Karnataka Times
Trending Stories, Viral News, Gossips & Everything in Kannada

Blue Aadhaar Card: ನೀಲಿ ಆಧಾರ್ ಕಾರ್ಡ್ ಎಂದರೇನು? ಅರ್ಜಿ ಸಲ್ಲಿಸುವ ಸರಳ ವಿಧಾನ ಇಲ್ಲಿದೆ!

advertisement

ಆಧಾರ್ ಕಾರ್ಡ್ ಎನ್ನುವುದು ಪ್ರಮುಖ ದಾಖಲೆ. ಪ್ರತಿಯೊಬ್ಬ ಭಾರತೀಯನ ಬಳಿಯೂ ಕೂಡ ಆಧಾರ್ ಕಾರ್ಡ್ ಗುರುತಿನ ಚೀಟಿ ಇದ್ದೇ ಇರುತ್ತದೆ. ಒಂದು ವೇಳೆ ಆಧಾರ್ ಕಾರ್ಡ್ ಇಲ್ಲದೇ ಇದ್ರೆ ಸರ್ಕಾರಿ ಸೌಲಭ್ಯಗಳನ್ನಾಗಲಿ ಅಥವಾ ಸರ್ಕಾರದ ಯೋಜನೆಯ ಪ್ರಯೋಜನಗಳನ್ನಾಗಲಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೆ ನಮ್ಮ ಯಾವುದೇ ರೀತಿಯ ಹಣಕಾಸಿನ ವ್ಯವಹಾರವೂ ಕೂಡ ಆಗುವುದಿಲ್ಲ ಹಾಗಾಗಿ ಭಾರತದಲ್ಲಿ ಪ್ರತಿಯೊಬ್ಬ ಗ್ರಾಹಕನ ಬಳಿ ಇರಲೇಬೇಕಾದ ಕೆ ವೈ ಸಿ ದಾಖಲೆ ಆಗಿದೆ ಆಧಾರ್ ಕಾರ್ಡ್.

12 ಅಂಕಿಯ ಆಧಾರ್ ಗುರುತಿನ ಕಾರ್ಡ್ ಅನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಯುಐಡಿಎಐ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೆ ವಿತರಣೆ ಮಾಡುತ್ತದೆ. “ಬಾಲ ಆಧಾರ್” ಅನ್ನು 2018 ರಲ್ಲಿ ಯುಐಡಿಎಐ ಪರಿಚಯಿಸಿತು. ಇದು ವಿಶೇಷವಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಮಾಡಲಾಗುವ ಆಧಾರ್ ಕಾರ್ಡ್ ಆಗಿದೆ. ಆದರೆ ಈ ಆಧಾರ್ ಕಾರ್ಡ್ ವಯಸ್ಕರಿಗೆ ನೀಡಲಾಗಿರುವ ಆಧಾರ್ ಕಾರ್ಡ್ ನಂತೆ ಇರುವುದಿಲ್ಲ ಮಕ್ಕಳ ಆಧಾರ್ ಕಾರ್ಡ್ ಬಿಳಿಯ ಬಣ್ಣದ ಹೊರತಾಗಿ ನೀಲಿ ಬಣ್ಣದಲ್ಲಿ ವಿತರಣೆ ಮಾಡಲಾಗುತ್ತದೆ. ಹಾಗಾಗಿ ಇದನ್ನು ಬ್ಲೂ ಆಧಾರ್ ಕಾರ್ಡ್ (Blue Aadhaar Card) ಎಂದು ಕೂಡ ಕರೆಯುತ್ತಾರೆ.

advertisement

ಬ್ಲೂ ಆಧಾರ್ ಕಾರ್ಡ್ (Blue Aadhaar Card) ಗೆ ಅರ್ಜಿ ಸಲ್ಲಿಸುವುದು ಹೇಗೆ!

ಐದು ವರ್ಷಕ್ಕಿಂತ ಒಳಗಿನ ಮಕ್ಕಳು ನಿಮ್ಮ ಮನೆಯಲ್ಲಿ ಇದ್ದರೆ ಅವರಿಗೆ ಬಾಲ ಆಧಾರ ಕಾರ್ಡ್ ಮಾಡಿಸುವುದು ಬಹಳ ಮುಖ್ಯ ನವಜಾತ ಮಕ್ಕಳಿಗೂ ಕೂಡ ಬಾಲ ಆಧಾರ್ ಕಾರ್ಡ್ ಮಾಡಿಸಬಹುದು. ಇದಕ್ಕೆ ಮುಖ್ಯವಾಗಿ ಜನನ ಪ್ರಮಾಣ ಪತ್ರ ಅಥವಾ ಆಸ್ಪತ್ರೆಯ ಡಿಸ್ಚಾರ್ಜ್ ಸ್ಲಿಪ್ ಮಾನ್ಯ ದಾಖಲೆಯಾಗಿ ಕೊಡಬೇಕಾಗುತ್ತದೆ. ಇದರ ಜೊತೆಗೆ ಶಾಲೆಯ ಐಡಿಯೊಂದಿಗೆ ಮಕ್ಕಳ ಆಧಾರ ಕೂಡ ಮಾಡಿಕೊಳ್ಳಬಹುದು.

  • ಆನ್ಲೈನ್ ನಲ್ಲಿ ಬಾಲ ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಯಾವ ರೀತಿ ಪ್ರಕ್ರಿಯೆ ಇರುತ್ತದೆ ಎಂಬುದನ್ನು ನೋಡೋಣ.
  • ಮೊದಲಿಗೆ UIDAI ಅಧಿಕೃತ ವೆಬ್ಸೈಟ್ಗೆ ಹೋಗಿ. ಅಲ್ಲಿ ಆಧಾರ್ ಕಾರ್ಡ್ ನೋಂದಣಿ ವಿಭಾಗವನ್ನ ಸರ್ಚ್ ಮಾಡಿ.
  • ಈಗ ಮಗುವಿನ ಅಗತ್ಯ ವಿವರಗಳನ್ನು ನಮೂದಿಸಬೇಕು. ಹಾಗೂ ಪೋಷಕರು ತಮ್ಮ ಫೋನ್ ಸಂಖ್ಯೆ ಮತ್ತಿತರ ವಿವರಗಳನ್ನು ನಮೂದಿಸಬೇಕು.
  • ನೀಲಿ ಆಧಾರ್ ಕಾರ್ಡ್ ಅನ್ನು ನೋಂದಾಯಿಸಿಕೊಳ್ಳುವುದಕ್ಕೆ ಆನ್ಲೈನ್ ನಲ್ಲಿ ಅಪಾಯಿಂಟ್ಮೆಂಟ್ ಸ್ಲಾಟ್ ಆಯ್ಕೆ ಮಾಡಿಕೊಳ್ಳಬೇಕು.
  • ನಂತರ ನೋಂದಣಿ ಮಾಡಿಸಲು ಹತ್ತಿರದ ಆಧಾರ್ ಕಾರ್ಡ್ ಕೇಂದ್ರಕ್ಕೆ ಹೋಗಬೇಕು.
  • ಮಗುವಿನ ಯು ಐ ಡಿ ಗೆ ಲಿಂಕ್ ಮಾಡಲು ಪಾಲಕರ ಆಧಾರ್ ವಿವರಗಳನ್ನು ಕೊಡಬೇಕಾಗುತ್ತದೆ.

ಮಗುವಿನ ಫೋಟೋ ಒದಗಿಸಬೇಕು. ಇಲ್ಲಿ ಮಕ್ಕಳಿಗೆ ವಯಸ್ಕಂತೆ ಬಯೋಮೆಟ್ರಿಕ್ ಡೇಟಾ ಕೊಡುವ ಅಗತ್ಯ ಇರುವುದಿಲ್ಲ. ನಿಮ್ಮ ಎಲ್ಲಾ ಮಾಹಿತಿಗಳು ಸರಿಯಾಗಿ ಇದ್ದರೆ ನೋಂದಾವಣೆ ಪ್ರಕ್ರಿಯೆ ಮುಗಿದು ನಿಮ್ಮ ಮೊಬೈಲ್ಗೆ ಒಂದು ಸ್ವೀಕೃತಿ ಪ್ರತಿ ಕಳುಹಿಸಲಾಗುತ್ತದೆ. ನೋಂದಾವಣಿ ಆದ ಅರವತ್ತು ದಿನಗಳಲ್ಲಿ ನಿಮ್ಮ ಮಗುವಿಗೆ ಬ್ಲೂ ಆಧಾರ್ ಕಾರ್ಡ್ ಅಥವಾ ಬಾಲ ಆಧಾರ್ ಕಾರ್ಡ್ ವಿತರಣೆ ಮಾಡಲಾಗುವುದು. ಸ್ವೀಕೃತಿ ಪ್ರತಿಯಲ್ಲಿ ಕೊಟ್ಟಿರುವ ಸಂಖ್ಯೆಯಿಂದ ನೀವು ಸ್ಟೇಟಸ್ ಚೆಕ್ ಮಾಡಬಹುದು.

advertisement

Leave A Reply

Your email address will not be published.