Karnataka Times
Trending Stories, Viral News, Gossips & Everything in Kannada

ATM Card: ಇನ್ಮೇಲೆ ಈ ಕೆಲಸ ಮಾಡಲು ATM ಕಾರ್ಡ್ ಅಗತ್ಯವಿಲ್ಲ! ಹೊಸ ನಿಯಮ.

advertisement

ನಮ್ಮ ಭಾರತ ದೇಶ ಇತ್ತೀಚಿನ ವರ್ಷಗಳಲ್ಲಿ ವೇಗವಾಗಿ ಬೆಳೆದಿರುವ ರೀತಿ ಅದರ ವಿಶೇಷವಾಗಿ ಡಿಜಿಟಲೀಕರಣದ (Digitalized ) ಕಾರಣದಿಂದಾಗಿ ಹಣಕಾಸಿನ ವಿಚಾರದಲ್ಲಿ ನಾವು ಯಾವುದೇ ರೀತಿಯ ಸಮಸ್ಯೆಗಳನ್ನು ಅನುಭವಿಸ ಬೇಕಾಗಿರುವಂತಹ ಅಗತ್ಯ ಇರುವುದಿಲ್ಲ. ಯಾಕೆಂದ್ರೆ UPI ಮೂಲಕ ಎಲ್ಲವೂ ಕೂಡ ಬೆರಳಂಚಿನಲ್ಲಿ ನಡೆದು ಹೋಗುತ್ತೆ. ಇವತ್ತಿನ ಲೇಖನದಲ್ಲಿ ಕೂಡ ನಾವು ನಿಮಗೆ ಯಾವ ರೀತಿಯಲ್ಲಿ ಎಟಿಎಂ ಕಾರ್ಡ್ (ATM Card) ಇಲ್ಲದೆ ನಗದು ಹಣವನ್ನು ತೆಗೆದುಕೊಳ್ಳುವುದು ಅನ್ನೋದರ ಬಗ್ಗೆ ತಿಳಿಸಲು ಹೊರಟಿದ್ದು ತಪ್ಪದೇ ಲೇಖನವನ್ನು ಕೊನೆಯವರೆಗೂ ಓದಿ.

WhatsApp Join Now
Telegram Join Now

ಸಾಕಷ್ಟು ಬಾರಿ ಎಟಿಎಂ ಕಾರ್ಡ್ ಅನ್ನು ಮರೆತಿರಬಹುದು:

 

Image Source: CNBC

 

ಸಾಕಷ್ಟು ಬಾರಿ ನಾವು ಹೊರಗೆ ಶಾಪಿಂಗ್ ಅಥವಾ ಯಾವುದೇ ರೀತಿಯ ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಹೊರಟಾಗ ಮನೆಯಲ್ಲಿಯೇ ಎಟಿಎಂ ಕಾರ್ಡ್ (ATM Card) ಅನ್ನು ಮರೆತು ಬಂದಿರುವಂತಹ ಘಟನೆಗಳು ಸಾಕಷ್ಟು ಬಾರಿ ನಡೆದಿವೆ. ಆದರೆ ಕೆಲವೇ ಕೆಲವು ಜನರಿಗೆ ಮಾತ್ರ ಗೊತ್ತಿರೋದು ಎಟಿಎಂ ಕಾರ್ಡ್ ಇಲ್ಲದೆ ಕೂಡ ನಗದು ಹಣವನ್ನು ಪಡೆಯಬಹುದು ಅನ್ನೋದು.

ಎಟಿಎಂ ಕಾರ್ಡ್ ಇಲ್ಲದೆ ನಗದು ಪಡೆಯಿರಿ:

 

advertisement

Image Source: Zee Business

 

ಒಂದು ವೇಳೆ ನಿಮ್ಮ ಬಳಿ ಸ್ಮಾರ್ಟ್ ಫೋನ್ (Smartphone) ಇದ್ದು ಹಾಗೂ ಅದರಲ್ಲಿ ನೀವು ಬಳಕೆ ಮಾಡುವಂತಹ ಫೋನ್ ಪೇ ಹಾಗೂ ಗೂಗಲ್ ಪೇ ನಂತಹ UPI ಅಪ್ಲಿಕೇಶನ್ ಗಳು ಇದ್ರೆ ಈ ಮೂಲಕ ನೀವು ಸುಲಭವಾಗಿ ನಗದು ಹಣವನ್ನು ಪಡೆದುಕೊಳ್ಳಬಹುದು.

ಇದಕ್ಕಾಗಿ ನೀವು ಮೊದಲು ನಿಮ್ಮ ಹತ್ತಿರ ಇರುವಂತಹ ಎಟಿಎಂ ಮಷೀನ್ ಗೆ ಹೋಗಿ ಅಲ್ಲಿ ಎಟಿಎಂ ಕಾರ್ಡ್ (ATM Card) ಇಲ್ಲದೆ ಹಣವನ್ನು ಪಡೆದುಕೊಳ್ಳುವಂತಹ ಆಪ್ಷನ್ ಅನ್ನು ಆಯ್ಕೆ ಮಾಡಬೇಕಾಗಿರುತ್ತದೆ. UPI ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಂತಹ ಆಪ್ಷನ್ ಅನ್ನು ಆಯ್ಕೆ ಮಾಡಿ ಸ್ಕ್ಯಾನ್ ಮಾಡಿದ ನಂತರ ನಿಮಗೆ ಹಣ ದೊರಕುತ್ತದೆ.

ಫ್ರಾಡ್ ಗಳಿಂದ ಬಚಾವ್ ಆಗೋದಕ್ಕೆ ಸುಲಭ ವಿಧಾನ:

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿರುವಂತೆ ಈ ರೀತಿ ನಗದು ಹಣವನ್ನು ಪಡೆದುಕೊಳ್ಳುವುದು ಕೇವಲ ಸುಲಭ ಮಾತ್ರವಲ್ಲದೆ ಹಣವನ್ನು ಎಟಿಎಂನಿಂದ ಪಡೆಯುವುದಕ್ಕೆ ಸುರಕ್ಷಿತ ವಿಧಾನ ಕೂಡ ಆಗಿದೆ ಎಂಬುದಾಗಿ ಹೇಳುತ್ತದೆ. ಇದರಿಂದಾಗಿ ATM Clowning ಆಗೋದಿಲ್ಲ ಎನ್ನುವಂತಹ ಅಧಿಕೃತ ಮಾಹಿತಿಯನ್ನು ಕೂಡ ಕೇಂದ್ರೀಯ ಬ್ಯಾಂಕಿಂಗ್ ನೀಡಿದೆ. ಹೀಗಾಗಿ ಈ ಮೂಲಕ ನೀವು ಸುರಕ್ಷಿತವಾಗಿ ಎಟಿಎಂ ಕಾರ್ಡ್ (ATM Card) ಇಲ್ಲದೆ ಎಟಿಎಂ ಮೂಲಕ ನಗದು ಹಣವನ್ನು ಪಡೆದುಕೊಳ್ಳಬಹುದು ಎಂಬುದನ್ನು ನೀವು ಈ ಲೇಖನದ ಮೂಲಕ ತಿಳಿದುಕೊಂಡಿದ್ದೀರಿ.

ಒಂದು ವೇಳೆ ನೀವು ಕೂಡ ಎಟಿಎಂ ಕಾರ್ಡ್ ಅನ್ನು ಮನೆಯಲ್ಲಿಯೇ ಮರೆತು ಬಂದಿದ್ರೆ ಈ ರೀತಿ ಚಿಂತೆ ಪಡಬೇಕಾದ ಅಗತ್ಯವಿಲ್ಲ ಈ ಮೇಲೆ ಹೇಳಿರುವಂತಹ ಪ್ರಕ್ರಿಯೆಗಳನ್ನು ಪಾಲಿಸುವ ಮೂಲಕ ನೀವು ಅತ್ಯಂತ ಸುಲಭ ಮತ್ತು ಸುರಕ್ಷಿತ ರೂಪದಲ್ಲಿ ಹಣವನ್ನು ಪಡೆದುಕೊಳ್ಳಬಹುದಾಗಿದೆ.

advertisement

Leave A Reply

Your email address will not be published.