Karnataka Times
Trending Stories, Viral News, Gossips & Everything in Kannada

Tata Sumo SUV: ಭಾರತಕ್ಕೆ ಮತ್ತೆ ಕಾಲಿಡಲಿದೆ ಟಾಟಾದ ಈ ಮಹಾನ್ ಕಾರು! ಮಿಡಲ್ ಕ್ಲಾಸ್ ಜನರ ಕನಸು, ಕಡಿಮೆ ಬೆಲೆಗೆ

advertisement

ದೇಶೀಯ ವಾಹನ ತಯಾರಿಕಾ ಕಂಪನಿಗಳಲ್ಲಿ ಟಾಟಾ ಮೋಟರ್ಸ್‌ನದ್ದು ದೊಡ್ಡ ಹೆಸರು. ಟಾಟಾದ ಸಾಕಷ್ಟು ಮಾದರಿಗಳು ಈಗಾಗಲೇ ಭಾರತದ ರಸ್ತೆಯಲ್ಲಿ ಆಳ್ವಿಕೆ ನಡೆಸುತ್ತಿವೆ. ಅವುಗಳಲ್ಲಿ ನೆಕ್ಸಾನ್ (Nexon), ನೆಕ್ಸಾನ್ ಇವಿ (Nexon EV), ಹ್ಯಾರಿಯರ್ (Harrier) ಮತ್ತು ಸಫಾರಿ (Safari) ಎಸ್‌ಯುವಿಗಳು ಕೂಡಾ ಸೇರಿವೆ. ಇದೀಗ ಟಾಟಾ ಸುಮೋ SUV (Tata Sumo SUV) ತನ್ನ ಆಕರ್ಷಕ ನೋಟ ಹೊತ್ತು ಕೈಗೆಟುಕುವ ಬೆಲೆಯೊಂದಿಗೆ ಭಾರತೀಯ ಕಾರು ಮಾರುಕಟ್ಟೆಯನ್ನು ಪ್ರವೇಶಿಸಲು ಸಜ್ಜಾಗಿದೆ.

ದಿನದಿಂದ ದಿನಕ್ಕೆ ಆಟೋಮೊಬೈಲ್ ಕ್ಷೇತ್ರ ಬೆಳೆಯುತ್ತಲೇ ಹೋಗುತ್ತಿದೆ. ಹಾಗಾಗಿ ವಾಹನಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಹೆಚ್ಚು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ (Tata Motors) ತನ್ನ ಗ್ರಾಹಕರನ್ನು ಸೆಳೆಯಲು ಈ ಜನಪ್ರಿಯ ಕಾರನ್ನು ಬಿಡುಗಡೆ ಮಾಡಲು ಯೋಚಿಸಿದೆ. ಸುಮೋ SUV ಮಹೀಂದ್ರ XUV 700 (Mahindra XUV 700) ಗೆ ಹಾಗೂ Innova ಮತ್ತು Ertiga ಕಾರ್ ಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುವ ನಿರೀಕ್ಷೆಯಿದೆ. ಈ ಹೊಸ ಕಾರಿನ ವೈಶಿಷ್ಟ್ಯಗಳು ಮತ್ತು ಬೆಲೆಯನ್ನು ನೋಡೋಣ.

ಟಾಟಾ ಸುಮೋ SUV (Tata Sumo SUV)ನ ವೈಶಿಷ್ಟ್ಯಗಳು

Apple CarPlay ಮತ್ತು Android Auto ಜೊತೆಗೆ ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್. ಹಾಗೂ ಉತ್ತಮ ಸೌಕರ್ಯಕ್ಕಾಗಿ ಎತ್ತರ-ಹೊಂದಾಣಿಕೆ ಚಾಲಕ ಸೀಟು ಕೂಡಾ ಹೊಂದಿದ್ದು, ಸುಧಾರಿತ ತಂತ್ರಜ್ಞಾನ ಮತ್ತು ನವೀಕರಿಸಿದ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ. ಇತರಹದ ಹೆಚ್ಚುವರಿ ವೈಶಿಷ್ಟ್ಯಗಳನ್ನು ಕಂಪನಿಯು ಇನ್ನೂ ಘೋಷಿಸಬೇಕಾಗಿದೆ.

advertisement

Image Source: DelhiBreakings.com

ಟಾಟಾ ಸುಮೋ SUV ಯ ಎಂಜಿನ್

ಟಾಟಾ ಸುಮೋ SUV ಯ ಶಕ್ತಿಶಾಲಿ ಎಂಜಿನ್ ಒರಟು ಹಳ್ಳಿಯ ರಸ್ತೆಗಳು ಮತ್ತು ಹೆದ್ದಾರಿಗಳಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಇದು 2.0-ಲೀಟರ್ ಎಂಜಿನ್‌ನೊಂದಿಗೆ ಬರುವ ನಿರೀಕ್ಷೆಯಿದೆ. ಅದು ಗರಿಷ್ಠ 176 BHP ಶಕ್ತಿಯನ್ನು ಮತ್ತು 350 NM ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ 6-ಸ್ಪೀಡ್ ಮ್ಯಾನ್ಯುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅನ್ನು ಸಹ ಬೆಂಬಲಿಸುವುದರಲ್ಲಿ ಎರಡು ಮಾತಿಲ್ಲ. ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಎತ್ತರ-ಹೊಂದಾಣಿಕೆ ಚಾಲಕ ಸೀಟ್ ಸೇರಿದಂತೆ ಸುಧಾರಿತ ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನವನ್ನು ಈ ಕಾರು ಹೊಂದಿದೆ.

ಟಾಟಾ ಸುಮೊ ಎಸ್‌ಯುವಿ (Tata Sumo SUV) ಬೆಲೆ

ಟಾಟಾ ಸುಮೊ ಎಸ್‌ಯುವಿ ಮೂಲ ಮಾದರಿಗೆ 8 ಲಕ್ಷ ರೂ.ಗಳಾಗುವ ಸಾಧ್ಯತೆಯಿದ್ದು, ಟಾಪ್ ಮಾಡೆಲ್‌ನ ಬೆಲೆ ದೆಹಲಿಯಲ್ಲಿ ಸುಮಾರು 14.99 ಲಕ್ಷ ರೂ ಇರುವ ಸಾಧ್ಯತೆಗಳಿವೆ. ಆದರೆ, ಕಾರಿನ ಬಿಡುಗಡೆ ದಿನಾಂಕದ ಬಗ್ಗೆ ಕಂಪನಿಯು ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಬಿಡುಗಡೆಯ ಮುನ್ನವೇ ಈ ಕಾರ್ ಮಹೀಂದ್ರ SUV ಗೆ ಕಠಿಣ ಸ್ಪರ್ಧೆ ಒಡ್ಡುತ್ತಿದ್ದು ಬಿಡುಗಡೆಯ ನಂತರ ಅದೆಷ್ಟು ಜನರ ಮನಗೆಲ್ಲಲಿದೆಯೋ! ಬುಕ್ ಮಾಡಿ ಅದೆಷ್ಟು ದಿನ ಕಾಯಬೇಕೋ! ಎಂಬ ಮಾತಂತೂ ಕೇಳಿಬರುತ್ತಿದೆ.

advertisement

Leave A Reply

Your email address will not be published.