Karnataka Times
Trending Stories, Viral News, Gossips & Everything in Kannada

Guarantee Scheme: ಗೃಹಲಕ್ಷ್ಮೀ, ಅನ್ನಭಾಗ್ಯ ಎರಡೂ ಯೋಜನೆಯ ಹಣ ಬರದಿದ್ದವರಿಗೆ ಗುಡ್ ನ್ಯೂಸ್

advertisement

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಆಡಳಿತ ಸಂಚಲನ ಮೂಡಿಸುತ್ತಿದೆ ಎಂದು ಹೇಳಬಹುದು. ಪಂಚ ಗ್ಯಾರೆಂಟಿ ಯೋಜನೆಯಲ್ಲಿ (Guarantee Scheme) ಪ್ರತಿಯೊಂದು ಕೂಡ ತುಂಬಾನೇ ಫೇಮಸ್ ಆಗುತ್ತಿದೆ‌. ಮೊದಲು ಶಕ್ತಿ ಯೋಜನೆಗೆ ಚಾಲ್ತಿ ನೀಡಿದ್ದು ಇದರಿಂದಾಗಿ ಸರಕಾರಿ ಬಸ್ ನಲ್ಲಿ ಮಹಿಳೆಯರ ಓಡಾಟ ಪ್ರಮಾಣ ಅಧಿಕ ಆಗಿದೆ. ಅದರ ಜೊತೆಗೆ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಯೋಜನೆ ಮೂಲಕ ಪಡಿತರ ಹಾಗೂ ಕಂತಿನ ಹಣ ಬಿಡುಗಡೆ ಮಾಡಲಾಗುತ್ತಿದ್ದು ಮಹಿಳೆಯರಿಗೆ ಬಹುಪಾಲು ರಾಜ್ಯದ ಹಣ ದೊರೆತಿದೆ ಎಂದು ಹೇಳಬಹುದು.

ಅನ್ನಭಾಗ್ಯ(AnnaBhagya)ದಲ್ಲಿ ಧನ ಸಹಾಯ

ಅನ್ನಭಾಗ್ಯ (AnnaBhagya) ಯೋಜನೆಯ ಅಡಿಯಲ್ಲಿ 10ಕೆಜಿ ಅಕ್ಕಿಯನ್ನು ವಿತರಣೆ ಮಾಡುವುದಾಗಿ ರಾಜ್ಯ ಸರಕಾರ ಹೇಳಿತ್ತು ಆದರೆ ಕೇಂದ್ರ ಸರಕಾರ ಸರಿಯಾಗಿ ಸಹಕಾರ ನೀಡದ ಹಿನ್ನೆಲೆ 5kg ಅಕ್ಕಿ ಬದಲಿಗೆ ಹಣ ನೀಡಿ ಉಳಿದ 5 ಕೆಜಿ ಅಕ್ಕಿ ವಿತರಣೆಗೆ ರಾಜ್ಯದ ಕಾಂಗ್ರೆಸ್ ಸರಕಾರ ಮುಂದಾಗಿದೆ. ಹೀಗಾಗಿ ಕೆಜಿ ಅಕ್ಕಿಗೆ 34 ರೂಪಾಯಿ ಅಂತೆ 170 ರೂಪಾಯಿ ಹಣವನ್ನು ಒಬ್ಬೊಬ್ಬ ಸದಸ್ಯರಿಗೆ ನೀಡಲು ಸರಕಾರ ಚಿಂತಿಸಿದೆ. ಈ ಮೂಲಕ ಈ ಹಣ ಕೂಡ ಕಂತಿನಂತೆ ತಿಂಗಳ ಆರಂಭದಲ್ಲಿ ಮನೆ ಹಿರಿಯರ ಖಾತೆಗೆ ಜಮೆ ಆಗುತ್ತಿದೆ.

ಅಷ್ಟು ಕಂತಿನ ಹಣ ಬರುತ್ತೆ

advertisement

ಗೃಹಲಕ್ಷ್ಮೀ ಯೋಜನೆ (GruhaLakshmi Scheme) ಮೂಲಕ ಮನೆ ಹಿರಿಯ ಮಹಿಳೆಯ ಖಾತೆಗೆ 2000 ರೂಪಾಯಿ ಮೊತ್ತ ಜಮೆ ಮಾಡಲಾಗುತ್ತಿದೆ ಈ ಮೂಲಕ ಈಗಾಗಲೇ 6 ಕಂತಿನ ಹಣ ಜಮೆ ಆಗಿದೆ ಆದರೆ ಕೆಲವೊಬ್ಬರಿಗೆ ಕಂತಿನ ಹಣ ಬರುವುದು ಬಾಕಿ ಇದ್ದು ಹಣ ಇನ್ನೂ ಬಂದಿಲ್ಲ ಎಂದು ದೂರುತ್ತಿದ್ದಾರೆ ಈ ನಡುವೆ ಬ್ಯಾಂಕ್ ಖಾತೆ ಸಮಸ್ಯೆ ಹಾಗೂ ಸರ್ವರ್ ಸಮಸ್ಯೆ ಇರುವ ಕಾರಣಕ್ಕೆ ಹಣ ಬರದಿರಬಹುದು ಸಂಬಂದ ಪಟ್ಟವರು ತಮ್ಮ ದಾಖಲೆ ಸರಿಯಾಗಿರಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಿಳಿಸಿದ್ದು ಈ ಮೂಲಕ ಈ ಬಾರಿ ಎಲ್ಲ ಅಷ್ಟು ಕಂತಿನ ಹಣ ಒಟ್ಟಿಗೆ ಬರುತ್ತದೆ ಎನ್ನಲಾಗಿದೆ.

ಎರಡು ಯೋಜನೆಯ ಹಣ

ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಯೋಜನೆಯ ಹಣ ಯಾವಾಗ ಬರುತ್ತೆ ಎಂದು ಕಾದವರಿಗೆ ಇದೀಗ ಶುಭ ಸುದ್ದಿ ಸಿಕ್ಕಿದೆ. ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಅಕ್ಕಿ ಬದಲು ನೀಡಲಾಗುವ ಧನಸಹಾಯ ಮೊತ್ತವು ಇದೆ ತಿಂಗಳ 10ನೇ ತಾರೀಖಿನ ಒಳಗೆ ಹಣ ಜಮೆ ಆಗಲಿದೆ ಎಂದು ಆಹಾರ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ. ಅದೇ ರೀತಿ ಗೃಹಲಕ್ಷ್ಮೀ ಹಣದ 4,5,6ನೇ ಬಾಕಿ ಕಂತಿನ ಮೊತ್ತ ಕೂಡ ಇದೇ ತಿಂಗಳ 10 ನೇ ತಾರೀಖಿನ ಒಳಗೆ ಬರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

7ನೇ ಕಂತಿನ ಹಣ ಯಾವಾಗ ಬರುತ್ತದೆ

ಅನೇಕ ಮಂದಿ ಮಹಿಳೆಯರಿಗೆ ಗೃಹಲಕ್ಷ್ಮೀ ಹಣ ಆರು ಕಂತಿನ ಹಣ ಬಂದಿದೆ ಆದರೆ ಏಳನೇ ಕಂತಿನ ಹಣ ಬಂದಿಲ್ಲ ಹಾಗಾಗಿ ಏಳನೆ ಕಂತಿನ ಹಣ ಕಾಯುತ್ತಿರುವವರಿಗೆ ಈಗ ಮಾಹಿತಿ ಸಿಕ್ಕಿದೆ. ಏಳನೆ ಕಂತಿನ ಹಣವು ಮಾರ್ಚ್ 10 ರ ಬಳಿಕವೇ ಅದರ ಕಾರ್ಯ ಚಟುವಟಿಕೆ ನಡೆಯಲಿದೆ ಎಂದು ಹೇಳಬಹುದು.

advertisement

Leave A Reply

Your email address will not be published.