Karnataka Times
Trending Stories, Viral News, Gossips & Everything in Kannada

RBI: ಈ ತಪ್ಪು ಮಾಡಿದ್ರೆ ಬ್ಯಾಂಕುಗಳೇ ಗ್ರಾಹಕರಿಗೆ ದಂಡ ಕಟ್ಟಬೇಕಾಗುತ್ತದೆ! ಹೊಸ ನಿಯಮ ಜಾರಿಗೆ

advertisement

ಮೊದಲೆಲ್ಲ ಬ್ಯಾಂಕ್ ಗಳು ಗ್ರಾಹಕರಿಗೆ ಸರಿಯಾದ ಸಮಯಕ್ಕೆ ತೆಗೆದುಕೊಂಡ ಹಣ ಪಾವತಿಸಿಲ್ಲ ಇಲ್ಲವೇ ಕಾಗದ ಪತ್ರಗಳ ನೀಡಿಲ್ಲ ಎಂದು ದಂಡ ವಿಧಿಸುತ್ತಿದ್ದವು. ಆದರೆ ಈಗ ಸಾಲದ ಸೆಟ್ಲಮೆಂಟ್ ಗೆ ಸಂಬಂಧಿಸಿ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Bank) ಬ್ಯಾಂಕ್ ಗಳು ಹಾಗೂ ಇತರ ಸಂಸ್ಥೆಗಳಿಗೆ ಮಹತ್ವದ ಸೂಚನೆ ನೀಡಿದೆ.

ಸಾಲದ (Loan) ಪೂರ್ಣ ಮರುಪಾವತಿ ಅಥವಾ ಸೆಟ್ಲಮೆಂಟ್ ಮಾಡಿದ 30 ದಿನಗಳೊಳಗೆ ವೈಯಕ್ತಿಕ ಸಾಲ ಪಡೆದವರ ಸ್ಥಿರ ಅಥವಾ ಚರ ಆಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ವಾಪಸ್ಸು ನೀಡಬೇಕು ಹಾಗೂ ಅವರ ಮೇಲೆ ದಾಖಲಿಸಿರುವ ಎಲ್ಲ ಆರೋಪಗಳಿಂದ ಮುಕ್ತಗೊಳಿಸಬೇಕು ಎಂದು  ಬ್ಯಾಂಕ್ (Bank) ಹಾಗೂ ಸಾಲ (Loan) ನೀಡುವ ಇತರ ಸಂಸ್ಥೆಗಳಿಗೆ RBI ಸೂಚಿಸಿದೆ.

RBI ಹೊಸ ನಿಯಮಗಳು:

ಒಂದು ವೇಳೆ ಸಾಲ (Loan) ಪಡೆಯುವಾಗ ನೀಡಿದ ಮೂಲದಾಖಲೆಗಳನ್ನು ನೀಡಲು ವಿಳಂಬ ಮಾಡಿದರೆ ಪ್ರತಿದಿನ 5,000ರೂ.ನಂತೆ ಸಾಲ ಪಡೆದವರಿಗೆ ಪರಿಹಾರ ನೀಡಬೇಕು ಎಂದು ಬ್ಯಾಂಕ್ ಗಳಿಗೆ RBI ತಿಳಿಸಿದೆ. ಸಾಲ (Loan) ನೀಡುವ ಸಂಸ್ಥೆಗಳು ವಿಭಿನ್ನ ಅಭ್ಯಾಸಗಳನ್ನು ಅನುಸರಿಸುತ್ತಿರೋದನ್ನು ಗಮನಿಸಿದ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank) ಈ ನಿಯಮವನ್ನು ನೀಡಿದೆ. ಸಾಲಗಾರರನ್ನು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಹಾಗೂ ಜವಾಬ್ದಾರಿಯುತ ಸಾಲ ನೀಡುವಿಕೆ ಪ್ರಕ್ರಿಯೆಯನ್ನು ಉತ್ತೇಜಿಸಲು ಆರ್ ಬಿಐ ಕೆಲವು ಹೊಸ ನಿಯಮ ಜಾರಿಗೆ ತರುತ್ತಿದೆ . ಕೆಲವೊಂದು ಬ್ಯಾಂಕ್ ಗಳು ಹಾಗೂ ಹಣಕಾಸು ಸಂಸ್ಥೆಗಳು ಸಾಲ ಮರುಪಾವತಿ ಮಾಡಿದ ಬಳಿಕ ಕೂಡ ದಾಖಲೆಗಳನ್ನು ಹಿಂತಿರುಗಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ  ಆರ್ ಬಿಐ ಈ ಸೂಚನೆಗಳನ್ನು ನೀಡಿದೆ.

advertisement

ಇನ್ನು ಸಾಲಗಾರರು ಚರ ಅಥವಾ ಸ್ಥಿರ ಆಸ್ತಿಯ (Immovable Property) ಮೂಲದಾಖಲೆಗಳನ್ನು ಸಾಲ ಪಡೆದಿರುವ ಬ್ಯಾಂಕ್ ಔಟ್ ಲೆಟ್ (Bank Outlet) ಅಥವಾ ಶಾಖೆಯಿಂದ ಪಡೆಯಬಹುದು. ಇಲ್ಲವೇ ದಾಖಲೆಗಳು ಲಭ್ಯವಿರುವ ಬ್ಯಾಂಕಿನ ಇತರ ಯಾವುದೇ ಕಚೇರಿಯಿಂದ ಕೂಡ ಇವುಗಳನ್ನು ಪಡೆಯಬಹುದು ಎಂದು ಆರ್ ಬಿಐ ತಿಳಿಸಿದೆ. ಇನ್ನು ಒಂಟಿ ಅಥವಾ ಜಂಟಿ ಸಾಲಗಾರರಲ್ಲಿ ಯಾರೇ ಮೃತರಾದ ಸಂದರ್ಭದಲ್ಲಿ ಬ್ಯಾಂಕ್ ಚರ ಹಾಗೂ ಸ್ಥಿರ ಆಸ್ತಿಗಳ ಮೂಲದಾಖಲೆಗಳನ್ನು ಕಾನೂನುಬದ್ಧ ವಾರಸುದಾರರಿಗೆ ನೀಡಲು ಸಮರ್ಪಕವಾದ ಪ್ರಕ್ರಿಯೆಯನ್ನು ಅನುಸರಿಸಬೇಕು ಎಂದು ಆರ್ ಬಿಐ ತಿಳಿಸಿದೆ.

ಬ್ಯಾಂಕ್ಗಳು ಏನು ಮಾಡಬೇಕೆಂದು RBI ಹೇಳಿದೆ?

ಬ್ಯಾಂಕ್ ಗಳು ಸಾಲಕ್ಕೆ ಸಂಬಂಧಿಸಿ ಚರ ಅಥವಾ ಸ್ಥಿರ ಆಸ್ತಿಗಳ ಮೂಲದಾಖಲೆಗಳನ್ನು ಸಾಲಗಾರರಿಗೆ ಹಿಂತಿರುಗಿಸುವ ಸಂಬಂಧ ಅನುಸರಿಸುವ ಪ್ರಕ್ರಿಯೆಗಳನ್ನು ತಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸಬೇಕು. ಹಾಗೆಯೇ ಇತರ ನೀತಿಗಳು ಹಾಗೂ ಪ್ರಕ್ರಿಯೆಗಳ ಬಗ್ಗೆ ಕೂಡ ಗ್ರಾಹಕರಿಗೆ ಮಾಹಿತಿ ನೀಡಬೇಕು ಎಂದು ಆರ್ ಬಿಐ ತಿಳಿಸಿದೆ. ಇನ್ನು ಇಂಥ ದಾಖಲೆಗಳನ್ನು ಬಿಡುಗಡೆಗೊಳಿಸುವಲ್ಲಿ ವಿಳಂಬವಾದರೆ ಸಾಲಗಾರರಿಗೆ ಬ್ಯಾಂಕ್ ಗಳು ಪರಿಹಾರವನ್ನು ಕೂಡ ನೀಡಬೇಕು ಎಂದು ಆರ್ ಬಿಐ ತಿಳಿಸಿದೆ. ವಿಳಂಬವಾದ ಸಂದರ್ಭದಲ್ಲಿ ಪ್ರತಿದಿನಕ್ಕೆ 5,000ರೂ.ನಂತೆ ಪರಿಹಾರ ನೀಡುವಂತೆ ಆರ್ ಬಿಐ ಸೂಚಿಸಿದೆ.

ಒಂದು ವೇಳೆ ಮೂಲ ಚರ ಅಥವಾ ಸ್ಥಿರ ಆಸ್ತಿ ದಾಖಲೆಗಳು ಕಳೆದು ಹೋಗಿದ್ದರೆ ಅಥವಾ ಅವುಗಳಿಗೆ ಹಾನಿಯಾಗಿದ್ದರೆ ನಿಯಂತ್ರಣ ಪ್ರಾಧಿಕಾರಗಳು (REs) ನಕಲಿ ಅಥವಾ ದೃಢೀಕೃತ ದಾಖಲೆಗಳನ್ನು ಪಡೆಯಲು ನೆರವು ನೀಡಬೇಕು ಎಂದು ಆರ್ ಬಿಐ ತಿಳಿಸಿದೆ. ಇನ್ನು ದಾಖಲೆಗಳು ಕಳೆದು ಹೋಗಿರುವ ಸಂದರ್ಭದಲ್ಲಿ ಆರ್ ಇಗಳಿಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ಹೆಚ್ಚುವರಿ 30 ದಿನಗಳ ಕಾಲಾವಕಾಶ  ಸಿಗಲಿದೆ ಎಂದು ಆರ್ ಬಿಐ ತಿಳಿಸಿದೆ.

RBI ಹೊಸ ನಿಯಮಗಳು ಜಾರಿಯಾಗುವುದು ಯಾವಾಗ?

ಸಾಲ ಖಾತೆಗಳ ಮೇಲೆ ಬ್ಯಾಂಕ್ ಗಳು ದಂಡ ವಿಧಿಸುವ ಪ್ರಕ್ರಿಯೆ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಆಗಸ್ಟ್ 18ರಂದು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಸಾಲಗಾರರು ಸಾಲ ಪಡೆಯುವ ಸಂದರ್ಭದಲ್ಲಿನ ಷರತ್ತುಗಳನ್ನು ಪಾಲಿಸದ ಸಂದರ್ಭದಲ್ಲಿ ಹಲವು ಬ್ಯಾಂಕ್ ಗಳು ನಿಗದಿತ ಬಡ್ಡಿದರದ ಮೇಲೆ ದಂಡದ ರೂಪದಲ್ಲಿ ಹೆಚ್ಚಿನ ಬಡ್ಡಿ (Final Rate of Interest) ವಿಧಿಸೋದನ್ನು ಗಮನಿಸಿರುವ ಆರ್ ಬಿಐ, ಇದರ ತಡೆಗೆ ಈ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಹೊಸ ಮಾರ್ಗಸೂಚಿಗಳು 2023ರ ಡಿಸೆಂಬರ್ 1ರಿಂದ ಜಾರಿಗೆ ಬರಲಿವೆ ಎಂದು ತಿಳಿಸಿದೆ. ಇನ್ನು ಇದರಿಂದಾಗಿ ಸಾಲ ಪಡೆದು ಸಾಲ ತೀರಿಸಿದ ಗ್ರಾಹಕರು ಕಾಗದ ಪತ್ರಗಳ ಸಲುವಾಗಿ ಪದೇ ಪದೆ ಬ್ಯಾಂಕ್ ಗಳಿಗೆ ಅಡ್ಡಾಡಬೇಕೆಂದಿಲ್ಲ. ನೆಮ್ಮದಿಯಾಗಿ ಇರುವ ಜಾಗದಲ್ಲೇ ಕಡತಗಳನ್ನು ಪಡೆಯಬಹುದಾಗಿದೆ.

 

advertisement

Leave A Reply

Your email address will not be published.