Karnataka Times
Trending Stories, Viral News, Gossips & Everything in Kannada

Canara Bank: ಖಾತೆದಾರರಿಗೆ ಸಿಹಿಸುದ್ದಿ ಕೊಟ್ಟ ಕೆನರಾ ಬ್ಯಾಂಕ್! ಬೆಳ್ಳಂಬೆಳಿಗ್ಗೆ ಅರ್ಜಿ ಸಲ್ಲಿಸಲು ಕೋರಿಕೆ

advertisement

ಹೊಸದಾಗಿ ವ್ಯಾಪಾರ ಮಾಡುವಂತಹ ಹಾಗೂ ವ್ಯಾಪಾರವನ್ನು ಇನ್ನಷ್ಟು ಹೆಚ್ಚಾಗಿ ವಿಸ್ತರಿಸುವಂತಹ ಕಾರಣಗಳಿಗಾಗಿ ಯುವ ಉದ್ಯಮಿಗಳಿಗೆ ಮುದ್ರಾ ಲೋನ್ ಯೋಜನೆ (Mudra Loan Yojana) ಅಡಿಯಲ್ಲಿ ಕೇಂದ್ರ ಸರ್ಕಾರ ಸಾಲ (Loan) ಸೌಲಭ್ಯವನ್ನು ನೀಡುವಂತಹ ಕೆಲಸವನ್ನು ಮಾಡುತ್ತಿದ್ದು ಈ ಸಾಲವನ್ನು ನೀವು ಭಾರತ ದೇಶದ ಅತ್ಯಂತ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿರುವಂತಹ ಕೆನರಾ ಬ್ಯಾಂಕ್ (Canara Bank) ನಲ್ಲಿ ಕೂಡ ಪಡೆದುಕೊಳ್ಳಬಹುದಾಗಿದೆ. 10 ಲಕ್ಷ ರೂಪಾಯಿಗಳವರೆಗೆ ನೀವು ಮುದ್ರಾ ಲೋನ್ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದ್ದು ಬನ್ನಿ ಈ ಬಗ್ಗೆ ಸಂಪೂರ್ಣ ವಿವರವನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

WhatsApp Join Now
Telegram Join Now

Canara Bank Mudra Loan Yojana:

 

Image Source: Business League

 

ಲಘು ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುದ್ರಾ ಲೋನ್ ಯೋಜನೆ (Mudra Loan Yojana) ಯನ್ನು 2015 ರಲ್ಲಿ ಪ್ರಾರಂಭ ಮಾಡುತ್ತದೆ. ಈ ಯೋಜನೆ ಅಡಿಯಲ್ಲಿ 50000 ಗಳಿಂದ 10 ಲಕ್ಷ ರೂಪಾಯಿಗಳ ವರೆಗೆ ಕೆನರಾ ಬ್ಯಾಂಕ್ (Canara Bank) ನಲ್ಲಿ ನೀವು ಲೋನ್ ಪಡೆದುಕೊಳ್ಳಬಹುದಾಗಿದೆ. ಸಾಮಾನ್ಯವಾಗಿ ಈ ಲೋನ್ ಮೇಲೆ 9.85 ಪ್ರತಿಶತ ಬಡ್ಡಿದರವನ್ನ ವಿಧಿಸಲಾಗುತ್ತದೆ.

ಇದನ್ನು ಓದಿ: ಈಗಾಗಲೇ 18 ಲಕ್ಷ ಜನ ಅರ್ಜಿ ಹಾಕಿರುವ ಈ ಯೋಜನೆಗೆ ಹೆಸರು ಸೇರಿಸಲು ಸಿಎಂ ಮನವಿ! ಮುಗಿಬಿದ್ದ ರೈತರು

ಲೋನಿನ ವಿಶೇಷತೆಗಳು:

  • ಈ ಲೋನ್ ಪಡೆದುಕೊಳ್ಳುವ ಮೂಲಕ ವ್ಯಾಪಾರಿಗಳು ಈಗಾಗಲೇ ಇರುವಂತಹ ತಮ್ಮ ಚಿಕ್ಕ ಪುಟ್ಟ ಉದ್ಯಮ ಅಥವಾ ವ್ಯಾಪಾರವನ್ನು ಇನ್ನಷ್ಟು ದೊಡ್ಡ ಮಟ್ಟಕ್ಕೆ ವಿಸ್ತರಿಸಿಕೊಳ್ಳಬಹುದಾಗಿದೆ.
  • ಇನ್ನು ಈ ಲೋನ್ (Loan) ಪಡೆದುಕೊಂಡಿರುವಂತ ಮರುಪಾವತಿ ಮಾಡೋದಕ್ಕೆ ಐದರಿಂದ ಏಳು ವರ್ಷಗಳ ಕಾಲ ಸಮಯಾವಕಾಶವಿರುತ್ತದೆ.
  • 5 ಲಕ್ಷಗಳವರೆಗೆ ಲೋನ್ ಪಡೆದುಕೊಂಡರೆ ಯಾವುದೇ ರೀತಿಯ ಅಧಿಕ ಶುಲ್ಕ ಕಟ್ಟಬೇಕಾದ ಅಗತ್ಯವಿಲ್ಲ ಹಾಗೂ ಈ ಲೋನ್ ಅನ್ನು ನೀವು ಯಾವುದೇ ಗ್ಯಾರೆಂಟಿ ಇಲ್ಲದೆ ಪಡೆದುಕೊಳ್ಳಬಹುದಾಗಿದೆ.

ಲೋನ್ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು:

 

advertisement

Image Source: India TV News

 

  • ಲೋನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವಂತಹ ವ್ಯಕ್ತಿ ಭಾರತೀಯ ನಾಗರಿಕನಾಗಿರಬೇಕು ಹಾಗೂ ಆತನ ವಯಸ್ಸು 18 ವರ್ಷ ಮೇಲಿರಬೇಕು.
  • ಈ ಯೋಜನೆಯಲಿ ಒಬ್ಬ ವ್ಯಕ್ತಿ ಅಥವಾ ಯಾವುದೇ ರೀತಿಯ ವ್ಯಾಪಾರ ಹಾಗೂ ವ್ಯವಹಾರದ ಸಂಸ್ಥೆ ಕೂಡ ಲೋನ್ ಪಡೆದುಕೊಳ್ಳುವುದಕ್ಕೆ ಅರ್ಹತೆಯನ್ನು ಹೊಂದಿದೆ.
  • ಈ ಹಿಂದೆ ಯಾವುದೇ ರೀತಿಯ ಸಾಲವನ್ನು ಪಡೆದುಕೊಂಡು ಡೀಫಾಲ್ಟರ್ ಆಗಿರಬಾರದು ಹಾಗೂ ಕಳೆದ ಎರಡು ವರ್ಷದ ಬ್ಯಾಂಕ್ ಟ್ರಾನ್ಸ್ಫರ್ ರೆಕಾರ್ಡ್ ಉತ್ತಮವಾಗಿರಬೇಕು.

ಇದನ್ನು ಓದಿ: ಈ ಜಿಲ್ಲೆಗಳಿಗೆ ಗೃಹಲಕ್ಷ್ಮಿ 11ನೇ ಹಾಗು 12ನೇ ಕಂತಿನ ಹಣ ಬಿಡುಗಡೆ!

ಸಾಲ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ಸ್:

  • ಆಧಾರ್ ಕಾರ್ಡ್ (Aadhaar Card) ಪ್ಯಾನ್ ಕಾರ್ಡ್ (PAN Card) ಡ್ರೈವಿಂಗ್ ಲೈಸೆನ್ಸ್ (Driving License) ನಂತಹ ಐಡಿ ಪ್ರೂಫ್ ಬೇಕಾಗಿರುತ್ತದೆ.
  • ಆದಾಯ ಪ್ರಮಾಣ ಪತ್ರ ಹಾಗೂ ಪರಿಯೋಜನ ರಿಪೋರ್ಟ್.
  • ಆಧಾರ್ ಲಿಂಕ್ ಆಗಿರುವಂತಹ ಪಾಸ್ ಬುಕ್ ಹಾಗೂ ಕಳೆದ ಎರಡು ವರ್ಷದ ಬ್ಯಾಂಕ್ ಟ್ರಾನ್ಸಾಕ್ಷನ್ ಡಾಕ್ಯೂಮೆಂಟ್.
  • ಈ ವರ್ಷದ ನಿಮ್ಮ ವ್ಯಾಪಾರದ ಟ್ರಾನ್ಸಾಕ್ಷನ್ ಡಾಕ್ಯೂಮೆಂಟ್.
  • ಪಾಸ್ಪೋರ್ಟ್ ಸೈಜ್ ಫೋಟೋ ಹಾಗೂ ಮೊಬೈಲ್ ನಂಬರ್ ನೀಡಬೇಕು.

ಇದನ್ನು ಓದಿ: ಮೋದಿ ಪ್ರಮಾಣವಚನಕ್ಕೂ ಮುನ್ನ ಕರೆಂಟ್ ಬಿಲ್ ಕಟ್ಟುತ್ತಿರುವವರಿಗೆ ರತನ್ ಟಾಟಾ ಕಡೆಯಿಂದ ಸಿಹಿಸುದ್ದಿ!

ಸಾಲ ಪಡೆದುಕೊಳ್ಳುವ ವಿಧಾನ:

  • ನಿಮ್ಮ ಹತ್ತಿರದ ಕೆನರಾ ಬ್ಯಾಂಕ್ (Canara Bank) ಬ್ರಾಂಚಿಗೆ ಹೋಗಿ ಅಲ್ಲಿ ಲೋನ್ ಅಧಿಕಾರಿಗಳ ಬಗ್ಗೆ ಮುದ್ರಾ ಲೋನ್ ಯೋಜನೆ (Mudra Loan Yojana) ಯನ್ನು ಯಾವ ರೀತಿಯಲ್ಲಿ ಪಡೆದುಕೊಳ್ಳಬಹುದು ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ.
  • ಅಲ್ಲಿ ನಿಮಗೆ ಲೋನ್ಗಾಗಿ ಅರ್ಜಿ ಸಲ್ಲಿಸುವುದಕ್ಕೆ ಫಾರ್ಮ್ ಅನ್ನು ನೀಡಲಾಗುತ್ತದೆ ಅದನ್ನು ಸರಿಯಾಗಿ ಭರ್ತಿ ಮಾಡಿ ಹಾಗೂ ಅದಕ್ಕೆ ಬೇಕಾಗಿರುವಂತಹ ಡಾಕ್ಯುಮೆಂಟ್ ಗಳನ್ನು ಅಟಾಚ್ ಮಾಡಿ.
  • ಈಗ ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ತುಂಬಿದ ನಂತರ ಹಾಗೂ ಡಾಕ್ಯುಮೆಂಟ್ ಗಳನ್ನು ಅಟ್ಯಾಚ್ ಮಾಡಿದ ನಂತರ ಅವೆಲ್ಲವನ್ನು ಕೂಡ ಎರಡೆರಡು ಬಾರಿ ಸರಿಯಾದ ರೀತಿಯಲ್ಲಿ ಗಮನಿಸಿ ಹಾಗೂ ನಂತರ ಅಧಿಕಾರಿಗಳಿಗೆ ನೀಡಿ.
  • ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಅರ್ಜಿ ದಾಖಲೆಯನ್ನು ಪರೀಕ್ಷಿಸಿ, ನಂತರ ನಿಮ್ಮ ಹಣವನ್ನು ನಿಮ್ಮ ಖಾತೆಗೆ ವರ್ಗಾವಣೆ ಮಾಡುವುದಕ್ಕೆ ಪ್ರಾರಂಭಿಸುತ್ತಾರೆ.

advertisement

Leave A Reply

Your email address will not be published.