Karnataka Times
Trending Stories, Viral News, Gossips & Everything in Kannada

RBI: ಪೆಟಿಎಂ ನಂತರ ಮತ್ತೆ 3 ಬ್ಯಾಂಕ್‌ಗಳಿಗೆ 3 ಕೋಟಿ ರೂ. ದಂಡ ವಿಧಿಸಿದ ಆರ್‌ಬಿಐ, ಕಾರಣ ಇಲ್ಲಿದೆ!

advertisement

ಇಂದು ಜನರು ಬ್ಯಾಂಕ್ ಗಳಲ್ಲಿ ಹಣ ಠೇವಣಿ ಇಡುವುದು, ಸಾಲ ಪಡೆಯುದು, FD ಇಡುವುದು ಇತ್ಯಾದಿ ವಹಿವಾಟುಗಳು ಹೆಚ್ಚಾಗಿದೆ. ಹಾಗಾಗಿ ಗ್ರಾಹಕರ ಸುರಕ್ಷತೆಯನ್ನು ಕಾಪಾಡಿಕೊಳ್ಳವುದು ಕೂಡ ಅರ್ ಬಿ ಐ ಗೆ ಪ್ರಮುಖ ವಾಗುತ್ತದೆ.‌ ಈಗಾಗಲೇ ಬ್ಯಾಂಕ್ ವಹಿವಾಟುಗಳ ವಿಚಾರವಾಗಿ RBI ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೆ ಇರುತ್ತದೆ. ಈಗಾಗಲೆ ಕೆಲವು ಬ್ಯಾಂಕ್ ಗಳಿಗೆ ದಂಡ ವಿಧಿಸಿದ್ದು ಇದೀಗ ಮತ್ತೆ ಮೂರು ಬ್ಯಾಂಕ್ ಗಳಿಗೆ ದಂಡ ಹಾಕಿದೆ

ಪೇಟಿಎಂ ನಿರ್ಬಂಧ:

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ (Paytm Payments Bank) ನ ಆಡಿಟ್‌ ವರದಿ ಮತ್ತು ಬಾಹ್ಯ ಲೆಕ್ಕಪರಿಶೋಧಕರಿಂದ ಮೌಲ್ಯಮಾಪನಾ ವರದಿಯನ್ನು ಆಧರಿಸಿ ಸೂಕ್ತವಾಗಿ ಗಮನಿಸಿದ RBI ಮಾರ್ಚ್‌ 15ರ ಬಳಿಕ ಪೇಟಿಎಂ ಬಳಕೆದಾರರ ಪ್ರಿಪೇಯ್ಡ್‌ ಪೇಮೆಂಟ್‌, ಫಾಸ್ಟ್‌ಟ್ಯಾಗ್‌ಗಳ ಠೇವಣಿ, ಪೇಟಿಎಂ ಪೇಮೆಂಟ್ಸ್ ಇತ್ಯಾದಿಗಳಿಗೆ‌ ಬ್ಯಾಂಕ್ ಲಿಮಿಟೆಡ್‌ಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ಬಂಧ ಕೂಡ ವಿಧಿಸಿದೆ. RBI ನಿಯಮಗಳನ್ನು ಪಾಲಿಸದೇ ಇದ್ದಲ್ಲಿ, ನಿಯಮ ಮೀರಿದ ನಿಟ್ಟಿನಲ್ಲಿ ಮಾರ್ಚ್‌ 15ರಿಂದ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ವಹಿವಾಟು ಸ್ಥಗಿತಗೊಳಿಸಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಈ ಬಗ್ಗೆ ಆದೇಶ ಹೊರಡಿಸಿದೆ.

ಬ್ಯಾಂಕ್ ಗಳಿಗೆ ದಂಡ:

 

advertisement

 

ಇದೀಗ ದೇಶದ 3 ಬ್ಯಾಂಕ್‌ಗಳಿಗೆ RBI ಸುಮಾರು 3 ಕೋಟಿ ರೂ. ವರೆಗೆ ದಂಡವನ್ನು ಸಹ ವಿಧಿಸಿದೆ.ಭಾರತೀಯ ರಿಸರ್ವ್ ಬ್ಯಾಂಕ್ ವಿವಿಧ ಕಾರಣಗಳಿಗಾಗಿ ಈ ಎಲ್ಲಾ ಬ್ಯಾಂಕ್‌ಗಳಿಗೆ ದಂಡ ವಿಧಿಸಿದೆ ಮತ್ತು ನಿಯಮಗಳನ್ನು ಸರಿಯಾಗಿ ಅನುಕರಣೆ ಮಾಡಲು ಎಲ್ಲಾ ಬ್ಯಾಂಕ್‌ಗಳಿಗೆ ನಿರ್ದೇಶನ ಕೂಡ ನೀಡಿದೆ. ಇದೀಗ RBI ಮೂರು ಬ್ಯಾಂಕ್ ಗಳಿಗೆ ದಂಡ ವಿಧಿಸಿದ್ದು ಭಾರತೀಯ ಸ್ಟೇಟ್‌ ಬ್ಯಾಂಕ್‌ (SBI), ಕೆನರಾ ಬ್ಯಾಂಕ್‌ (Canara Bank) ಹಾಗೂ ಸಿಟಿ ಯೂನಿಯನ್‌ ಬ್ಯಾಂಕ್‌ (City Union Bank) ಗಳಿಗೆ 3 ಕೋಟಿ ರೂ ನಷ್ಟು ದಂಡ ವಿಧಿಸಿದೆ.

ಯಾಕಾಗಿ ದಂಡ?

ಎಸ್‌ಬಿಐಗೆ 2 ಕೋಟಿ ರೂ. ದಂಡ ವನ್ನು ಅರ್ ಬಿ‌ ಐ ವಿಧಿಸಿದ್ದು ಪಾವತಿದಾರರ ಶೈಕ್ಷಣಿಕ ಜಾಗೃತಿ ಫಂಡ್‌ ಯೋಜನೆ ಅಡಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ದಂಡ ಹಾಕಿದೆ
ಇನ್ನು, ಆದಾಯ ಗುರುತಿಸುವ ಮಾನದಂಡಗಳು, ಅನುತ್ಪಾದಕ ಆಸ್ತಿ ಸೇರಿದಂತೆ ಸಿಟಿ ಯುನಿಯನ್‌ ಬ್ಯಾಂಕ್‌ಗೆ 66 ಲಕ್ಷ ರೂ. ದಂಡ ವಿಧಿಸಿದೆ. ಮತ್ತೊಂದೆಡೆ, ಆರ್‌ಬಿಐ ನಿರ್ದೇಶನಗಳನ್ನು ಪಾಲಿಸದೇ ಇದ್ದದ್ದಕ್ಕೆ ಕೆನರಾ ಬ್ಯಾಂಕ್‌ಗೆ 32.30 ಲಕ್ಷ ರೂ. ದಂಡ ವಿಧಿಸಿದೆ.ಹಾಗೆಯೇ ಕೆವೈಸಿ ದಾಖಲೆ ನಿಯಮಗಳನ್ನು ಕೂಡ ಸಿಟಿ ಯೂನಿಯನ್ ಬ್ಯಾಂಕ್ ಲಿಮಿಟೆಡ್ ಪಾಲಿಸದೇ ಇರೊ ಕಾರಣ ಆರ್ ಬಿಐ ದಂಡ ವಿಧಿಸಿದೆ ಎಂದು‌ ತಿಳಿಸಿದೆ.

advertisement

Leave A Reply

Your email address will not be published.