Karnataka Times
Trending Stories, Viral News, Gossips & Everything in Kannada

RBI: Paytm ಬಳಿಕ ಮತ್ತೊಂದು ಕಂಪನಿಯ ವಹಿವಾಟು ನಿರ್ಭಂಧಿಸಿದ ಆರ್ ಬಿ ಐ!

advertisement

ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ವ್ಯವಹಾರ ಹಾಗೂ ಇತರ ಫೈನಾನ್ಸ್ ಬ್ಯಾಂಕ್ ಗಳ ವ್ಯವಹಾರದ ಮೇಲೆ ಆರ್‌ ಬಿಐ ಬಹಳ ಕಟ್ಟುನ ಕ್ರಮ ಕೈಗೊಳ್ಳುತ್ತಿದೆ. ಯಾವುದೇ ನಿಯಮ ಉಲ್ಲಂಘನೆ ಆಗಲಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಂತಹ ಕಂಪನಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಪೇಟಿಎಂ ಪೇಮೆಂಟ್ ಬ್ಯಾಂಕ್ ನ ಅಪ್ಲಿಕೇಶನ್ ಜನರು ಬಳಸದೆ ಇರುವಂತೆ ಆರ್‌ಬಿಐ ತಿಳಿಸಿದೆ.

ಆರ್ ಬಿ ಐ ನ ಹಣಕಾಸು ನಿಯಮಗಳನ್ನ ಉಲ್ಲಂಘನೆ ಮಾಡಿರುವ ಪೇಟಿಎಂ ಇನ್ಮುಂದೆ ಕಾರ್ಯ ನಿರ್ವಹಿಸುವಂತೆ ಇಲ್ಲ ಎಂದು ಆರ್ ಬಿ ಐ ನಿರ್ಬಂಧವನ್ನು ಹೇರಿದೆ. ಜೊತೆಗೆ ಜನರಿಗೂ ಕೂಡ ಈ ಅಪ್ಲಿಕೇಶನ್ ಮೂಲಕ ಹಣಕಾಸಿನ ವ್ಯವಹಾರ ಮಾಡದಂತೆ ಸೂಚಿಸಲಾಗಿದೆ. ಇದೀಗ ಪೇಟಿಎಂ ನಂತರ ಮತ್ತೊಂದು ಬ್ಯಾಂಕ್ ಮೇಲೆ ಆರ್ ಬಿ ಐ (RBI) ನಿರ್ಬಂಧ ಹೇರಿಕೆ ಮಾಡಿದೆ.

IIFL Finance Company ಯನ್ನು ಮಾರ್ಚ್ 4, 2024 ರಿಂದ ಆರ್‌ಬಿಐ ನಿಷೇಧ ಮಾಡಿದೆ. ಐ ಐ ಎಫ್ ಎಲ್ ಫೈನಾನ್ಸ್ ಕಂಪನಿ ಚಿನ್ನದ ಮೇಲಿನ ಸಾಲ ನೀಡುವ ವ್ಯವಹಾರಕ್ಕೆ ಆರ್‌ಬಿಐ ಕಡಿವಾಣ ಹಾಕಿದೆ. ಈ ಕಂಪನಿ ಇನ್ನು ಮುಂದೆ ಗ್ರಾಹಕರ ಚಿನ್ನ ಅಡವಿಟ್ಟು ಹಣ ಕೊಡುವ ಕೆಲಸವನ್ನು ಮಾಡುವಂತಿಲ್ಲ.

advertisement

ಈ ಒಂದು ವ್ಯವಹಾರ ಬಿಟ್ಟು ಬೇರೆ ಹಣಕಾಸಿನ ವ್ಯವಹಾರ ಮಾಡಬಹುದು!

ಆರ್‌ಬಿಐ ತಿಳಿಸಿರುವಂತೆ, ಚಿನ್ನದ ಮೇಲಿನ ಸಾಲ ಸೌಲಭ್ಯ ನೀಡುವುದನ್ನು ಹೊರತುಪಡಿಸಿ ಇತರ ಯಾವುದೇ ಪೋರ್ಟ್ಫೋಲಿಯೋವನ್ನು ಮುಂದುವರೆಸಬಹುದು. ಚಿನ್ನದ ಮೇಲಿನ ಸಾಲದ ಮೇಲ್ವಿಚಾರಣೆಯಲ್ಲಿ ಅಕ್ರಮ ನಡೆದಿರುವುದು ಆರ್‌ಬಿಐ ಗುರುತಿಸಿದೆ. ಚಿನ್ನದ ಮೌಲ್ಯ ಹಾಗೂ ಸಾಲದ ಅನುಪಾತದಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸಿರುವ ಐಎಫ್‌ಸಿ ಫೈನಾನ್ಸ್ ಕಂಪನಿ ಇನ್ಮುಂದೆ ಚಿನ್ನದ ಮೇಲಿನ ಸಾಲವನ್ನು ಗ್ರಾಹಕರಿಗೆ ಒದಗಿಸುವಂತಿಲ್ಲ. ಅದನ್ನು ಹೊರತುಪಡಿಸಿ ಇತರ ವ್ಯವಹಾರಗಳನ್ನು ಮಾಡಬಹುದು ಎಂದು ಆರ್‌ಬಿಐ ಕಟ್ಟುನಿಟ್ಟಾಗಿ ತಿಳಿಸಿದೆ.

IIFL ಫೈನಾನ್ಸ್ ಶೇರು ಕುಸಿತ!

3.94% ರಷ್ಟು ಕುಸಿದು 598 ರೂ. ತಲುಪಿದೆ. ಕಳೆದ 5 ದಿನಗಳಲ್ಲಿ ಈ ಷೇರು 1.51% ರಷ್ಟು ಕುಸಿತ ಕಂಡಿದೆ. ಕಳೆದ ಒಂದು ತಿಂಗಳಲ್ಲಿ 0.67%ರಷ್ಟು ಏರಿಕೆಯಾಗಿತ್ತು. ಒಂದು ವರ್ಷದಲ್ಲಿ ಶೇ.31.75ರಷ್ಟು ಏರಿಕೆ ಕಂಡಿದೆ. IIFL ಫೈನಾನ್ಸ್ ಕಂಪನಿಯ ಮಾರುಕಟ್ಟೆ ಮೌಲ್ಯ 22,816.50 ಕೋಟಿ ರೂ.ಗಳು. ಸದ್ಯ ಈ ಫೈನಾನ್ಸ್ ನಲ್ಲಿ ವ್ಯವಹಾರ ಮಾಡುವ ಗ್ರಾಹಕರು ಆತಂಕ ಪಟ್ಟುಕೊಳ್ಳಬೇಕಾದ ಅಗತ್ಯ ಇಲ್ಲ ಆದರೆ ಇನ್ನು ಮುಂದೆ ಈ ಕಂಪನಿಯ ಮೂಲಕ ಚಿನ್ನದ ಮೇಲಿನ ಸಾಲ ಸೌಲಭ್ಯವನ್ನು ಮಾತ್ರ ಪಡೆದುಕೊಳ್ಳಬಾರದು ಎಂದು ಆರ್‌ಬಿಐ ನ ವಿಶೇಷ ಸೂಚನೆಯಾಗಿದೆ.

advertisement

Leave A Reply

Your email address will not be published.