Karnataka Times
Trending Stories, Viral News, Gossips & Everything in Kannada

House Construction: ಎಲೆಕ್ಷನ್ ಬೆನ್ನಲ್ಲೇ ಮನೆ ಕಟ್ಟುವವರಿಗೆ ಗುಡ್ ನ್ಯೂಸ್! ಕುಸಿದ ಈ ವಸ್ತುಗಳ ದರ

advertisement

ಮನೆ ಕಟ್ಟಿ ನೋಡು ಎಂಬ ಮಾತಿದೆ. ಮನೆ ಕಟ್ಟುವುದು (House Construction) ಪ್ರಸ್ತುತ ಜಗತ್ತಿನಲ್ಲಿ ಸಾಧಾರಣ ಕೆಲಸ ಅಲ್ಲ ಎಂಬುದು ಈ ಮಾತಿನ ಒಂದು ಅರ್ಥವಾಗಿದೆ. ಮನೆ ಕಟ್ಟುವುದು ಎಂದರೆ ಅದಕ್ಕೆ ಕಟ್ಟಡ ಸಾಮಾಗ್ರಿಯಿಂದ ಪ್ರತಿಯೊಂದಕ್ಕೂ ಬೆಲೆ ಕಟ್ಟಬೇಕಾಗುತ್ತದೆ. ಮನೆ ಕಟ್ಟುವ ಸಾಮಾಗ್ರಿಗಳ ಬೆಲೆ ಅಧಿಕವಾದ ನಿಟ್ಟಿನಲ್ಲಿ ಮನೆ ಕಟ್ಟುವುದು ಕೂಡ ಒಂದು ಕಷ್ಟದ ಕೆಲಸವಾಗಿ ಮಾರ್ಪಾಡಾಗಿದೆ.

ಮನೆ ಕಟ್ಟಲು ಇಂದು ಸರಕಾರದಿಂದ ಕೂಡ ಸಾಲ, ಸಹಾಯಧನ ವಿತರಣೆ ಇತರ ಸೌಲಭ್ಯ ನೀಡಲಾಗುತ್ತಿದ್ದರೂ ಮನೆ ಕಟ್ಟುವುದು ದೊಡ್ಡ ಖರ್ಚು ಎಂದು ಭಾವಿಸಿ ಮನೆ ಕಟ್ಟದೆ ಬಾಡಿಗೆ ಮನೆ ವಾಸ ಸಾಕೆಂದವರು ಇರುವುದನ್ನು ನಾವು ಕಾಣಬಹುದು. ಹಾಗಾಗಿ ಮನೆ ಕಟ್ಟುವವರಿಗೆ ಹೆಚ್ಚುವರಿ ವೆಚ್ಚ ತಗ್ಗಲಿದೆ ಎಂಬ ಬಗ್ಗೆ ಮಹತ್ವದ ಮಾಹಿತಿ ಬಂದಿದ್ದು ಈ ಮಾಹಿತಿಯನ್ನು ತಪ್ಪದೇ ಪೂರ್ತಿ ಓದಿ.

ವೆಚ್ಚ ಕಡಿಮೆ ಆಗಲಿದೆ:

ಮನೆ ಕಟ್ಟಲು ಕಬ್ಬಿಣದ ಬಾರ್ ಗಳು (TMT Bars) ತುಂಬಾ ಬೇಕು. ಆದರೆ ಇವುಗಳ ಬೆಲೆಯೂ ಕಳೆದ ಎರಡು ತಿಂಗಳಿಂದ ಏರು ಪೇರಾಗಿರುವುದನ್ನು ನಾವು ಕಾಣಬಹುದು. ಕಬ್ಬಿಣದ ಬಾರ್ ಗಳು ಫೆಬ್ರವರಿಯಲ್ಲಿ ಕಡಿಮೆ ಇದ್ದ ಬೆಲೆ ಮಾರ್ಚ್ ತಿಂಗಳಂದು ಏರಿಕೆಯಾಗಿತ್ತು. ಇದೀಗ ಇದರ ಬೆಲೆ ಮತ್ತೆ ತಗ್ಗಲಿದೆ ಎಂದು ತಿಳಿದು ಬಂದ ಹಿನ್ನೆಲೆ ಹೊಸದಾಗಿ ಮನೆ ಕಟ್ಟಬೇಕು ಎಂದು ಕಾದವರಿಗೆ ಇದೊಂದು ಶುಭ ಸುದ್ದಿಯಾಗಲಿದೆ ಎಂದು ಹೇಳಬಹುದು.

 

Image Source: bharat steels

 

advertisement

ಇತರ ಬೆಲೆ ಹಾಗೆ ಇದೆ:

ಮನೆಗಾಗಿ ಅಥವಾ ಕಟ್ಟಡ ನಿರ್ಮಾಣ (House Construction) ಮಾಡುವಾಗ ಕಬ್ಬಿಣದ ಬಾರ್ ಗಳು (TMT Bars) ತುಂಬಾ ಹೆಚ್ಚು ಬಳಕೆ ಮಾಡಲಾಗುತ್ತದೆ. ಹಾಗಾಗಿ ಇದು ಮನೆ ಕಟ್ಟುವವರಿಗೆ ಅನುಕೂಲ ವಾಗಲಿದೆ. ಮತ್ತು ಭಾರಿ ಮೊತ್ತದ ಉಳಿತಾಯ ಕೂಡ ಆಗಲಿದೆ. ಹಾಗಿದ್ದರೂ ಇತರ ಸಾಮಾಗ್ರಿಗಳಾದ ಮರಳು, ಇಟ್ಟಿಗೆ, ಸಿಮೆಂಟ್ (Cement) ಇತರ ಸಾಮಾಗ್ರಿಯ ಬೆಲೆ ಸ್ಥಿರವಾಗಿಯೇ ಇದೆ ಬೆಲೆ ಇಳಿಕೆ ಆಗಿಲ್ಲ ಎನ್ನಬಹುದು. ಹಾಗಿದ್ದರೂ ಮನೆ ಕಟ್ಟುವವರಿಗೆ ಅಗ್ಗದ ಕಬ್ಬಿಣ ಬಾರ್ ಮೂಲಕ ದೊಡ್ಡ ಮಟ್ಟದ ಉಳಿತಾಯ ಮಾಡಬಹುದು.

 

 

ಬೆಲೆ ಏರುವ ಸಾಧ್ಯತೆ ಇದೆ:

ಮನೆ ಕಟ್ಟಬೇಕು ಎನ್ನುವವರು ಎಪ್ರಿಲ್ ಒಳಗೆ ಕಬ್ಬಿಣದ ಬಾರ್ ಖರೀದಿ ಮಾಡುವುದು ಉತ್ತಮ ಇಲ್ಲವಾದರೆ ಮುಂದಿನ ದಿನಗಳಲ್ಲಿ ಇಯರ್ ಆ್ಯಂಡ್ ಹಾಗೂ ಲೋಕಸಭೆ ಚುನಾವಣೆ ಇರುವ ಕಾರಣ ನಿಮಗೆ ಅಲ್ಲಿ ತನಕ ಬೆಲೆ ಏರಿಕೆ ಇರಲಾರದು ಚುನಾವಣೆ ಎಲ್ಲ ಮುಗಿದ ಬಳಿಕ ರಿಯಲ್ ಎಸ್ಟೇಟ್ ವ್ಯವಹಾರ ಮತ್ತೆ ವೇಗ ಪಡೆಯಲಿದ್ದು ಕಟ್ಟಡ ಮತ್ತು ಮನೆ ನಿರ್ಮಾಣದ ಎಲ್ಲ ಅಗತ್ಯ ಸಾಮಾಗ್ರಿ ಬೆಲೆ ಏರಲಿದೆ. ಹಾಗಾಗಿ ಇಳಿಕೆಯಾದ ಕಬ್ಬಿಣದ ಬಾರ್ ಬೆಲೆ ಸಹ ಏರುವ ಸಾಧ್ಯತೆ ಇದೆ ಹಾಗಾಗಿ ಕೂಡಲೇ ಖರೀದಿ ಮಾಡುವುದು ನಿಮಗೆ ಲಾಭ ತಂದುಕೊಡಲಿದೆ.

advertisement

Leave A Reply

Your email address will not be published.