Karnataka Times
Trending Stories, Viral News, Gossips & Everything in Kannada

BYD Seal EV: ಟೆಸ್ಲಾ ಕಥೆ ಮುಗಿತು, 570KM ರೇಂಜ್ ಕೊಡುವ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆ!

advertisement

ಈಗಂತೂ ಎಲೆಕ್ಟ್ರಿಕ್ ಯುಗ ಎಂದು ಹೇಳಬಹುದು. ಮಕ್ಕಳ ಆಟಿಕೆಯಿಂದ ಸಾಮಾನ್ಯ ಜನರು ಓಡಿಸುವ ಕಾರು, ಬೈಕ್, ಸ್ಕೂಟರ್ ವರೆಗೆ ಎಲ್ಲವೂ ಎಲೆಕ್ಟ್ರಾನಿಕ್ ಮಯವಾಗಿದೆ. ಇದು ಪ್ರಕೃತಿಗೆ ವರದಾನ ಆಗುವ ಜೊತೆಗೆ ಹಣವನ್ನು ಸಹ ಉಳಿತಾಯ ಮಾಡಲಿದೆ. ಈ ನಿಟ್ಟಿನಲ್ಲಿ ಪ್ರತಿಷ್ಠಿತ ಕಾರು ಕಂಪೆನಿಗಳು ಎಲೆಕ್ಟ್ರಿಕ್ ಕಾರ್ ಗಳಿಗೆ ಅಧಿಕ ಪ್ರಾತಿನಿಧ್ಯ ನೀಡುತ್ತಿದ್ದು BYD ಎಲೆಕ್ಟ್ರಿಕ್ ಕಾರಿನ ಬೆಲೆ, ವೈಶಿಷ್ಟ್ಯ ಇತರ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸಲಿದ್ದೇವೆ.

ಮಾರುಕಟ್ಟೆಯಲ್ಲಿ ಪ್ರಬಲ ಪೈಪೋಟಿ

ಎಲೆಕ್ಟ್ರಿಕ್ ಕಾರುಗಳ ನಡುವೆ ಜಾಗತಿಕ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ಇದೆ. ಟೆಸ್ಲಾ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಪೈಪೋಟಿ ನೀಡುತ್ತಿರುವಾಗಲೇ ಅದರ ಬೆನ್ನಿಗೆ ಬಿವೈಡಿ ಕಾರು ಕೂಡ ಭರ್ಜರಿ ಪೈಪೋಟಿ ನೀಡಲು ಮುಂದಾಗಿದೆ. ಹೀಗಾಗಿಯೇ BYD ಕಾರು ತನ್ನ ಸೀಲ್ ಎಲೆಕ್ಟ್ರಿಕ್ ಕಾರನ್ನು ಮಾರ್ಚ್ 5 ರಂದು ಬಿಡುಗಡೆ ಮಾಡಲು ಸಜ್ಜಾಗಿದೆ. ಹಾಗಾದರೆ ಇದರ ವೈಶಿಷ್ಟ್ಯ ಯಾವ ರೀತಿ ಇದೆ ಎಂಬ ಇತ್ಯಾದಿ ಮಾಹಿತಿ ಇಲ್ಲಿದೆ.

advertisement

BYD Seal EV ಕಾರಿನ ವೈಶಿಷ್ಟ್ಯ ಹೇಗಿದೆ?

  • BYD ಕಾರಿನಲ್ಲಿ 82.5 KWH ಬ್ಯಾಟರಿ ಹೊಂದಿದೆ.
  • ಒಂದು ಚಾರ್ಜಿನಲ್ಲಿ 500km ವರೆಗೆ ಪ್ರಯಾಣ ಮಾಡಬಹುದು.
  • ಈ ಒಂದು ಕಾರಿನಲ್ಲಿ ಹಿಂದಿನ ಆ್ಯಕ್ಸಲ್ ಶಾಶ್ವತ ಮೋಟಾರ್ ಅನ್ನು ಸಹ ಅಳವಡಿಸಲಾಗಿದೆ.
  • 5.9 ಸೆಕೆಂಡ್ ನಲ್ಲಿ 0 ದಿಂದ 100km ವೇಗವನ್ನು ಇದು ನೀಡಲಿದೆ‌.
  • ಇದರಲ್ಲಿ ಸೀಲ್ ಬ್ಲೇಡ್ ಬ್ಯಾಟರಿ ತಂತ್ರಜ್ಞಾನ ಹೊಂದಿರಲಾಗಿದೆ.
  • 150kwh ಬ್ಯಾಟರಿ ಚಾರ್ಜ್ ಮಾಡಬಹುದು.
  • 37ನಿಮಿಷದಲ್ಲಿ 80% ಚಾರ್ಜಿಂಗ್ ಮಾಡಬಹುದು.
  • 11 KWH AC ಚಾರ್ಜ್ ನೊಂದಿಗೆ 8.6ಗಂಟೆ ಫುಲ್ ಚಾರ್ಜ್ ಮಾಡಬಹುದು.

BYD Seal EV ಬೆಲೆ ಎಷ್ಟು?

ಈ ಒಂದು BYD ಸೀಲ್ (BYD Seal) ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಜನಾಕರ್ಷಣೀಯವಾಗಿದೆ. 16.6ಇಂಚಿನ ಇನ್ ಫೋಟೈನ್ ಮೆಂಟ್ ಸಿಸ್ಟಂ ಹೊಂದಿದೆ. ಅದೇ ರೀತಿ 10.25 ಇಂಚಿನ ಡಿಜಿಟಲ್ ಇನ್ ಸ್ಟ್ರುಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇಷ್ಟೆಲ್ಲ ಗುಣ ವಿಶೇಷ ಇರುವ ಇದರ ಬೆಲೆ ಕೂಡ ಅಧಿಕ ಎಂದು ಹೇಳಬಹುದು. ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 50 ಲಕ್ಷ ರೂಪಾಯಿ ಆಗಿದೆ. ಹಾಗಾಗಿ ಬೆಲೆ ದುಬಾರಿಯಾದರೂ ಶ್ರೀಮಂತ ಸ್ಥಿತಿ ವಂತರಿಗೆ ಲಕ್ಶೂರಿ ಕಾರಿನ ಆಯ್ಕೆಯಲ್ಲಿ ಈಕಾರು ಮುಂಚುಣಿಯಲ್ಲಿದೆ.

ಒಟ್ಟಾರೆಯಾಗಿ ಬಿವೈಡಿ ಕಾರು ಸುಧಾರಿತ ಫೀಚರ್ಸ್ ಗಳ ಜೊತೆಗೆ ಅಧಿಕ ಸುರಕ್ಷತಾ ವ್ಯವಸ್ಥೆ ಸಹ ಹೊಂದಿದೆ. ಉತ್ತಮ ಗುಣಮಟ್ಟದ ಟೈಯರ್, ಏರ್ ಬ್ಯಾಗ್, ಕಮಾಂಡರ್ ಸಿಸ್ಟಂ, ವೈರ್ ಲೆಸ್ ಬ್ಲುಟುತ್ ಹಾಗೂ ಮೊಬೈಲ್ ಚಾರ್ಜಿಂಗ್ ಈ ತರಹದ ಅನೇಕ ಫೀಚರ್ಸ್ ಸಹ ಇದೆ. ಇಲ್ಲಿ ಕೂಡ ಡೌನ್ ಪೇಮೆಂಟ್ ಆಯ್ಕೆ ಇರಲಿದ್ದು ಮಾಸಾಂತ್ಯಕ್ಕೆ ಹಣ ನೀಡಿ ಇಎಂಐ ಮೂಲಕ ಈ ಕಾರು ಪಡೆಯಬಹುದು.

advertisement

Leave A Reply

Your email address will not be published.