Karnataka Times
Trending Stories, Viral News, Gossips & Everything in Kannada

Ration Card: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಮುನ್ನ ಸರ್ಕಾರದ ಸುತ್ತೋಲೆ!

advertisement

ರೇಷನ್ ಕಾರ್ಡ್ ಇಂದು ಪ್ರತಿಯೊಬ್ಬರಿಗೂ ಪ್ರಮುಖ ದಾಖಲೆಯಾಗಿದ್ದು, ಹೊಸ ರೇಷನ್ ಕಾರ್ಡ್ (Ration Card) ಪಡೆಯಲು ಹೆಚ್ಚಿನ ಜನರು ಕಾತುರದಿಂದ ಕಾಯುತ್ತಿದ್ದಾರೆ.‌ ರೇಷನ್‌ ಕಾರ್ಡ್‌ ಇದ್ದವರಿಗೆ ಸರ್ಕಾರದ ಹಲವಷ್ಟು ಯೋಜನೆ ಗಳು ದೊರಕುತ್ತಿದ್ದು ಗ್ಯಾರಂಟಿ ಯೋಜನೆಗಳ ಸೌಲಭ್ಯ ವನ್ನು ಪಡೆಯಲು ಸಹ ಅನುಕೂಲ ಆಗುತ್ತಿದೆ. ಈಗಾಗಲೇ ಅನ್ನಭಾಗ್ಯ ಯೋಜನೆಗೆ (Anna Bhagya Yojana), ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಗೆ ರೇಷನ್‌ ಕಾರ್ಡ್‌ ಕಡ್ಡಾಯ ಮಾಡಿದ್ದು, ರೇಷನ್ ಕಾರ್ಡ್ ಸಮಸ್ಯೆ ಯಿಂದ ಹೆಚ್ಚಿನ ಜನರಿಗೆ ಈ ಸೌಲಭ್ಯ ದೊರಕುತ್ತಿಲ್ಲ. ಹಾಗಾಗಿ ಇದೀಗ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಲು ಸಮಯಾವಕಾಶ ವನ್ನು ಸರಕಾರ ನೀಡಿದೆ.

Ration Card ಹಳೆ ಅರ್ಜಿ ಪರಿಶೀಲನೆ:

 

Image Source: Times Now News

 

ರೇಷನ್ ಕಾರ್ಡ್ (Ration Card) ವಿತರಣೆ ಬಗ್ಗೆ ಸಚಿವ ಕೆ.ಎಚ್.ಮುನಿಯಪ್ಪ (KH Muniyappa) ಅವರು ಮಾಹಿತಿ ನೀಡಿದ್ದು ಈಗಾಗಲೇ ಈ ಮೊದಲು ಅರ್ಜಿ ಸಲ್ಲಿಕೆ ಮಾಡಿರುವ ದಾಖಲೆಗಳನ್ನು ಪರಿಶೀಲಿಸಿ ಈ ತಿಂಗಳ ಒಳಗೆ ರೇಷನ್ ಕಾರ್ಡ್ ಅನ್ನು ಆದಷ್ಟು ಬೇಗ ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ. ಇನ್ನು ಎಪ್ರಿಲ್ 1 ರ ನಂತರ ಹೊಸದಾಗಿ ರೇಷನ್ ಕಾರ್ಡ್ (Ration Card) ಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಗಮನ ವಹಿಸಿ:

 

advertisement

Image Source: DNA India

 

  • ರೇಷನ್ ಕಾರ್ಡ್ ಗೆ ಅರ್ಜಿ ಹಾಕುವ ಮುನ್ನ ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೆಟ್ ಮಾಡಿಕೊಳ್ಳಿ
  • ಒಂದು ಊರಿನಿಂದ ಇನ್ನೊಂದು ಊರಿಗೆ ವಿಳಾಸವನ್ನು ಬದಲಾವಣೆ ಮಾಡಿದರೆ ನಿಮ್ಮ ಪ್ರಮುಖ ದಾಖಲೆಗಳಲ್ಲಿ ಈ ಮಾಹಿತಿ ಸರಿಪಡಿಸಿಕೊಂಡು ಹೊಸ ರೇಷನ್ ಕಾರ್ಡ್‌ನ್ನು ಮಾಡಿಸಬೇಕಾಗುತ್ತದೆ.
  • ಹೊಸದಾಗಿ ಮದುವೆಯಾದ ದಂಪತಿಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
  • ಪ್ರತ್ಯೇಕ ವಾಗಿ ವಾಸಿಸಿರುವ ಕುಟುಂಬ ಅರ್ಜಿ ಹಾಕಬಹುದು
  • ಹಳೆಯ ರೇಷನ್ ಕಾರ್ಡ್ ಕಳೆದುಕೊಂಡಿದ್ದರೆ ಅರ್ಜಿ ಹಾಕಬಹುದು.

ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಲು ಆಹಾರ ಇಲಾಖೆಯ ಸೈಟಸ್ ಆದ http://ahara.kar.nic.in ಇಲ್ಲಿ ಅಪ್ಲೈ ಮಾಡಬಹುದಾಗಿದೆ. ಇಲ್ಲದಿದ್ದಲ್ಲಿ ನಿಮ್ಮ ಹತ್ತಿರದ ಸೇವಾ ಕೇಂದ್ರ ಗಳಲ್ಲಿ ಅರ್ಜಿ ಹಾಕಬಹುದು.

Ration Card ಗೆ ಅರ್ಜಿ ಹಾಕಿದ ನಂತರ ಪರಿಶೀಲನೆ ಮಾಡಿ:

ಮೊದಲಿಗೆ ಈ ಲಿಂಕ್ ಗೆ ಭೇಟಿ ನೀಡಿ https://ahara.kar.nic.in/Home/EService ನಂತರ, e-Status ಮೇಲೆ ಕ್ಲಿಕ್ ಮಾಡಿ. ಇಲ್ಲಿ New/Existing RC Request Status ಮೇಲೆ ಕ್ಲಿಕ್ ಮಾಡಿ , ಬಳಿಕ ಹೊಸ ಪಡಿತರ ಚೀಟಿಯ ಅರ್ಜಿಯ ಸ್ಥಿತಿ ಮೇಲೆ ಕ್ಲಿಕ್ ಮಾಡಿ ನಿಮ್ಮ ಗ್ರಾಮ , ಊರು ಸೆಲೆಕ್ಟ್ ಮಾಡಿದ ನಂತರ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ ಸ್ವೀಕೃತಿ ಸಂಖ್ಯೆ ಹಾಕಿ GO ಆಪ್ಚನ್ ಮೇಲೆ ಕ್ಲಿಕ್ ಮಾಡಿ, ಅರ್ಜಿ ಸ್ವೀಕೃತಿ ಆಗಿರುವ ಬಗ್ಗೆ ತಿಳಿದುಕೊಳ್ಳಿ.

advertisement

Leave A Reply

Your email address will not be published.