Karnataka Times
Trending Stories, Viral News, Gossips & Everything in Kannada

9 & 11 Form Karnataka: 9 & 11 ಫಾರ್ಮ್ ಏಕೆ ಅಗತ್ಯ? ಪಡೆಯಲು ಏನೆಲ್ಲಾ ಬೇಕು ಹೊಸ ರೂಲ್ಸ್, ಮನೆ ಕಟ್ಟುವವರಿಗೆ ಉಪಯುಕ್ತ ಮಾಹಿತಿ

advertisement

Form-9 and Form-11 Karnataka: ಸಾಮಾನ್ಯವಾಗಿ ಯಾವುದೇ ಒಬ್ಬ ವ್ಯಕ್ತಿಯ ಆಸ್ತಿಯ ಮಾಲಿಕತ್ವವು ಆತನದ್ದೆ ಎಂದು ಖಚಿತಪಡಿಸಿಕೊಳ್ಳಲು ಮತ್ತು ಆ ಆಸ್ತಿಯು ಆತನ ಹೆಸರಿನಲ್ಲಿಯೇ ಇದೆ ? ಎಂಬುದನ್ನು ತಿಳಿದುಕೊಳ್ಳಲು ಕೆಲವೊಂದು ದಾಖಲೆಗಳ ಅಗತ್ಯ ಇರುತ್ತದೆ. ಇನ್ನು ಅಂತಹ ದಾಖಲೆಗಳನ್ನು ಹೊಂದಿರುವುದು ಬಹಳ ಅವಶ್ಯಕವಾದ ವಿಷಯವಾಗಿದೆ. ಇನ್ನು ಸಿಟಿ ಕಾರ್ಪೊರೇಷನ್ ನಲ್ಲಿ ಬರುವಂತಹ ದಾಖಲೆಗಳಿಗೆ ಖಾತೆ ಎಂದು ಗೃಹ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ದಾಖಲೆಗಳಿಗೆ 9 & 11 ಫಾರ್ಮ್ ಎಂದು ಕರೆಯಲಾಗುತ್ತದೆ.

9 & 11 ದಾಖಲೆಯು ಅಗತ್ಯವಿದೆಯೇ ಎಂದು ತಿಳಿದುಕೊಳ್ಳೋಣ:

ಈ ದಾಖಲೆಯನ್ನು ಪಡೆದುಕೊಳ್ಳುವಂತಹ ಅಗತ್ಯ ಹೆಚ್ಚಾಗಿದೆ, ಕಾರಣ ಈ ದಾಖಲೆಗಳಲ್ಲಿ ವ್ಯಕ್ತಿಯ ಭಾವಚಿತ್ರ, ಹೆಸರು, ಸರ್ವೆ ನಂಬರ್, ಆಸ್ತಿಯ ಬೌಂಡರಿಗಳು ಏನೇನು ಎಂಬುದರ ಅವಶ್ಯಕ ಮಾಹಿತಿಗಳು ಲಭ್ಯವಿರುತ್ತದೆ. ಒಬ್ಬ ವ್ಯಕ್ತಿ ಆಸ್ತಿಯ ಮೇಲೆ ಲೋನ್ ತೆಗೆದುಕೊಳ್ಳಬೇಕು ಎಂಬ ಸಂದರ್ಭ ಬಂದಾಗ ಆಸ್ತಿಯು ಯಾರ ಹೆಸರಿಗೆ ಒಳಪಟ್ಟಿದೆ, ಮತ್ತು ಅದು ಲೀಗಲ್ ಒಪೀನಿಯನ್ (Legal Opinion) ಆಗಿ ಇದೆಯೇ? ಎಂಬುದರ ಕುರಿತಾಗಿ ಸಂಬಂಧಪಟ್ಟಂತಹ ವಕೀಲರು ಈ 9 & 11 ದಾಖಲೆಯನ್ನು ಕೇಳುತ್ತಾರೆ. ಇದು ಗೃಹ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಆಸ್ತಿಗೆ ಮಾತ್ರ ಸಂಬಂಧಪಟ್ಟಿರುತ್ತದೆ.

What for form-9 and form-11 are used?
Image Source: DNA India

advertisement

ಹಾಗಾದರೆ 9 & 11 ಫಾರ್ಮ್ ಮಾಡಿಸಿಕೊಳ್ಳಲು ಬೇಕಾದಂತಹ ಅಗತ್ಯ ದಾಖಲೆಗಳು ಯಾವುವು ಎಂದು ತಿಳಿದುಕೊಳ್ಳೋಣ:

ಈ ದಾಖಲೆಯನ್ನು ಪಡೆದುಕೊಳ್ಳಲು ಮೊದಲು ಅರ್ಜಿದಾರರ ಹೆಸರು ಮತ್ತು ಅರ್ಜಿದಾರರು ಸೈಟ್ ನಾ ಮುಂಭಾಗದಲ್ಲಿ ನಿಂತು ತೆಗೆಸಿಕೊಂಡಿರುವಂತಹ ಫೋಟೋ ಕಾಪಿ, ಮಾಲೀಕರ ಪಾಸ್ಪೋರ್ಟ್ ಸೈಜ್ ನ ಫೋಟೋ, ಪಹಣಿಯ ಪತ್ರ (RTC), ಕಟ್ಟಡದ ನಿವೇಶನದ ನಕ್ಷೆ , ಮತ್ತು ಆಸ್ತಿಯ ಮಾಲೀಕರಿಗೆ ಆಸ್ತಿಯು ಪಿತ್ರಾರ್ಜಿತವಾಗಿ ಬಂದಿದ್ದರೆ ಅಥವಾ ಸ್ವತಃ ಖರೀದಿಸಿದ್ದು ಆಗಿದ್ದಾರೆ ರಿಜಿಸ್ಟ್ರೇಷನ್ ನ ಮೂಲಪತ್ರ, ತಹಶೀಲ್ದಾರರಿಂದ ಪಡೆದಂತಹ(Conversion copy) ಭೂ ಪರಿವರ್ತನ ಆದೇಶ.

ನಗರಾಭಿವೃದ್ಧಿ ಪ್ರಾಧಿಕಾರದ ಬಡಾವಣೆ ನಕ್ಷೆ ಮತ್ತು ಆದೇಶ, ರೇಷನ್ ಕಾರ್ಡ್ ಜೆರಾಕ್ಸ್, ಮೊಬೈಲ್ ನಂಬರ್, ಮಾಲೀಕರ ಮತದಾರರ ಚೀಟಿ ಜೆರಾಕ್ಸ್ , ನೋಟರಿ ಆಗಿರುವಂತಹ ಅಫಿಡವಿಟ್ ಇಷ್ಟು ದಾಖಲೆಗಳನ್ನು ಅರ್ಜಿದಾರರು ಸಂಬಂಧ ಪಟ್ಟಂತಹ ಗ್ರಾಮ ಪಂಚಾಯಿತಿಯಲ್ಲಿ ತೆಗೆದುಕೊಂಡು ಹೋಗಿ ಅರ್ಜಿ ಸಲ್ಲಿಸುವುದರ ಮೂಲಕ 9 & 11 ಫಾರ್ಮ್ ದಾಖಲೆಯನ್ನು ಮಾಡಿಸಿಕೊಳ್ಳಬಹುದು. ಮತ್ತು ಅರ್ಜಿ ಸಲ್ಲಿಸಿದ ಒಂದು ತಿಂಗಳ ಒಳಗಾಗಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಅರ್ಜಿದಾರರು ನೀಡಿರುವ ದಾಖಲೆಗಳನ್ನು ಪರಿಶೀಲಿಸಿದ ನಂತರ, ಈ 9 & 11 ದಾಖಲೆಯನ್ನು ಸಂಬಂಧಪಟ್ಟಂತಹ ಮಾಲೀಕರಿಗೆ ನೀಡುತ್ತಾರೆ.

What for form-9 and form-11 are used?
Image Source: DNA India

advertisement

Leave A Reply

Your email address will not be published.