Karnataka Times
Trending Stories, Viral News, Gossips & Everything in Kannada

Rishab Shetty: ರಾಮ್ ರಾಜ್ ಬಟ್ಟೆ ಜಾಹೀರಾತಿಗೆ ಯಶ್ ಬದಲು ಡಿವೈನ್ ಸ್ಟಾರ್ ರಿಷಭ್ ಎಂಟ್ರಿ, ಪಡೆದ ಸಂಭಾವನೆ ಎಷ್ಟು?

advertisement

ಕಾಂತಾರ ಸಿನಿಮಾ ಮೂಲಕ ಎಲ್ಲೆಡೆ ಕಮಾಲ್ ಮಾಡಿದ ರಿಷಬ್ ಶೆಟ್ಟಿ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ ಕಾಂತಾರ ಹಲವು ದಾಖಲೆಯನ್ನು ನಿರ್ಮಿಸಿ ರಿಷಬ್ ಶೆಟ್ಟಿ (Rishab Shetty) ನಿರ್ದೇಶನ, ಸಿನಿಮಾ ಮೇಕಿಂಗ್, ನಟನೆ ಬಗ್ಗೆ ಎಲ್ಲ ಜನರು ಮೆಚ್ಚಿಕೊಂಡಿದ್ದರು.ಇದೀಗ ರಿಷಭ್ ಅವರಿಗೆ ಮತ್ತೊಂದು ಅವಕಾಶ ಕೂಡಿ ಬಂದಿದೆ.

ರಾಮ್ ರಾಜ್ ಜಾಹೀರಾತಿನಲ್ಲಿ ಮಿಚ್ಹಿಂಗ್:

 

 

advertisement

ಕೆಜಿಎಫ್ ಸಿನಿಮಾ ಸಕ್ಸಸ್ ಆದ ನಂತರ ಯಶ್ (Yash) ಡಿಮ್ಯಾಂಡ್ ಬಹಳಷ್ಟು ಹೆಚ್ಚಾಗಿತ್ತು. ಜಾಹೀರಾತು ಕ್ಷೇತ್ರದಲ್ಲಿಯಂತೂ ಯಶ್ ಗೆ ಭಾರೀ ಬೇಡಿಕೆ ಬಂದಿತ್ತು.ಅದರಲ್ಲೂ ಮುಖ್ಯವಾಗಿ ಯಶ್ ಆಯ್ದುಕೊಂಡಿದ್ದು ರಾಮ್ ರಾಜ್ ಬಟ್ಟೆ ಬ್ರ್ಯಾಂಡ್. ಯಶ್ ಈ ಬ್ರಾಂಡ್ ಗೆ ಜಾಹೀರಾತು ನೀಡಿದ ಮೇಲೆ ರಾಮ್ ರಾಜ್ ಬಟ್ಟೆಗಳ ಹವಾ ಹೆಚ್ಚಾಗಿತ್ತು.ಇದೀಗ ಇರುವ ವಿಚಾರ ಅಂದ್ರೆ ರಾಮ್ ರಾಜ್ ಜಾಹೀರಾತ (Ramraj Ad) ನ್ನ ನಟ ರಿಷಬ್ ಶೆಟ್ಟಿ (Rishab Shetty)ನಿರ್ವಹಿಸಲಿದ್ದಾರೆ. ಹೌದು ರಿಷಭ್ ಹೆಚ್ಚಾಗಿ ಯಾವುದೇ ಕಾರ್ಯಕ್ರಮ ಇದ್ರು ಪಂಚೆಯಲ್ಲೇ ಮಿಂಚುತ್ತಾರೆ. ಸದಾ ಉಡುಗೆಯಲ್ಲೆ ಸರಳತೆ ಮೆರೆದಿದ್ದಾರೆ. ಪಂಚೆ ಸ್ಟಾರ್ ಎಂದೇ ರಿಷಭ್ ಮೆರೆದಿದ್ದು ಕಾಂತಾರ ಚಿತ್ರದಲ್ಲಿ ಪಂಚೆ ಉಟ್ಟೆ ಮೋಡಿ ಮಾಡಿದ್ರು. ಹೀಗಾಗಿ ರಿಷಬ್ ಶೆಟ್ಟಿಗೆ ರಾಮ್ ರಾಜ್ ಬಟ್ಟೆ ಗಳಿಗೆ ಬ್ರ್ಯಾಂಡ್ ಅಂಬಾಸೀಡರ್ ಆಗೋ ಅವಕಾಶ ಬಂದಿದೆ.

ಸಂಭಾವಣೆ ಎಷ್ಟು?

ಈ ರಾಮ್ ರಾಜ್ ಬ್ರ್ಯಾಂಡ್ (Ram Raj Brand) ಗೆ ರಿಷಭ್ (Rishab Shetty) ಪಡೆಯುವ ಸಂಭಾವಣೆ ಎಷ್ಟು ಕೇಳಿದ್ರೆ ನಿಮಗೂ ಶಾಕ್ ಆಗಬಹುದು.‌ ಹೌದು ಅಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ರಿಷಬ್ ಈ ಜಾಹೀರಾತಿಗೆ ಒಂದುವರೆ ಕೋಟಿ ಯಷ್ಟು ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ.

ಕಾಂತರ ಪಾರ್ಟ್ 1 ತಯಾರಿ:

ಈ ಹಿಂದೆ Kantara Part 2 ಭಾರಿ ಸದ್ದು ಮಾಡಿತ್ತು. ಇದೀಗ ಕಾಂತರ ಮೊದಲ ಪಾರ್ಟ್ ನ‌ ತಯಾರಿಯಲ್ಲಿ ಇದೀಗ ಇದ್ದಾರೆ.ಕಾಂತಾರ ಚಾಪ್ಟರ್ ಒನ್ ಚಿತ್ರದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದ್ದು ಅಭಿಮಾನಿಗಳಲ್ಲಿ ಕ್ಯುರಾಸಿಟಿ ಹೆಚ್ಚಾಗಿದೆ.‌ ಲಾಂಗ್ ಹೇರ್ ಮತ್ತು ಬೆಂಕಿ ಉಂಡೆಯಂತಹ ಕಣ್ಣುಗಳಿಂದ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಕಾಂತಾರ ಪಾರ್ಟ್ ಒನ್ ತಯಾರಿ ಪ್ರಾರಂಭವಾಗದಿದ್ದರೂ, ಸಿನಿಮಾ ಬಜೆಟ್ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿವೆ. ಕಾಂತಾರ ಈ ಮೊದಲಿಗಿಂತ ಈಗ ಕಾಂತಾರ ಪಾರ್ಟ್ 1 ಭಾರಿ ಬಜೆಟ್‌ನಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಕಾಂತರ ಜನರನ್ನು ಯಾವ ರೀತಿ ಮೋಡಿ ಮಾಡಲಿದೆ ಎಂದು ಕಾದು ನೋಡ್ಬೆಕು.

advertisement

Leave A Reply

Your email address will not be published.