Karnataka Times
Trending Stories, Viral News, Gossips & Everything in Kannada

Free Schemes: ಉಚಿತ ಭಾಗ್ಯಗಳ ಬಗ್ಗೆ ಸುಪ್ರೀಂ ಕೋರ್ಟ್ ದೊಡ್ಡ ಹೇಳಿಕೆ! ಇಲ್ಲಿದೆ ಮಾಹಿತಿ

advertisement

ಚುನಾವಣೆಯ ಸಂದರ್ಭದಲ್ಲಿ ಪ್ರತಿಯೊಂದು ರಾಜಕೀಯ ಪಕ್ಷವೂ ಕೂಡ ತಾನು ಅಧಿಕಾರಕ್ಕೆ ಬಂದರೆ ಯಾವ ಕೆಲಸಗಳನ್ನು ಮಾಡುತ್ತೇವೆ ಎಂಬುದಾಗಿ ಹೇಳಿಕೊಳ್ಳುವುದು ಸಾಮಾನ್ಯ. ಹೀಗೆ ಹೇಳಿದಾಗ ಜನರಿಗೆ ಯಾವ ರಾಜಕೀಯ ಪಕ್ಷ ಯಾವ ತರಹದ ದೃಷ್ಟಿಕೋನವನ್ನು ಹೊಂದಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಗುತ್ತದೆ. ಯಾರು ಅಭಿವೃದ್ಧಿ ಪರವಾಗಿದ್ದಾರೆ, ಯಾರು ಯಾವ ತರಹದ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಾಗ ಜನರು ಅದನ್ನು ನೋಡಿಕೊಂಡು ಮತ ಹಾಕುತ್ತಾರೆ. ಆದರೆ ಇತ್ತೀಚೆಗೆ ಅಭಿವೃದ್ಧಿ ಕಾರ್ಯಗಳ ಜೊತೆಗೆ ಉಚಿತ ಸ್ಕೀಮ್ ಗಳು (Free Schemes) ಕೂಡ ಹೆಚ್ಚಿನ ರಾಜಕೀಯ ಪಕ್ಷಗಳ ಪ್ರೊಪೋಗಾಂಡಾದಲ್ಲಿ ಮಹತ್ವದ ಸ್ಥಾನ ಪಡೆದಿತ್ತು.

ಉಚಿತ ಸ್ಕೀಮ್ ಗಳು (Free Schemes) ಪ್ರಜಾಪ್ರಭುತ್ವದ ಪರವಾಗಿಲ್ಲ:

ಈ ಬಗ್ಗೆ ದಾಖಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಾ ಸುಪ್ರೀಂ ಕೋರ್ಟ್ (Supreme Court)ನ ಚೀಫ್ ಜಸ್ಟೀಸ್ ಆದ ಎನ್ ವಿ ರಮಣ (N V Ramana) ಅವರು ಹಾಗೂ ಜಸ್ಟಿಸ್ ಕೃಷ್ಣ ಮುರಾರಿ  (Krishna Murari)ಅವರು ಇಂತಹ ಉಚಿತ ಯೋಜನೆ (Free Schemes) ಗಳನ್ನು ನೀಡುವುದು ಪ್ರಜಾಪ್ರಭುತ್ವ ವಿರೋಧಿ ಎಂದು ಪರಿಗಣಿಸಬಹುದು ಎಂದಿದ್ದಾರೆ. ಸಮಾಜ ಸುಧಾರಣಾ ಕಾರ್ಯಕ್ರಮಗಳು ಮತ್ತು ಹಾಗೂ ಉಚಿತ ಸ್ಕೀಮ್ ಗಳಲ್ಲಿ ವ್ಯತ್ಯಾಸ ಇದೆ. ಇದನ್ನು ರಾಜಕೀಯ ಪಕ್ಷಗಳು ಗಮನಿಸಬೇಕು ಎಂದಿದ್ದಾರೆ.

News9Live

ಅಡ್ವೊಕೇಟ್ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ ಸಾರ್ವಜನಿಕ ಹಿತಾಸಕಿ ಮೊಕದ್ದಮೆ

advertisement

ಇತ್ತೀಚಿಗೆ ಹೆಚ್ಚಿನ ರಾಜಕೀಯ ಪಕ್ಷಗಳು ಕೂಡ ಚುನಾವಣೆಗೆ ಮುನ್ನ ತಮ್ಮ ಪಾರ್ಟಿ ಅಧಿಕಾರಕ್ಕೆ ಬಂದ ಪಕ್ಷದಲ್ಲಿ ಇಂತಿಂತಹ ಉಚಿತ ಯೋಜನೆಗಳನ್ನು ನೀಡುವುದಾಗಿ ಘೋಷಣೆಗಳನ್ನು ಮಾಡುತ್ತಿದ್ದವು. ಈ ಬಗ್ಗೆ ವಕೀಲರಾದ ಅಶ್ವಿನಿ ಉಪಾಧ್ಯಾಯ ಅವರು ಹಾಕಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಬಗ್ಗೆ ಈ ಪೀಠ ವಿಚಾರಣೆ ನಡೆಸುತ್ತಿತ್ತು. ಇದನ್ನು ಅಸಂವಿಧಾನಿಕ ಎಂದು ಪರಿಗಣಿಸಿ ಅಂತಹ ರಾಜಕೀಯ ಪಕ್ಷಗಳ ನೋಂದಾವಣೆ ಹಾಗೂ ಅವರ ಚಿಹ್ನೆಗಳನ್ನು ಹಿಂಪಡೆಯಬೇಕು ಎಂದು ಹಿತಾಸಕ್ತಿ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಎರಡೂ ಪಕ್ಷಗಳ ವಾದವನ್ನು ಕೇಳಿದ ಬಳಿಕವಶಷ್ಟೇ ನಿರ್ಧಾರ ಸಾಧ್ಯ

ಈ ಬಗ್ಗೆ ಕೇವಲ ಒಂದೇ ಪಕ್ಷದ ಮಾತನ್ನು ಕೇಳಿ ನಿರ್ಧಾರ ನೀಡಲು ಸಾಧ್ಯವಿಲ್ಲ. ಈ ಬಗ್ಗೆ ಇನ್ನೊಂದು ಪಾರ್ಟಿ ಅಭಿಪ್ರಾಯಗಳನ್ನು ಕೇಳಬೇಕಾಗುತ್ತದೆ. ಇದರಿಂದಾಗಿ ಎರಡೂ ವಾದ ವಿವಾದಗಳನ್ನು ಕೇಳಿದ ನಂತರವೇ ಈ ಬಗ್ಗೆ ನಿಯಮವನ್ನು ಜಾರಿಗೆ ತರಬಹುದು ಎಂದು ಪೀಠ ಹೇಳಿದೆ. ಇದು ಶಾಸಕಾಂಗದ ಪರಿಧಿಯಲ್ಲಿ ಬರುವುದರಿಂದ ನಾನು ಆ ವಿಚಾರವನ್ನು ಶಾಸಕಾಂಗದ ಪರಿಧಿಯಿಂದ ನ್ಯಾಯಾಂಗಕ್ಕೆ ಒಮ್ಮೆಲೇ ತರುವ ಹಾಗೆ ಇಲ್ಲ. ಇದು ಗಂಭೀರ ವಿಷಯವೇ ಆಗಿದ್ದರು ಎರಡೂ ಕಡೆಯ ವಾದಗಳನ್ನು ಆಲಿಸಿದ ಮೇಲಷ್ಟೇ ನಿರ್ಧಾರವನ್ನು ನೀಡಬಹುದು ಎಂದಿದ್ದಾರೆ.

Image Source: IndiaToday

ಸುಪ್ರೀಂ ಕೋರ್ಟ್ ಹೀಗೆ ಹೇಳಿ ಮುಂದಿನ ದಿನಾಂಕವನ್ನು ಆಗಸ್ಟ್ ನಲ್ಲಿ ನೀಡಿರುವ ಕಾರಣ ಈಗ ಮುಂಬರುವ ಚುನಾವಣೆ ಸಮಯದಲ್ಲಿ ಈ ಬಗೆಯ ಉಚಿತ ಸ್ಕೀಮ್ ಗಳನ್ನು ನಿಲ್ಲಿಸಬೇಕಾದರೆ ಕೇವಲ ಶಾಸಕಾಂಗಕ್ಕೆ ಅಥವಾ ಚುನಾವಣಾ ಆಯೋಗಕ್ಕೆ ಮಾತ್ರ ಸಾಧ್ಯವಿದೆ. ಚುನಾವಣಾ ಆಯೋಗ ಮಾತ್ರ ಮಧ್ಯಪ್ರವೇಶಿಸಿ ಯಾವುದನ್ನು ಮಾಡಬಹುದು ಹಾಗೂ ಯಾವುದನ್ನು ಮಾಡಬಾರದು ಎಂಬ ಬಗ್ಗೆ ನಿಯಮಗಳನ್ನು ಜಾರಿಗೊಳಿಸಲು ಸಾಧ್ಯ.

advertisement

Leave A Reply

Your email address will not be published.