Karnataka Times
Trending Stories, Viral News, Gossips & Everything in Kannada

Social Media: 177 ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ವೆಬ್ ಲಿಂಕ್ಗಳನ್ನು ಅಮಾನತು ಗೊಳಿಸಿದ ಕೇಂದ್ರ ಸರಕಾರ, ಕಾರಣ ಇಲ್ಲಿದೆ!

advertisement

ಇಂದು ಕೈಯಲೊಂದು ಮೊಬೈಲ್ ಇದ್ದರೆ ಸಾಕು. ಏನೇ‌ಸುದ್ದಿಯಾದರು ನಮಗೆ ತಿಳಿಯುತ್ತದೆ.ಅದರಲ್ಲೂ ಸೋಷಿಯಲ್ ಮೀಡಿಯಾ ಬಳಕೆ ಯಂತು ಅತಿರೇಖಕ್ಕೆ ತೆರಳಿದೆ ಎಂದಾದರೂ ತಪ್ಪಗದು.ಒಂದು ಸುದ್ದಿ ವೈರಲ್ ಆದ್ರೆ ಸಾಕು. ಅದು ತಪ್ಪೋ ಸರಿಯೋ ತಿಳಿಯದೇ ಬಳಕೆದಾರರು ಬೇಕಾಬಿಟ್ಟಿಯಾಗಿ ವೈರಲ್ ಮಾಡುತ್ತಿದ್ದಾರೆ. ಅದರಲ್ಲೂ ಕೆಲವೊಂದು ವೆಬ್ ಸೈಟ್, ಯುಟ್ಯುಬ್ ಗಳಿಗೆ ಸರಕಾರ ಕೆಲವು ದಿನಗಳ ಹಿಂದೆಯೇ ವಾರ್ನಿಂಗ್ ನೀಡಿತ್ತು.‌ ಇದೀಗ ಕೇಂದ್ರ ಸರಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿದೆ.

ನಿರ್ದೇಶನ ಜಾರಿ:

ರೈತರ ಪ್ರತಿಭಟನೆಗೆ ಬದ್ದವಾಗಿ ಕೇಂದ್ರ ಸರ್ಕಾರವು ಇದೀಗ 177 ಸಾಮಾಜಿಕ ಮಾಧ್ಯಮ (Social Media) ಖಾತೆ ಮತ್ತು ವೆಬ್ ಲಿಂಕ್ ಗಳನ್ನು ಅಮಾನತು ಮಾಡಲು ಕ್ರಮ ಕೈಗೊಂಡಿದೆ. ಐಟಿ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಬಗ್ಗೆ ನಿರ್ದೇಶನಗಳನ್ನು ಜಾರಿ ಮಾಡಿದೆ.

ನಿರ್ಬಂಧ ಮಾಡಿದೆ:

 

 

advertisement

ಇಂದು ನಕಲಿ ಸುದ್ದಿಗಳನ್ನು ಹರಡಲು ಬಳಸಲಾಗುತ್ತಿದ್ದ YouTube Channels, Facebook and Instagram, Websites ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಬೇಕಾಬಿಟ್ಟಿಯಾಗಿ ತಪ್ಪು ಮಾಹಿತಿ ಗಳನ್ನು ನೀಡಿ ಜನರನ್ನು ಋಣಾತ್ಮಕ ವಾಗಿ ಮಾಡುತ್ತಿದೆ.‌ ಈಗಾಗಲೇ ನಕಲಿ ಖಾತೆಗಳನ್ನು ಕಳೆದ ಎರಡು ತಿಂಗಳಲ್ಲಿ ನಿರ್ಬಂಧ ಮಾಡಲಾಗಿದೆ.

ಈ ಬಗ್ಗೆ ವರದಿಯೇನು?

ಕೇಂದ್ರ ಸರ್ಕಾರದ ವಿರುದ್ಧ ರೈತರು ನಡೆಸುತ್ತಿದ್ದ ದೆಹಲಿ ಚಲೋ ಪ್ರತಿಭಟನೆಗೆ ಮುಂಚಿತವಾಗಿ ರೈತ ಸಂಘಟನೆಗಳು ಮತ್ತು ಒಕ್ಕೂಟಗಳ ಅಧಿಕೃತ ಪುಟಗಳಾಗಿ ಮಾಡುತ್ತಿದ್ದ X ಮತ್ತು Facebook ನಲ್ಲಿನ ಖಾತೆಗಳನ್ನು ತಡೆಹಿಡಿಯಲಾಗಿದೆ ಎಂದು ಈ ಬಗ್ಗೆ ವರದಿಯಾಗಿದೆ. ಜೂನ್ 2020 ರಲ್ಲಿ ಚೀನಾದ ವೆಬ್ಸೈಟ್ಗಳನ್ನು ನಿರ್ಬಂಧಿಸಲು ಕೈಗೊಂಡತಹ ಹಿಂದೆ ಬಳಸಲಾದ‌ ಕಾನೂನು ನಿಬಂಧನೆ, ತಡೆಗಟ್ಟುವ ಕ್ರಮಗಳನ್ನು ಇಲ್ಲು ಕೈಗೊಂಡಿದೆ.

ನಿಖರ ಮಾಹಿತಿ ನೀಡಬೇಕು:

ಜನರಿಗೆ, ಓದುಗರಿಗೆ, ನೋಡುಗರಿಗೆ ನಿಖರ ವರದಿಗಳನ್ನು ನೀಡಿ ಪ್ರತಿನಿಧಿಸುವುದು ಪತ್ರಿಕೊದ್ಯಮದ ಜವಾಬ್ದಾರಿ.‌ ಆದರೆ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಸುಳ್ಳು ಸುದ್ದಿಗಳ ಕುರಿತು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾವು ನೀತಿ ಸಂಹಿತೆಯ ಬಗ್ಗೆ ಗಮನ ಹರಿಸುತ್ತದೆ. ಪತ್ರಿಕಾ ಮಂಡಳಿ ಕಾಯಿದೆ ಸೆಕ್ಷನ್ 14ರ ಅಡಿಯಲ್ಲಿ ನೀತಿ ಸಂಹಿತೆ ಪಾಲಿಸಿಲ್ಲ ಅಂದರೆ ಅಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಇಂದು ಪತ್ರಿಕೆ ಗಳಲ್ಲಿ ಇಂತಹ ತಪ್ಪು ಮಾಹಿತಿ ಬರುವುದು ಕಡಿಮೆ ಯಾಗಿದೆ.‌ಆದರೆ ಸೋಷಿಯಾಲ್ ಮೀಡಿಯಾದಲ್ಲಿ ಈ ಬಳಕೆ ಹೆಚ್ಚಾಗಿದೆ.ಹಾಗಾಗಿ ಈ ಬಗ್ಗೆ ಸರಕಾರವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ.

advertisement

Leave A Reply

Your email address will not be published.