Karnataka Times
Trending Stories, Viral News, Gossips & Everything in Kannada

Crop Insurance: ಬೆಳೆ ವಿಮೆ 2 ನೇ ಕಂತಿನ ಹಣ ಬಿಡುಗಡೆ ದಿನಾಂಕ ಘೋಷಣೆ! ಇಲ್ಲಿದೆ ಸಿಹಿಸುದ್ದಿ

advertisement

ರೈತರು ಈ ದೇಶದ ಮುಖ್ಯ ಅಂಗವಾಗಿದ್ದು, ರೈತರ ಏಳಿಗೆಗಾಗಿ ಸರಕಾರ ಹಲವು ರೀತಿಯ ಯೋಜನೆಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿದೆ. ಈಗಾಗಲೇ ಕೃಷಿ ಯಲ್ಲಿ ಉತ್ತೇಜನ ಕಾಣಲು ಸರಕಾರವು ಕಿಸಾನ್ ಯೋಜನೆ, ರೈತ ಕೃಷಿ ಯೋಜನೆ ಇತ್ಯಾದಿ ಯೋಜನೆಗಳನ್ನು ಘೋಷಣೆ ಮಾಡಿದ್ದು, ರೈತರಿಗೆ ಕೃಷಿಯಲ್ಲಿ ಅಭಿವೃದ್ಧಿ ಕಾಣಲು ಪ್ರೋತ್ಸಾಹ ವನ್ನು ನೀಡುತ್ತ ಬಂದಿದೆ. ಅದೇ ರೀತಿ ಈ ಭಾರಿ ಬರದಿಂದ ರೈತರಿಗೆ ಕೃಷಿಯಲ್ಲಿ ಬಹಳಷ್ಟು ನಷ್ಟ ಉಂಟಾಗಿದ್ದು ರೈತರು ತೊಂದರೆಗೆ ಸಿಲುಕಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಮತ್ತು‌ ಕೇಂದ್ರ ಸರಕಾರ ಬೆಳೆ ವಿಮೆ (Crop Insurance) ಪರಿಹಾರ ನೀಡುವುದಾಗಿ ತಿಳಿಸಿದೆ.‌ ಈಗಾಗಲೇ ರಾಜ್ಯ ಸರಕಾರದಿಂದ ಮೊದಲನೇ ಕಂತು ರೈತರ ಖಾತೆಗೆ ಜಮೆ ಯಾಗಿದ್ದು ಎರಡನೇ ಕಂತಿನ ಮೊತ್ತವು ಅತೀ ಶೀಘ್ರದಲ್ಲಿ ಖಾತೆಗೆ ಹಣ ಜಮೆಯಾಗಲಿದೆ.

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ:

ಈ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದ್ದು ನೈಸರ್ಗಿಕ ವಿಕೋಪಗಳಿಂದ ಬೆಳೆ ನಷ್ಟದ ಸಂದರ್ಭಗಳಲ್ಲಿ ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಮೂಲಕ ನೈಸರ್ಗಿಕ ವಿಕೋಪಗಳು, ಆಲಿಕಲ್ಲು ಬಿರುಗಾಳಿ, ಬರ, ಅಕಾಲಿಕ ಮಳೆ ಸಂದರ್ಭದಲ್ಲಿ ಬೆಳೆ ನಷ್ಟ ಆದಾಗ ಸರಕಾರವು ರೈತರಿಗೆ ಪರಿಹಾರ ಒದಗಿಸುತ್ತದೆ. ಅದೇ ರೀತಿ ಈ ಯೋಜನೆಯ ಮೂಲಕ‌ ರೈತರಿಗೆ ಕಡಿಮೆ ಪ್ರೀಮಿಯಂ ಬೆಲೆಗೆ ಬೆಳೆ ವಿಮೆ (Crop Insurance) ಯನ್ನು ನೀಡುತ್ತದೆ.

Image Source: iStock

advertisement

ಎರಡನೇ ಕಂತಿನ ಬೆಳೆ ವಿಮೆ (Crop Insurance) ಪರಿಹಾರ?

ಈಗಾಗಲೇ ರಾಜ್ಯ ಸರಕಾರ ಮೊದಲ ಕಂತನ್ನು ಬಿಡುಗಡೆ ಮಾಡಿದ್ದು ಕೇಂದ್ರ ಸರಕಾರ ಇನ್ನಷ್ಟೇ ಬೆಳೆ ವಿಮೆ ಪರಿಹಾರ ನೀಡಬೇಕಾಗಿದೆ. ಈ ಬಗ್ಗೆ ರಾಜ್ಯ ಸರಕಾರವು ಕೇಂದ್ರ ಸರಕಾರದ ವಿರುದ್ದ ಸುಪ್ರೀಂ ಕೋರ್ಟ್​ನಲ್ಲಿ ಆರ್ಟಿಕಲ್ 32ರ ಅಡಿಯಲ್ಲಿ ರಿಟ್ ಅರ್ಜಿ ಸಲ್ಲಿಕೆ ಕೂಡ ಮಾಡಿದೆ. ಕೇಂದ್ರ ಸರಕಾರವು ಹಣ ಬಿಡುಗಡೆ ಮಾಡಿದ ನಂತರ ಎರಡನೇ ಕಂತಿನ ಹಣವೂ ರೈತರ ಖಾತೆಗೆ ಜಮೆ ಯಾಗಬಹುದು ಎನ್ನಲಾಗಿದೆ.‌ ಈಗಾಗಲೇ ಮೊದಲ ಕಂತು ಬಿಡುಗಡೆಯಾಗಿದ್ದು ಎರಡನೇ ಕಂತಿನ ಬೆಳೆ ವಿಮೆ ಮೊತ್ತ ಯಾವಾಗ ಸಿಗಲಿದೆ ಎಂದು ಕಾದು ನೋಡ್ಬೆಕು‌.

ಹಣ ಜಮೆಯಾಗಿರುವ ಬಗ್ಗೆ ಚೆಕ್ ಮಾಡಿ

ಮೊದಲಿಗೆ ನೀವು https://samrakshane.karnataka.gov.in ಈ ವೆಬ್ ಸೈಟ್ ಗೆ ಭೇಟಿ ನೀಡಿ, ನಂತರದಲ್ಲಿ ನಿಮ್ಮ ಆಧಾರ್ ನಂಬರ್ ಅನ್ನು ಹಾಕಿ, ನಂತರದಲ್ಲಿ ಬೆಳೆ ವಿಮೆಗೆ ಅರ್ಜಿ ಸಲ್ಲಿಕೆ ಮಾಡಿದ ಸಂದರ್ಭದಲ್ಲಿ ನೀಡಿರುವಂತಹ ಮೊಬೈಲ್ ನಂಬರ್ ಹಾಗೂ ಕ್ಯಾಪ್ಚಾ ಕೋಡ್ ಅನ್ನು ಎಂಟರ್ ಮಾಡುವ ಮೂಲಕ ನೀವು ಹಣ ಜಮೆಯಾಗಿರುವ ಬಗ್ಗೆ ತಿಳಿದುಕೊಳ್ಳಬಹುದು.

advertisement

Leave A Reply

Your email address will not be published.