Karnataka Times
Trending Stories, Viral News, Gossips & Everything in Kannada

General Category: 35 ಕ್ಕಿಂತ ಹೆಚ್ಚು ವಯಸ್ಸಿನ ಜನರಲ್ ಕ್ಯಾಟಗರಿಯ ಜನರಿಗೆ ಸಿಹಿಸುದ್ದಿ!

advertisement

35 ವರ್ಷಕ್ಕಿಂತ ಹೆಚ್ಚಿನ ವಯಸ್ಸಾಗಿರುವಂತಹ General Category ಜನರಿಗೆ ಸರ್ಕಾರಿ ವಲಯದಲ್ಲಿ ಇರುವಂತಹ ಕೆಲವೊಂದು ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಆಹ್ವಾನ ನೀಡುತ್ತದೆ. ಹುದ್ದೆ ಭರ್ತಿಗಾಗಿ ಪರೀಕ್ಷೆಯನ್ನು ಕೂಡ ನಡೆಸಲಾಗುತ್ತದೆ ಹಾಗೂ ನಾಗರಿಕ ಸೇವೆ, ರಾಜ್ಯ ಆಡಳಿತ ಸೇವೆಗಳ ಹುದ್ದೆಗಳಲ್ಲಿ ಅಥವಾ ಪೊಲೀಸ್ ಹುದ್ದೆಗಳಲ್ಲಿ ಇವುಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ 35 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಜನರಲ್ ಕ್ಯಾಟಗರಿಯ ಜನರನ್ನು ಕೆಲವೊಂದು ಪ್ರಮುಖ ಹುದ್ದೆಗಳಿಗಾಗಿ ಕೂಡ ಆಯ್ಕೆ ಮಾಡಲಾಗುತ್ತದೆ. ಅವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

35 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ General Category ವಿಭಾಗದ ಜನರಿಗೆ ಸಿಗುವಂತಹ ಸರ್ಕಾರಿ ಕೆಲಸಗಳು:

ಸರ್ಕಾರ 35 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಜನರಿಗೆ ಸಾಕಷ್ಟು ವಿಭಾಗಗಳಲ್ಲಿ ಸರ್ಕಾರಿ ಕೆಲಸಕ್ಕೆ ಆಯ್ಕೆ ಮಾಡುವಂತಹ ಪ್ರಕ್ರಿಯೆಯನ್ನು ಪ್ರಾರಂಭಿಸಿ. ಈ ಹುದ್ದೆಗಳಲ್ಲಿ ಆಯ್ಕೆ ಆಗುವಂತಹ ಜನರಿಗೆ ಸ್ಪರ್ಧಾತ್ಮಕ ಸಂಬಳವನ್ನು ನೀಡುವುದು ಮಾತ್ರವಲ್ಲದೆ ತಮ್ಮ ಕೆಲಸದಲ್ಲಿ ಪ್ರಗತಿಯನ್ನು ಹೊಂದುವಂತಹ ಅವಕಾಶವನ್ನು ಕೂಡ ನೀಡಲಾಗುತ್ತದೆ. ಪಬ್ಲಿಕ್ ಸರ್ವಿಸ್ ಕಮಿಷನ್ (Public Service Commission) ಭರ್ತಿ ಆಯ್ಕೆಗಾಗಿ ಎಕ್ಸಾಮ್ ಅನ್ನು ಕೂಡ ಇರಿಸುತ್ತದೆ. ಪ್ರತಿ ವರ್ಷಕ್ಕೆ 100 ರಿಂದ 200 ಹುದ್ದೆಗಳಷ್ಟು ಡೆಪ್ಯುಟಿ ಕಲೆಕ್ಟರ್, ತಹಶೀಲ್ದಾರ್ ಹಾಗೂ ಜಿಲ್ಲಾ ರಿಜಿಸ್ಟರ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

Image Source: Mint

advertisement

ಇದು ರಾಜ್ಯ ಸರ್ಕಾರ (State Govt)ದ ಕೆಲಸವಾದ ಇನ್ನು ಕೇಂದ್ರ ಸರ್ಕಾರ (Central Govt)ಟಾಪ್ ಸೆಲೆಕ್ಷನ್ ಕಮಿಷನ್ ಸಂಸ್ಥೆಯ ವತಿಯಿಂದ ಇನ್ಸ್ಪೆಕ್ಟರ್, ಆಡಿಟರ್ (Auditor) ಹಾಗೂ ಇನ್ಕಮ್ ಟ್ಯಾಕ್ಸ್ (Income Tax), ಕಸ್ಟಮ್ ಹಾಗೂ ಸೆಂಟ್ರಲ್ ಎಕ್ಸೈಸ್ ವಿಭಾಗದಲ್ಲಿ ಅಸಿಸ್ಟೆಂಟ್ಗಳನ್ನು ಆಯ್ಕೆ ಮಾಡುತ್ತದೆ. ವರ್ಷಕ್ಕೆ ಈ ಹುದ್ದೆಗಳಲ್ಲಿ 500 ರಿಂದ 800 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಹುದ್ದೆಗಳ ಆಧಾರದ ಮೇಲೆ ಎರಡರಿಂದ ಐದು ವರ್ಷಗಳ ಅನುಭವವನ್ನು ಹೊಂದಿರುವಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. 35 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಅಭ್ಯರ್ಥಿಗಳನ್ನು ಈ ಕೆಲಸಗಳಿಗಾಗಿ ಸರ್ಕಾರ ಆಯ್ಕೆ ಮಾಡುತ್ತದೆ ಹಾಗೂ ಅವರು ದೇಶದ ಅಭಿವೃದ್ಧಿಯಲ್ಲಿ ತಮ್ಮ ಕೊಡುಗೆಯನ್ನು ಈ ಕೆಲಸಗಳ ಮೂಲಕ ನೀಡಬಹುದಾಗಿದೆ.

ಪಬ್ಲಿಕ್ ಸೆಕ್ಟರ್ ನಲ್ಲಿ ಮಾತನಾಡುವುದಾದರೆ ಇಲ್ಲಿ ಕೂಡ 35 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಜನರಿಗೆ ಜಾಬ್ ಆಫರ್ ಮಾಡಲಾಗುತ್ತಿದೆ. BHEL, ONGC, SAIL ಹಾಗೂ NTPC ಗಳಲ್ಲಿ ಸಾಮಾನ್ಯವಾಗಿ ಮ್ಯಾನೇಜರ್ ಪೋಸ್ಟ್ ಗಳಿಗೆ ಅಭ್ಯರ್ಥಿಗಳನ್ನು ಆಹ್ವಾನ ಮಾಡಲಾಗುತ್ತದೆ. ಇಲ್ಲಿ ಮ್ಯಾನೇಜರ್ (Manager), ಜನರಲ್ ಮ್ಯಾನೇಜರ್ (General Manager), ಸೀನಿಯರ್ ಮ್ಯಾನೇಜರ್ (Senior Manager) ಗಳಂತಹ ಪೋಸ್ಟ್ಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇವುಗಳ ಜೊತೆಗೆ ಚೀಫ್ ಇಂಜಿನಿಯರ್ ಸೀನಿಯರ್ ಇಂಜಿನಿಯರ್ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಗಳಂತಹ ಪೋಸ್ಟ್ ಗಳಿಗೆ ಕೂಡ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇಂತಹ ಹುದ್ದೆಗಳಿಗೆ ಸರ್ಕಾರದಿಂದ ಉತ್ತಮ ಸಂಬಳದ ಪ್ಯಾಕೇಜ್ ಜೊತೆಗೆ ಸರಿಯಾದ ಜಾಬ್ ಸೆಕ್ಯೂರಿಟಿಯನ್ನು ಕೂಡ ನೀಡಲಾಗುತ್ತದೆ.

Image Source: The Insider Talk

ಈ ಕೆಲಸಗಳನ್ನು ಯಾವ ರೀತಿಯಲ್ಲಿ ಪಡೆದುಕೊಳ್ಳುವುದು?

  • ಇದಕ್ಕಾಗಿ ನೀವು ಉತ್ತೀರ್ಣರಾಗಬೇಕಾಗಿರುವಂತಹ ಎಕ್ಸಾಮ್ ಗಾಗಿ ಸರಿಯಾದ ರೀತಿಯಲ್ಲಿ ಮುಂಚೇನೆ ಪ್ರಿಪೇರ್ ಆಗುವುದು ಉತ್ತಮವಾಗಿರುತ್ತದೆ. ಈ ಹಿಂದೆ ಬಂದಿರುವಂತಹ ಎಕ್ಸಾಮ್ ಗಾಗಿ ಬಂದಿರುವಂತಹ ಪ್ರಶ್ನೆಗಳನ್ನು ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡಿ ಹಾಗೂ ಎಕ್ಸಾಮ್ ಬರುವುದಕ್ಕಿಂತ ಮುಂಚೆನೆ ನೀವೇ ನಿಮ್ಮ ಮೇಲೆ ಒಂದು ಪರೀಕ್ಷೆಯನ್ನು ಸಿದ್ಧಪಡಿಸಿ ಅದರಲ್ಲಿ ಉತ್ತೀರ್ಣರಾಗೋದಕ್ಕೆ ಪ್ರಯತ್ನ ಪಡಿ.
  • ಎಲ್ಲದಕ್ಕಿಂತ ಮೊದಲನೇದಾಗಿ ಹಾಗೂ ಪ್ರಮುಖವಾಗಿ ಸದ್ಯಕ್ಕೆ ನಡೆಯುತ್ತಿರುವಂತಹ ಕರೆಂಟ್ ಅಫೇರ್ಸ್ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಪ್ಡೇಟೆಡ್ ಆಗಿ ಇಟ್ಟುಕೊಳ್ಳಿ. ಇದರಿಂದ ನೀವು ಈ ಎಕ್ಸಾಮ್ ಗಳನ್ನು ಪಾಸ್ ಮಾಡುವುದಕ್ಕೆ ಸಹಾಯಕವಾಗುತ್ತದೆ.

advertisement

Leave A Reply

Your email address will not be published.