Karnataka Times
Trending Stories, Viral News, Gossips & Everything in Kannada

Electric Transformer: ನಿಮ್ಮ ಕೃಷಿ ಭೂಮಿಯಲ್ಲಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್ಫರ್ಮರ್ ಇದ್ದರೆ ಹೊಸ ರೂಲ್ಸ್! ಸರ್ಕಾರದ ಹೊಸ ಆದೇಶ

advertisement

ವಿದ್ಯುತ್ ಇಂದು ಪ್ರತಿಯೊಂದು ಕೆಲಸ ಕಾರ್ಯಕ್ಕೂ ಕೂಡ ಅತ್ಯವಶ್ಯಕವಾಗಿದೆ. ವಿದ್ಯುತ್ ಪೂರೈಕೆ ಎಲ್ಲ ಕ್ಷೇತ್ರಕ್ಕೂ ಅಗತ್ಯವಾಗಿದ್ದು ಲೈನಿಂಗ್ ಮಾಡಿ ಕಂಬ ಹಾಕುವಾಗ ಕೃಷಿ ಭೂಮಿ (Agriculture Land) ಮೇಲೆ ಕೂಡ ಕಂಬ ಬೀಳಲಿದೆ. ಇದು ನಮ್ಮ ಕೃಷಿಗೆ ತೊಡಕಾಗಲಿದೆ. ಬೆಳೆಗೆ ಸಮಸ್ಯೆ ಆಗಲಿದೆ ಎಂದು ಕೊಳ್ಳುವವರು ಇದ್ದಾರೆ. ಆದರೆ ನಿಮ್ಮ ಸುರಕ್ಷತಾ ಕ್ರಮಗಳನ್ನು ಗಮನದಲ್ಲಿ ಇಟ್ಟುಕೊಂಡು ಕಂಬ ಇದ್ದರೂ ಅನೇಕ ಲಾಭವನ್ನು ಸಹ ಪಡೆಯಬಹುದು. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಅನೇಕ ಪ್ರಯೋಜನ ಸಿಗಲಿದೆ?

ಕೃಷಿಕರ ಭೂಮಿ (Agriculture Land) ಮೇಲೆ ಕರೆಂಟ್ ಕಂಬ (Electric Pole) ಅಳವಡಿಸಿದರೆ ಆಗ ರೈತರಿಗೆ ಅನುಕೂಲ ಆಗಲು ಕೆಲವು ಯೋಜನಾ ಕ್ರಮ ಕೂಡ ಜಾರಿಗೆ ತರಲಾಗುತ್ತಿದೆ. ರೈತರು ವಿದ್ಯುತ್ ಕಾಯ್ದೆ ಅಡಿಯಲ್ಲಿ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ. ಇದಕ್ಕೆ ಲಿಖಿತ ರೂಪದಲ್ಲಿ ರೈತರು ಅರ್ಜಿ ಸಲ್ಲಿಸಬೇಕಿದ್ದು ನೀವು ಅರ್ಜಿ ಸಲ್ಲಿಸಿದ್ದ 30 ದಿನದ ಒಳಗೆ ಅರ್ಜಿ ಸ್ವೀಕಾರ ವಾಗಲಿದೆ. ಬಳಿಕ ಯಾವ ವಿಧವಾದ ಕಂಬ, ಪವರ್ ಸಾಮರ್ಥ್ಯದ ಆಧಾರದ ಮೇಲೆ ಹಣಕಾಸಿನ ನೆರವು ನೀಡಲಾಗುವುದು.

ಎಷ್ಟು ಹಣ ಸಿಗುತ್ತೆ?

 

advertisement

Image Source: Siliguri Times

 

ವಿದ್ಯುತ್ ಕಂಬ (Electric Pole) ಇದ್ದರೆ ಪರಿಹಾರ್ಥವಾಗಿ ವಾರಕ್ಕೆ ನೂರು ರೂಪಾಯಿಯಂತೆ ರೈತರಿಗೆ ಹಣ ಜಮೆ ಆಗಲಿದೆ. ಅಷ್ಟು ಮಾತ್ರವಲ್ಲದೆ ವಿದ್ಯುತ್ ಟ್ರಾನ್ಸ್ ಫಾರ್ಮರ್ (Electric Transformer) ನಲ್ಲಿ ದೋಷ ಇದ್ದರೆ ಆಗ 48 ಗಂಟೆ ಒಳಗೆ ಸರಿಪಡಿಸಲಾಗುವುದು ಒಂದು ವೇಳೆ ಈ ಪ್ರಕ್ರಿಯೆ ವಿಳಂಬ ಆದರೆ ಆಗ 50 ರೂಪಾಯಿಗಳ ವರೆಗೆ ಕಾಯ್ದೆ ಅಡಿಯಲ್ಲಿ ನೀಡಲಾಗುತ್ತದೆ. ಇಷ್ಟು ಮಾತ್ರ ವಲ್ಲದೆ ಹೊಸ ವಿದ್ಯುತ್ ಸಂಪರ್ಕದಿಂದಲೂ ಅನೇಕ ಪ್ರಯೋಜನ ಸಿಗಲಿದೆ.

ಪ್ರಯೋಜನ ಏನು?

ಡಿಪಿ, ಪಿಎಲ್ ಜೊತೆಗೆ ರೈತರಿಗೆ 2,000 ದಿಂದ 5,000 ದ ವರೆಗೆ ವಿದ್ಯುತ್ ಲಭ್ಯ ಇರಲಿದೆ. ಅದರೊಂದಿಗೆ ವಿದ್ಯುತ್ ಕಂಪೆನಿಗೆ NOC ಪ್ರಮಾಣ ಪತ್ರ ನೀಡಿದ್ದಂತಹ ಸಂದರ್ಭದಲ್ಲಿ ಕಂಪೆನಿಯೂ ರೈತರ ಜೊತೆ ಭೂ ಬಾಡಿಗೆ ಒಪ್ಪಂದವನ್ನು ಮಾಡಿಕೊಳ್ಳಲಿದೆ, ಅದರ ಪ್ರಕಾರ ರೈತರಿಗೆ ಎರಡು ಸಾವಿರದಿಂದ ಐದು ಸಾವಿರದವರೆಗೆ ಹಣಕಾಸಿನ ನೆರವನ್ನು ನೀಡಲಾಗುತ್ತದೆ.

ಹೊಸದಾಗಿ ವಿದ್ಯುತ್ ಸಂಪರ್ಕವನ್ನು ಮನೆ ಅಥವಾ ಕೃಷಿ ಪಂಪ್ ಮೋಟಾರ್ ಚಾಲನೆಗಾಗಿ ನೀವು ಪಡೆಯಲು ಇಚ್ಛಿಸಿದರೆ ಆಗ ಕಾನೂನಿನ ಪ್ರಕಾರ 1,500 ರಿಂದ 5,000ದ ವರೆಗೆ ಹೊಸ ಸಂಪರ್ಕದ ನಿರ್ವಹಣಾ ವೆಚ್ಚವನ್ನು ಸಂಬಂಧ ಪಟ್ಟ ಕಂಪೆನಿ ಭರಿಸಲಿದೆ. ಹಾಗಾಗಿ ನಿಮ್ಮ ಜಮೀನು ಅಥವಾ ಕೃಷಿ ಭೂಮಿಯಲ್ಲಿ ವಿದ್ಯುತ್ ಕಂಬ ಇದ್ದರೆ ಕೂಡಲೇ ಈ ಬಗ್ಗೆ ಗಮನಿಸಿದರೆ ಇಷ್ಟೆಲ್ಲ ಪ್ರಯೋಜನ ಪಡೆಯಬಹುದು.

advertisement

Leave A Reply

Your email address will not be published.