Karnataka Times
Trending Stories, Viral News, Gossips & Everything in Kannada

Aston Martin DB12: ಅಂಬಾನಿಗೂ ಮೊದಲು ಭಾರತದಲ್ಲಿ ಈ ಕಾರು ಖರೀದಿಸಿದ ಜೊಮಾಟೊ ಸಿಇಒ ದೀಪಿಂದರ್! ಬೆಲೆ ಎಷ್ಟು ಗೊತ್ತಾ?

advertisement

ತಿನ್ನುವ ಆಹಾರ ರುಚಿಯಾಗಿರಬೇಕೆಂದು ಯಾರು ತಾನೇ ಬಯಸುವುದಿಲ್ಲ ಹೇಳಿ. ಅಂತಹ ಆಹಾರ ಪದಾರ್ಥಗಳನ್ನು ಮನೆ ಮನೆಗೆ ತಲುಪಿಸುವ ಕಂಪೆನಿ ಕಟ್ಟಿ ಗೆಲುವನ್ನು ಸಾಧಿಸಿದವರಲ್ಲಿ ಝೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ (Zomato CEO Deepinder) ಕೂಡ ಒಬ್ಬರು. ಅವರು ತಮ್ಮ ಔಟ್ ಆಫ್ ದಿ ಬಾಕ್ಸ್ ಆಲೋಚನೆಗಳಿಂದಾಗಿ ಹಲವರಿಗೆ ಮಾದರಿಯಾಗಿದ್ದಾರೆ. ಹೊಸ ವ್ಯಾಪಾರ ಪ್ರಕಟಣೆಗಳು ಮತ್ತು ಹೂಡಿಕೆಗಳಿಗಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಝೊಮಾಟೊದ ಸಿಇಒ ಆಗಿಯೂ ಸೇವೆ ಸಲ್ಲಿಸುತ್ತಿರುವ ದೀಪಿಂದರ್ ಗೋಯಲ್ ಅವರು ಇತ್ತೀಚಿಗೆ ಖರೀದಿಸಿದ ಕಾರೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಷ್ಟಕ್ಕೂ ಆ ಕಾರ್ ಯಾವುದು? ಏನದರ ವಿಶೇಷ ತಿಳಿಯೋಣ.

Zomato Owner ಹೊಸ ಕಾರ್:

 

Image Source: Indian Startup News

 

ಕೇವಲ ಬ್ಯುಸಿನೆಸ್ ಮೆನ್ ಮಾತ್ರವಲ್ಲ ದೀಪಿಂದರ್ ಗೋಯಲ್ (Zomato CEO Deepinder) ಆಟೋಮೊಬೈಲ್ ಉತ್ಸಾಹಿ ಕೂಡ. ವಾಣಿಜ್ಯೋದ್ಯಮಿಯು ಸೂಪರ್-ದುಬಾರಿ ಕಾರುಗಳ ಶ್ರೇಣಿಯನ್ನು ಹೊಂದಿದ್ದಾರೆ. ಅವರು ತಮ್ಮ ಕಾರು ಸಂಗ್ರಹಕ್ಕೆ ಇತ್ತೀಚಿಗೆ ಇನ್ನೊಂದನ್ನು ಸೇರಿಸಿದ್ದಾರೆ.

advertisement

ಹೌದು ಜೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಈಗ ಆಸ್ಟನ್ ಮಾರ್ಟಿನ್ ಡಿಬಿ 12 ಸ್ಪೋರ್ಟ್ಸ್ ಕಾರ್ ಖರೀದಿಸಿದ್ದಾರೆ. Aston Martin DB12 ಎಕ್ಸ್ ಶೋ ರೂಂ ಬೆಲೆ 4.59 ಕೋಟಿ ರೂ. ಇದನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಪ್ರಾರಂಭಿಸಲಾಯಿತು. ವರದಿಯ ಪ್ರಕಾರ, ದೀಪಿಂದರ್ ಗೋಯಲ್ ಆಸ್ಟನ್ ಮಾರ್ಟಿನ್ DB12 ಅನ್ನು ಸ್ವೀಕರಿಸಿದ ಭಾರತದ ಮೊದಲ ವ್ಯಕ್ತಿಯಾಗಿದ್ದಾರೆ.

Aston Martin DB12 Specification:

 

Image Source: Autocar India

 

  • ಈ ರೇಸಿಂಗ್ ಹಸಿರು ಬಣ್ಣದ ಸೂಪರ್ ಕಾರ್ ದೆಹಲಿ Aston Martin ಡೀಲರ್ ಶಿಪ್ ನಿಂದವಿತರಿಸಲಾಗಿದೆ. ಅದರ ಕೆಲವು ಚಿತ್ರಗಳನ್ನು Instagram ಅಲ್ಲಿ ಹಂಚಿಕೊಳ್ಳಲಾಗಿದೆ.
  • ಆಸ್ಟನ್ ಮಾರ್ಟಿನ್ ಡಿಬಿ12 4.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ V8 ಎಂಜಿನ್‌ನಿಂದ ಈ ಕಾರ್ ನಿಯಂತ್ರಿಸಲ್ಪಡುತ್ತದೆ, ಇದನ್ನು Mercedes-Benz ನಿಂದ ಪಡೆಯಲಾಗಿದೆ. ಎಂಜಿನ್ ಸುಮಾರು 680 PS ಪವರ್ ಮತ್ತು 800 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಎಂಟು-ವೇಗದ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್‌ಗೆ ಸಂಯೋಜಿಸಲ್ಪಟ್ಟಿದೆ.
  • ಇನ್ನು ಈ ಕಾರ್ ನಲ್ಲಿ ರಿಯಲ್ ವೀಲ್ ಡ್ರೈವ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು ಈ ಸೂಪರ್ ಕಾರ್ ಗರಿಷ್ಠ ವೇಗ ಗಂಟೆಗೆ 325 ಕಿಲೋಮೀಟರ್. ಇದು 21 ಇಂಚಿನ ಅಲಾಯ್ ಚಕ್ರವನ್ನು ಹೊಂದಿದೆ.
  • ಕೂಪ್ ಶೈಲಿಯ ಪವರ್ ಸ್ಟೀರಿಂಗ್, ಪವರ್ ವಿಂಡೋಸ್ ಫ್ರಂಟ್, ಆಂಟಿ – ಲಾಕ್ ಬ್ರೇಕಿಂಗ್ ಸಿಸ್ಟಮ್, ಏರ್ ಕಂಡೀಷನರ್, ಮಲ್ಟಿಪಲ್ ಏರ್ ಬ್ಯಾಗ್ ಗಳು, ಮಲ್ಟಿ – ಫಂಕ್ಷನ್ ಸ್ಟೀರಿಂಗ್ ವೀಲ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
  • ಇನ್ನು ಈ ಕಾರ್ 78 ಲೀಟರ್ ಇಂಧನ ಟ್ಯಾಂಕ್ ಹೊಂದಿದ್ದು ಇದಲ್ಲದೇ ಕಾರ್ 262 ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ಇದರಲ್ಲಿ ಚಿಕ್ಕ ಪುಟ್ಟ ವಸ್ತುಗಳನ್ನು ಇಡಬಹುದಾಗಿದೆ. ಇನ್ನು ಈ ಕಾರು ಹಲವು ಬಣ್ಣಗಳಲ್ಲಿ ಲಭ್ಯವಿದ್ದು 3.6 ಸೆಕೆಂಡುಗಳಲ್ಲಿ 0 ರಿಂದ 100 ಕಿಮೀ ವೇಗವನ್ನು ಚಲಿಸುವ ಸಾಮರ್ಥ್ಯ ಹೊಂದಿದೆ ಎನ್ನಲಾಗುತ್ತಿದೆ. ಇನ್ನು ಈ ಕಾರು ಐಷಾರಾಮಿ ಲುಕ್ ಹೊಂದಿದ್ದು ನೋಡುಗರ ಗಮನ ಸೆಳೆವಂತಿದೆ.

advertisement

Leave A Reply

Your email address will not be published.