Karnataka Times
Trending Stories, Viral News, Gossips & Everything in Kannada

Yash19 Title: ಕೊನೆಗೂ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಯಶ್, Yash 19 ಸಿನಿಮಾದ ಟೈಟಲ್ ರಿಲೀಸ್.

advertisement

ನಟ ಯಶ್ ಕನ್ನಡ ಚಿತ್ರರಂಗದ ಶ್ರೇಷ್ಠ ನಟ, ಅದರ ಜೊತೆ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ. ಕೆಜಿಎಫ್ ಚಿತ್ರದ ಮೂಲಕ ಬಹಳಷ್ಟು ಫೇಮ್ ಕ್ರಿಯೇಟ್ ಮಾಡಿಕೊಂಡರು. ಯಶ್ (Yash) ಇಂದು ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಅಗಿ ಎಲ್ಲ ಕಡೆ ಗುರುತಿಸಿಕೊಂಡಿದ್ದಾರೆ. ಕೆಜಿಎಫ್, ಕೆಜಿಎಫ್ 2 (KGF 2) ಬಳಿಕ ಯಶ್ ಸೈಲೆಂಟ್ ಆಗಿ ಇದ್ದರು. ಮುಂದಿನ‌ ಚಿತ್ರದ ಬಗ್ಗೆ ಯಾವುದೇ ರೀತಿಯ ಮಾಹಿತಿ ನೀಡಿರಲಿಲ್ಲ. ಇದೀಗ ಮುಂದಿನ ಸಿನಿಮಾಗೆ ಭರ್ಜರಿ ತಯಾರಿ ಮಾಡಿಕೊಳ್ತಾ ಇದ್ದರು ಎಂದು ಅಪ್‌ಡೇಟ್ ಸಿಕ್ಕಿದೆ.

ಅಭಿಮಾನಿಗಳಿಗೆ ಖುಷಿ:

ಕೆಜಿಎಫ್ 1 (KGF 1) ಮತ್ತು ಚಾಪ್ಟರ್ 2 (Chapter 2) ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಮೋಡಿ ಮಾಡಿತ್ತು. ಕೆಜಿಎಫ್ ಆದ ಮೇಲೆ ಯಶ್ (Yash) ಅವರ ಮುಂದಿನ ನಡೆ ಏನು? ಅವರು ಬಾಲಿವುಡ್ ಸಿನಿಮಾ ಮಾಡ್ತಾರಾ? ಟಾಲಿವುಡ್‌ ನಲ್ಲಿ ನಟಿಸ್ತಾರಾ ಎನ್ನುವ ಮಾತು ಕೇಳಿಬರುತ್ತಿತ್ತು. ಇದೀಗ ಇದಕ್ಕೆ ಉತ್ತರ ಸಿಕ್ಕಿದೆ, ಹಲವು ತಿಂಗಳಿಂದ ಯಶ್ ಅಭಿಮಾನಿಗಳು ಕಾಯುತ್ತಿರುವ ಸಮಯ ಕೊನೆಗೂ ಕೂಡಿ ಬಂದಿದ್ದು ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ

Toxic Movie ಫಸ್ಟ್ ಲುಕ್ ಟೀಸರ್ ರಿಲೀಸ್:

 

 

ಯಶ್ ಮುಂದಿನ ಸಿನಿಮಾದ ತಯಾರಿ ಬಹಳಷ್ಟು ಜೋರಾಗಿಯೇ ನಡೆದಿದ್ದು, ಟಾಕ್ಸಿಕ್ (Toxic) ಅಂತ ಟೈಟಲ್ ಇಡಲಾಗಿದೆ. ಫಸ್ಟ್ ಲುಕ್ ಟೀಸರ್ ಜೊತೆಗೆ ಟೈಟಲ್ ಅನೌನ್ಸ್  ಮಾಡಿದ್ದು ಈ ಚಿತ್ರಕ್ಕೆ ಗೀತು ಮೋಹನದಾಸ್ ನಿರ್ದೇಶನ ಮಾಡುತ್ತಿದ್ದಾರೆ. KVN ಸಂಸ್ಥೆ ನಿರ್ಮಾಣ ಮಾಡುತ್ತಿರುವ ಸಿನಿಮಾ ಇದಾಗಿದ್ದು ಟೈಟಲ್ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದ್ದು ಈ ಚಿತ್ರಕ್ಕೆ ನಟಿ ಸಾಯಿ ಪಲ್ಲವಿ (Sai Pallavi) ನಾಯಕಿ ಆಗಲಿದ್ದಾರೆ ಎನ್ನುವ ಸುದ್ದಿ ಸಹ ಹರಿದಾಡುತ್ತಿದೆ.

 

advertisement

 

View this post on Instagram

 

A post shared by Yash (@thenameisyash)

 

ಸಿನಿಮಾದ ಕಥೆಯೇನು?

ಟಾಕ್ಸಿಕ್‌ (Toxic) ಎಂದರೆ ವಿಷಕಾರಿ ಎಂದರ್ಥ. ಗೋವಾದ ಡ್ರಗ್‌ ಮಾಫೀಯಾ ಬಗ್ಗೆ ಇರುವಂತಹ ಸಿನೆಮಾ ಇದು ಎಂದು ಹೇಳಾಗುತ್ತಿದ್ದು ಅಭಿಮಾನಿಗಳ ಕ್ಯುರಾಸಿಟಿ ಅಂತು ಹೆಚ್ಚಾಗಿದೆ. ಹಾಲಿವುಡ್‌ ಮೂವಿ ರೇಂಜ್‌ ನಲ್ಲಿ ಈ ಸಿನೆಮಾ ಹವಾ ಕ್ರಿಯೇಟ್ ಮಾಡಲಿದೆ. ಈ ಸಿನಿಮಾ ಏಪ್ರಿಲ್ 10 2025ರಲ್ಲಿ ರಿಲೀಸ್‌ ಆಗಲಿದೆ ಎನ್ನಲಾಗಿದೆ. ಸ್ಯಾಂಡಲ್‌ವುಡ್‌‌ ಅನ್ನು ಬಹಳ ಎತ್ತರಕ್ಕೆ ತೆಗೆದು ಕೊಂಡ ಕೀರ್ತಿ ರಾಕಿ ಭಾಯ್‌ (Rocky Bhai) ಅವರದ್ದು. ಈಗ ಮತ್ತೊಮ್ಮೆ ಡಿಫ್ರೆಂಟ್‌ ಟೈಟಲ್‌ನೊಂದಿಗೆ ರಾಕಿ ಭಾಯ್‌ ಸದ್ದು ಮಾಡುತ್ತಿದ್ದಾರೆ.

ಶೂಟಿಂಗ್ ಇಲ್ಲಿ ನಡೆಯಲಿದೆ

ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸಿನಿಮಾ ಸದ್ದು ಮಾಡಲಿದ್ದು ಚಿತ್ರದ ಬಹುತೇಕ ಶೂಟಿಂಗ್‌ ಗೋವಾದಲ್ಲಿ ನಡೆಯಲಿದೆ. ರಾಕಿ ಬಾಯ್ ಗೆಟಪ್ ಇದರಲ್ಲಿ ಡಿಫರೆಂಟ್ ಆಗಿ ಇದ್ದು ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲಿ ಸಿನಿಮಾ ರಿಲೀಸ್‌ ಆಗಲಿದ್ದು ಸ್ಯಾಂಡಲ್ ವುಡ್ ನಲ್ಲಿ ಜೋರಾಗಿಯೇ ಸೌಂಡ್ ‌ಮಾಡಲಿದೆ.

advertisement

Leave A Reply

Your email address will not be published.