬಗ್ಗೆ ಮಾತನಾಡುವುದಾದರೆ ಪ್ರತಿ ಲೀಟರ್ಗೆ 15 km ಮೈಲೇಜ್ ನೀಡುವಂತಹ ಮಾತುಕತೆ ಕೇಳಿಬರುತ್ತಿದೆ.

Tata Sumo 2024 ಕಾರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಎಂಟು ಸೀಟರ್ ಅಥವಾ ಅದಕ್ಕಿಂತ ಹೆಚ್ಚಿನ ಅವಕಾಶಗಳ ಜೊತೆಗೆ ಮಾರುಕಟ್ಟೆಗೆ ಬರಬಹುದಾಗಿದೆ. ಅಧಿಕೃತವಾಗಿ ಇದರ ಬೆಲೆಯನ್ನು ಅನೌನ್ಸ್ ಮಾಡಲಾಗಿಲ್ಲ ಆದರೂ ಕೂಡ ಮಾರುಕಟ್ಟೆಯಲ್ಲಿ ಇದು 5.26 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಮಾರಾಟಕ್ಕೆ ಸಿಗಲಿದೆ ಎಂಬುದಾಗಿ ತಿಳಿದು ಬಂದಿದೆ.

advertisement

Leave A Reply

Your email address will not be published.