Karnataka Times
Trending Stories, Viral News, Gossips & Everything in Kannada

Tata Sumo: ಮಾರುಕಟ್ಟೆಗೆ ಮತ್ತೆ ಬರಲಿರುವ ಟಾಟಾ ಸುಮೋದ ಬೆಲೆ ಹಾಗೂ ಫೀಚರ್ ವೈರಲ್! ಕಮ್ ಬ್ಯಾಕ್ ಮಾಡುತ್ತಿದೆ ಲೆಜೆನ್ಡ್

advertisement

ಟಾಟಾ ಸುಮೋ ಎಂಬ ಹೆಸರು ಸಾಮಾನ್ಯವಾಗಿ ಎಲ್ಲರೂ ಕೂಡ ತಿಳಿದಿರುತ್ತಾರೆ. ಕಾರಣ ಟಾಟಾ ಸುಮೊ ಎಂಬ ಕಾರು ಈಗಾಗಲೇ ಬಹಳಷ್ಟು ಜನಪ್ರಿಯತೆಯನ್ನು ಗಳಿಸಿದಂತಹ ಕಾರು ಎಂದು ಹೇಳಬಹುದು ಮತ್ತು ಭಾರತೀಯ SUV ಲ್ಯಾಂಡ್ ಸ್ಕೇಪ್ ಅಲ್ಲಿ ಪರಿಚಿತ ಹೆಸರು ಎಂದರೆ ತಪ್ಪಾಗಲಾರದು, ಇನ್ನು 2024 ರಲ್ಲಿ ಈಗ ಮತ್ತೋಮ್ಮೆ ಮಾರುಕಟ್ಟೆಯಲ್ಲಿ ಟಾಟಾ ಸುಮೊ (Tata Sumo) ಕಾರು ಭವ್ಯವಾದ ಪುನರಾಗಮನ ಆಗುತ್ತಿದೆ ಇದರ ಜೊತೆಗೆ ಹಲವು ಹೊಸ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಆಗಲು ಸಿದ್ಧವಾಗಿದೆ.

ಟಾಟಾ ಸುಮೊ (Tata Sumo) ಕಾರಿನ ಹೊಸ ಬದಲಾವಣೆ ಮತ್ತು ಫೀಚರ್ ಏನೆಂದು ತಿಳಿದುಕೊಳ್ಳೋಣ:

ಇನ್ನು ಟಾಟಾ ಸುಮೊ (Tata Sumo) ಕಾರು ದೃಢತೆ ಮತ್ತು ಪ್ರಾಯೋಗಿಕತೆಗೆ ಹೆಸರುವಾಸಿಯಾಗಿರುವ ವಾಹನವಾಗಿದೆ. ಇದೀಗ ಈ ಐಕಾನಿಕ್ ವಾಹನವು ಸಂಪೂರ್ಣ ಮೇಕ್‌ಓವರ್ ಪಡೆಯಲು ಮುಂದಾಗಿದೆ, ಆಧುನಿಕ ವೈಶಿಷ್ಟ್ಯಗಳು, ಡಿಸೈನಿಂಗ್ ವಿನ್ಯಾಸ ಮತ್ತು ಪ್ರಭಾವಶಾಲಿ ಇಂಧನ ದಕ್ಷತೆಯ ಭರವಸೆ, ಎಂಜಿನ್ ವಿಶೇಷತೆ ಜೊತೆಗೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. 2024 ರ ಅಂತ್ಯದ ವೇಳೆಗೆ ಅಧಿಕೃತವಾಗಿ ಬಿಡುಗಡೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ, ಜೊತೆಗೆ 2025 ರ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ವ್ಯಾಪಕ ಲಭ್ಯತೆ ಇರುತ್ತದೆ ಎಂದು ತಿಳಿದುಬಂದಿದೆ. ಇದರಲ್ಲಿ ಅಳವಡಿಸಲಾಗಿರುವ ಸುರಕ್ಷಿತ ಕ್ರಮಗಳು ಯಾವುದು ಎಂದು ನೋಡುವುದಾದರೆ.

 

Image Source: Today Samachar

 

ಸುರಕ್ಷತಾ ಶೀಲ್ಡ್ (Safety Shield):

ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಇವುಗಳು ಅನಿರೀಕ್ಷಿತ ಘಟನೆಯ ಸಂದರ್ಭದಲ್ಲಿ ನಿವಾಸಿಗಳನ್ನು ರಕ್ಷಿಸಲು ಒಟ್ಟಿಗೆ ಕೆಲಸ ಮಾಡುತ್ತದೆ.

advertisement

ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS):

ಅಡ್ಜೆಸ್ಟ್ ಬಲ್ ಆಸನಗಳು, ಪ್ಯಾನೋರೋಮಿಕ್ ಸನ್‌ರೂಫ್, ಕ್ರೂಸ್ ನಿಯಂತ್ರಣದಂತಹ ವೈಶಿಷ್ಟ್ಯಗಳು ದೀರ್ಘ ಪ್ರಯಾಣದ ಸಮಯದಲ್ಲಿ ಸೌಕರ್ಯವನ್ನು ಹೆಚ್ಚಿಸುತ್ತವೆ. ಮತ್ತು 360-ಡಿಗ್ರಿ ಕ್ಯಾಮೆರಾ, ಪಾರ್ಕಿಂಗ್ ಕುಶಲತೆ ಮತ್ತು ಒಟ್ಟಾರೆ ಚಾಲನಾ ಜಾಗೃತಿಯನ್ನು ಹೆಚ್ಚಿಸುತ್ತದೆ.

Tata Sumo Features:

Image Source: PUNE.NEWS

 

ಇನ್ನು ಟಾಟಾ ಸುಮೊ (Tata Sumo), ಟಾಟಾ ಹ್ಯಾರಿಯರ್‌ನಲ್ಲಿ ಕಂಡುಬರುವ 2.0-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೋಲುತ್ತದೆ. ಮತ್ತು 170 bhp ಪವರ್ ಮತ್ತು 350 Nm ಟಾರ್ಕ್ ಅನ್ನು ನೀಡುತ್ತದೆ. ಮತ್ತು ಟಾಟಾ ಕಂಪನಿಯು ತನ್ನ ಇಂಧನ-ಸಮರ್ಥ ಎಂಜಿನ್‌ಗಳಿಗೆ ಹೆಸರುವಾಸಿಯಾಗಿದೆ. ಮತ್ತು ಸುಮೊ 2024 ಈ ಸಂಪ್ರದಾಯವನ್ನು ಮುಂದುವರಿಸುವ ನಿರೀಕ್ಷೆಯಿದೆ. 35 kmpl ಮೈಲೆಜ್ ಸಹ ನೀಡುತ್ತದೆ ಎನ್ನಲಾಗಿದೆ. ಮತ್ತು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ನೀಡಲಾಗಿದೆ. ಮತ್ತು ಇದರ ಮುಂಭಾಗದಲ್ಲಿ ಹೊಸ LED DRL ಗಳು, LED ಹೆಡ್‌ಲೈಟ್‌ಗಳನ್ನು ಅಳವಡಿಸಲಾಗಿದೆ.

ಡೈನಾಮಿಕ್ ಸೈಡ್ ಪ್ರೊಫೈಲ್ ಜೊತೆಗೆ ಡೈಮಂಡ್-ಕಟ್ Alloy Tyre ಮತ್ತು ಟೈಲ್‌ ಲೈಟ್‌ಗಳು (Taillights) ಸುಮೋ 2024ಕ್ಕೆ ಹೆಚ್ಚು ಕ್ರಿಯಾತ್ಮಕ ನೋಟವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಜೊತೆಗೆ ಸುಧಾರಿತ ಏರೋಡೈನಾಮಿಕ್ಸ್ (Aero Dynamics) ಮತ್ತು ಮುಂಭಾಗದಲ್ಲಿ ಪವರ್ ಸ್ಟೀರಿಂಗ್ (Power Steering),ಕ್ರೂಸ್ ನಿಯಂತ್ರಣ, Fog light,ಪವರ್ ವಿಂಡೋಸ್ (Power Windows) ಜೊತೆಗೆ ಆರಾಮದಾಯಕ ಆಸನಗಳನ್ನು ನೀಡಲಾಗಿದೆ.

ಇದರಲ್ಲಿ ಸ್ಯಾವಿ ಇಂಟಿಗ್ರೇಶನ್ (Tech Savvy Integration) ಎಂಬ ತಂತ್ರಾಜ್ಞಾನವನ್ನು ಬಳಸಲಾಗಿದ್ದು, ವೈರ್‌ಲೆಸ್ ಆಂಡ್ರಾಯ್ಡ್ ಆಟೋ (Wireless Android Auto) ಮತ್ತು ಆಪಲ್ ಕಾರ ಪ್ಲೇ ಸಂಪರ್ಕದಂತಹ ವೈಶಿಷ್ಟ್ಯಗಳೊಂದಿಗೆ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (Infotainment system) ನೀಡಲಾಗಿದೆ. ಜೊತೆಗೆ ಪ್ರೀಮಿಯಂ ಲೆದರ್ ಸೀಟ್‌ಗಳು ಮತ್ತು ಇದರೊಂದಿಗೆ ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್ ವಿನ್ಯಾಸ (Dashboard Design) ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್ (Instrument Cluster) ಅನ್ನು ಅಳವಡಿಸಲಾಗಿದೆ. ಮತ್ತು ಅನೇಕ ವಿಧವಾದ ಬದಲಾವಣೆಯೊಂದಿಗೆ ಈ ಬಾರಿ 2024ರಲ್ಲಿ ಟಾಟಾ ಸುಮೊ ಬಹಳಷ್ಟು ಗಮನ ಸೆಳೆಯುವದಕ್ಕೆ ಮುಂದಾಗಿದೆ . ಈಗಾಗಲೇ ಇದರ ಸಾಕಷ್ಟು ಡಿಸೈನ್ ನ ಚಿತ್ರಗಳು ವೈರಲ್ ಆಗಿವೆ ಬೆಲೆ ಸುಮಾರು 15 ಲಕ್ಷದಿಂದ ಆರಂಭವಾಗಲಿದೆ.

advertisement

Leave A Reply

Your email address will not be published.