Karnataka Times
Trending Stories, Viral News, Gossips & Everything in Kannada

PM Kisan 16th Installment: ಈ ಪಟ್ಟಿಯಲ್ಲಿ ಹೆಸರು ಇದ್ದವರಿಗೆ ಮಾತ್ರ ಸಿಗಲಿದೆ 16ನೇ ಕಂತಿನ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಹಣ!

advertisement

ರೈತರು ಬಹು ನಿರೀಕ್ಷೆಯಿಂದ 16ನೇ ಕಂತಿನ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Samman Nidhi Yojana) ಹಣಕ್ಕಾಗಿ ಕಾಯುತ್ತಿದ್ದಾರೆ. ಈಗಾಗಲೇ 15 ಕಂತಿನ ಹಣ ಬಿಡುಗಡೆ ಆಗಿದೆ. ಇನ್ನು ಕೆಲವೇ ದಿನಗಳಲ್ಲಿ 16ನೇ ಕಂತಿನ ಹಣವು ಕೂಡ ಬಿಡುಗಡೆ ಆಗಲಿದ್ದು ಯಾವ ದಿನಾಂಕ ಬಿಡುಗಡೆ ಆಗಲಿದೆ? ಹಾಗೂ ಯಾರಿಗೆ ಈ ಕಂತಿನ ಹಣ ಸಿಗುವ ಸಾಧ್ಯತೆ ಇಲ್ಲ ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.

ಪಿ ಎಂ ಕಿಸಾನ್ 2024ರ ಪಟ್ಟಿ ಬಿಡುಗಡೆ:

ಪಿಎನ್ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) ಯ 16ನೇ ಕಂತಿನ ಹಣವನ್ನು ಇದೆ ಬರುವ ಫೆಬ್ರವರಿ 28, 2024, ಅಂದರೆ ನಾಳೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಕೋಟ್ಯಾಂತರ ರೈತರ ಖಾತೆಗೆ ನಾಳೆ ಎರಡು ಸಾವಿರ ರೂಪಾಯಿಗಳು ಜಮಾ ಆಗಲಿದೆ. ಇನ್ನು 15 ಕಂತಿನ ಹಣವನ್ನು ಪಡೆದುಕೊಂಡಿರುವವರಿಗೆ ಹದಿನಾರನೇ ಕಂತಿನ ಹಣವು ಕೂಡ ಬರುತ್ತದೆಯೋ ಇಲ್ಲವೋ ಎನ್ನುವುದನ್ನು ನೀವು ಈಗ ಸುಲಭವಾಗಿ ಪರಿಶೀಲಿಸಿಕೊಳ್ಳಬಹುದು.

 

advertisement

 

ಪಿಎಂ ಕಿಸಾನ್ (PM Kisan) ಪೋರ್ಟಲ್ ನಲ್ಲಿ ನಿಮಗೆ ನಿಮ್ಮ ಹೆಸರು ಇದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಿಕೊಳ್ಳಲು ಸಾಧ್ಯವಿದೆ. ಮನೆಯಲ್ಲಿಯೇ ಕುಳಿತು ಒಂದೇ ಒಂದು ಕ್ಲಿಕ್ ಮೂಲಕ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ಲಿಸ್ಟ್ ಚೆಕ್ ಮಾಡಬಹುದು. ಈ ಕೆಳಗಿನ ಹಂತಗಳನ್ನು ಪಾಲಿಸಿ.

  • ಮೊದಲಿಗೆ https://pmkisan.gov.in/ ಸರ್ಕಾರದ ಈ ಅಧಿಕೃತ ವೆಬ್ಸೈಟ್ಗೆ ಹೋಗಿ. ಬಲಭಾಗದಲ್ಲಿ ಫಾರ್ಮರ್ಸ್ ಕಾರ್ನರ್ ಎನ್ನುವ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.
  • ಈಗ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಇತ್ತೀಚಿನ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು ಅದನ್ನು ನೀವು ಕಾಣಬಹುದು ಇದಕ್ಕಾಗಿ ನಿಗದಿತ ಸ್ಥಳದಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್, ಗ್ರಾಮ ಮೊದಲಾದವುಗಳನ್ನು ಆಯ್ಕೆ ಮಾಡಿ ಭರ್ತಿ ಮಾಡಬೇಕು.
  • ಮುಂದಿನ ಹಂತದಲ್ಲಿ ಸಬ್ಮಿಟ್ ಎಂದು ಕೊಟ್ಟರೆ ನಿಮಗೆ ಸಂಪೂರ್ಣ ಗ್ರಾಮದ ಪಟ್ಟಿಯೇ ಕಾಣಿಸುತ್ತದೆ. ನೀವು ಇದರಲ್ಲಿ ನಿಮ್ಮ ಹೆಸರು ಇದೆಯಾ ಇಲ್ವಾ ಎನ್ನುವುದನ್ನು ಚೆಕ್ ಮಾಡಿಕೊಳ್ಳಬಹುದು.
  • ಒಂದು ವೇಳೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ ಎಂದಾಗಿದ್ದರೆ ಯಾಕೆ ಸ್ಥಗಿತಗೊಂಡಿದೆ ಅದಕ್ಕೆ ಕಾರಣಗಳೇನು? ಎನ್ನುವುದನ್ನು ಪರಿಶೀಲಿಸಬಹುದು.
  • ಇದಕ್ಕಾಗಿ ಮೊದಲು ಇದೇ ವೆಬ್ಸೈಟ್ನ ಫಾರ್ಮರ್ ಕಾರ್ನರ್ Know Your Status ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಈಗ ಹೊಸ ಪುಟ ತೆಗೆದುಕೊಳ್ಳುತ್ತದೆ.
  • ನಂತರ ನಿಮ್ಮ ನೋಂದಣಿ ಸಂಖ್ಯೆಯನ್ನು ಹಾಕಬೇಕು ಬಳಿಕ ಕ್ಯಾಪ್ಚ ಕೋಡ್ ಭರ್ತಿ ಮಾಡಿದ್ರೆ ನಿಮ್ಮ ಮೊಬೈಲ್ ಗೆ ಓಟಿಪಿ ಕಳುಹಿಸಲಾಗುತ್ತದೆ.
  • ಅದರ ಲಿಂಕ್ ಮಾಡಲಾಗಿರುವ ಮೊಬೈಲ್ ಸಂಖ್ಯೆಗೆ ಓಟಿಪಿ ಬಂದ ನಂತರ ಅದನ್ನು ನಮೂದಿಸಿ ನೀವು ನಿಮ್ಮ ಸ್ಟೇಟಸ್ ಚೆಕ್ ಮಾಡಬಹುದು.
  • ನೋಂದಣಿ ಸಂಖ್ಯೆ ನಿಮಗೆ ಗೊತ್ತಿಲ್ಲದೆ ಇದ್ದಲ್ಲಿ ನೋಂದಣಿ ಸಂಖ್ಯೆ ಮೇಲಿನ ನೀಲಿ ಬಣ್ಣದ ಬಾರ್ ಮೇಲೆ ಬರೆಯಲಾಗಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ, ಆಧಾರ್ ಸಂಖ್ಯೆ ಅಥವಾ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ನಮೂದಿಸಲು ಕೇಳುತ್ತದೆ. ಆಗ ಮತ್ತೆ ಕ್ಯಾಪ್ಚ ಕೋಡ್ ನಮೂದಿಸಬೇಕು. ನಂತರ ನೋಂದಣಿ ಸಂಖ್ಯೆಯನ್ನು ಪಡೆಯುತ್ತೀರಿ.
  • ಈ ನೋಂದಣಿ ಸಂಖ್ಯೆ ಸಿಕ್ಕ ನಂತರ ಮೊದಲೇ ಹೇಳಿರುವ ಹಂತಗಳನ್ನು ಪುನಃ ಅನುಸರಿಸಿ ಆಗ ನಿಮ್ಮ ಖಾತೆಗೆ ಹಣ ಬರುತ್ತಯೋ ಇಲ್ಲವೋ ಎನ್ನುವುದನ್ನು ಚೆಕ್ ಮಾಡಿಕೊಳ್ಳಬಹುದು.

advertisement

Leave A Reply

Your email address will not be published.