Saving vs Current Account: ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆಯ ನಡುವಿನ ವ್ಯತ್ಯಾಸವೇನು? ಯಾವುದು ಹೆಚ್ಚು ಲಾಭದಾಯಕ!
ಇಂದು ನಾವು ಯಾವುದೇ ರೀತಿಯ ಹಣಕಾಸಿನ ವ್ಯವಹಾರ ಮಾಡಲು ಯಾವುದೇ ಬ್ಯಾಂಕ್ ನಲ್ಲಿ ಒಂದು ಖಾತೆಯನ್ನು ಹೊಂದಿರುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾಗಿ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಹಳ್ಳಿಗಳಲ್ಲಿಯೂ ಕೂಡ ಬ್ಯಾಂಕಿನಲ್ಲಿ ಸಾಕಷ್ಟು ಜನ ಖಾತೆ ಆರಂಭಿಸುತ್ತಾರೆ. ಹೀಗೆ ನೀವು ಬ್ಯಾಂಕ್ ಶಾಖೆಗೆ ಹೋಗಿ ಖಾತೆ ಆರಂಭಿಸುವುದಕ್ಕೂ ಮೊದಲು ಕೆಲವು ವಿಚಾರಗಳನ್ನು ತಿಳಿದುಕೊಂಡಿರಬೇಕು.
ಬ್ಯಾಂಕುಗಳಲ್ಲಿ ಬೇರೆ ಬೇರೆ ಕಾರಣಕ್ಕೆ ಬೇರೆ ಬೇರೆ ರೀತಿಯ ಖಾತೆಯನ್ನು ಆರಂಭಿಸಬಹುದು. ಉದಾಹರಣೆಗೆ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ, ಚಾಲ್ತಿ ಖಾತೆ, ಜಂಟಿ ಖಾತೆ, ಸ್ಯಾಲರಿ ಖಾತೆ ಹೀಗೆ ಬೇರೆ ಬೇರೆ ರೀತಿಯ ಖಾತೆಗಳನ್ನು ತೆರೆಯುವ ಆಯ್ಕೆ ಇದೆ.
ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆಯ (Saving vs Current Account) ನಡುವಿನ ವ್ಯತ್ಯಾಸ!
ನೀವು ಕೂಡ ಬ್ಯಾಂಕ್ ನಲ್ಲಿ ಹೊಸದಾಗಿ ಖಾತೆ ತೆರೆಯಲು ಇಷ್ಟಪಡುತ್ತೀರಾ? ಹಾಗಾದ್ರೆ ಮೊದಲು ಉಳಿತಾಯ ಖಾತೆ ಹಾಗೂ ಚಾಲ್ತಿ ಖಾತೆ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಸೂಕ್ತ.
ಉಳಿತಾಯ ಖಾತೆ! (Saving Account)
ಉಳಿತಾಯ ಖಾತೆ ಅಥವಾ ಸೇವಿಂಗ್ಸ್ ಅಕೌಂಟ್ ಸಾಮಾನ್ಯರು ಸಾಮಾನ್ಯ ಬಳಕೆಗಾಗಿ ತೆರೆಯುವ ಖಾತೆ ಆಗಿದೆ. ಇದಕ್ಕೆ ಯಾವುದೇ ಹೆಚ್ಚಿನ ದಾಖಲೆ ಅಥವಾ ಶರತ್ತುಗಳು ಕೂಡ ಇಲ್ಲ. ಸಾಕಷ್ಟು ಜನ ತಮ್ಮ ತಿಂಗಳ ಸಂಬಳವನ್ನು ಇದೇ ಉಳಿತಾಯ ಖಾತೆಗೆ ಹಾಕಿಸಿಕೊಳ್ಳುತ್ತಾರೆ. ನೀವು ಉಳಿತಾಯ ಖಾತೆಯಲ್ಲಿ ಹಣವನ್ನು ಠೇವಣಿ ಮಾಡಿದರೆ ನಿಮಗೆ ಬೇಕಾದಾಗ ಅದನ್ನು ಹಿಂಪಡೆಯಬಹುದು. ಉಳಿತಾಯ ಖಾತೆಯಲ್ಲಿ ಹೆಚ್ಚಿನ ಹಣ ಉಳಿತಾಯ ಮಾಡಬಹುದು ಹಾಗೂ ಈ ಠೇವಣಿಗೆ ಬ್ಯಾಂಕ್ನಿಂದ ಬಡ್ಡಿ ಕೂಡ ಸಿಗುತ್ತದೆ.
ಆದರೆ ಉಳಿತಾಯ ಖಾತೆಯನ್ನು ನಿರ್ವಹಿಸಲು ಬ್ಯಾಂಕ್ ಶುಲ್ಕವನ್ನು ವಿಧಿಸುತ್ತದೆ. ವಾರ್ಷಿಕ ಶುಲ್ಕವನ್ನು ನೀವು ಪಾವತಿ ಮಾಡಬೇಕು. ಅಲ್ಲದೆ ಉಳಿತಾಯ ಖಾತೆ ಆರಂಭಿಸಿದ ನಂತರ ಬ್ಯಾಂಕ್ ನಿಯಮದ ಪ್ರಕಾರ ಕನಿಷ್ಠ ಬ್ಯಾಲೆನ್ಸ್ ಕೂಡ ಇರಲೇಬೇಕು. ಈ ಕನಿಷ್ಠ ಬ್ಯಾಲೆನ್ಸ್ (Minimum Balance)ಮೊತ್ತ 500 ರೂಪಾಯಿಗಳಿಂದ 10,000ಗಳವರೆಗೂ ಇರಬಹುದು. ಇದು ನೀವು ಯಾವ ಬ್ಯಾಂಕ್ ನಲ್ಲಿ ಖಾತೆ ಆರಂಭಿಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿದೆ.
ಉಳಿತಾಯ ಖಾತೆ ಆರಂಭಿಸಿದರೆ ಬ್ಯಾಂಕ್ನಿಂದ ಚೆಕ್ ಬುಕ್ ಕೂಡ ಸಿಗುತ್ತದೆ. ನೀವು ಬ್ಯಾಂಕ್ ಗೆ ಹೋಗಿ ಯಾವುದೇ ರೀತಿಯ ಪೇಮೆಂಟ್ ಮಾಡುವುದಿದ್ದರೆ ಈ ಚೆಕ್ ಬುಕ್ ಬಳಸಿ ಕೊಡಬಹುದು.
ಚಾಲ್ತಿ ಖಾತೆ! (Current Account)
ಚಾಲ್ತಿ ಖಾತೆ ಅಥವಾ ಕರೆಂಟ್ ಅಕೌಂಟ್ ಇದನ್ನು ಹೆಚ್ಚಾಗಿ ವ್ಯಾಪಾರಸ್ಥರು ಬ್ಯಾಂಕ್ ನಲ್ಲಿ ತೆರೆಯುತ್ತಾರೆ. ಉಳಿತಾಯ ಖಾತೆಗಿಂತ ಹೆಚ್ಚಿನ ಹಣಕಾಸಿನ ವಹಿವಾಟು ಚಾಲ್ತಿ ಖಾತೆಯಲ್ಲಿ ನಡೆಯುತ್ತದೆ. ಉಳಿತಾಯ ಖಾತೆಯಂತೆ ಚಾಲ್ತಿ ಖಾತೆಯಲ್ಲಿಯೂ ಕೂಡ ನಿರ್ವಹಣೆಗಾಗಿ ಮಿನಿಮಮ್ ಬ್ಯಾಲೆನ್ಸ್ ಇಡಲೇಬೇಕು ಇದು ಉಳಿತಾಯ ಖಾತೆಗಿಂತಲೂ ಹೆಚ್ಚಿನ ಮೊತ್ತದಾಗಿರುತ್ತದೆ.
ಉಳಿತಾಯ ಖಾತೆಗಿಂತಲೂ ಚಾಲ್ತಿ ಖಾತೆಗೆ ಸಿಗುವ ಬಡ್ಡಿದರ ಹೆಚ್ಚು. ಚಾಲ್ತಿ ಖಾತೆ ಆರಂಭಿಸಿದ ನಂತರ ಬ್ಯಾಂಕ್ ನಿಂದ ಚೆಕ್ ಬುಕ್ ಪಡೆದುಕೊಳ್ಳಬಹುದು. ಇದನ್ನು ನೀವು ಬ್ಯಾಂಕ್ ವ್ಯವಹಾರಗಳಿಗೆ, ವ್ಯಾಪಾರ ವಹಿವಾಟಿಗಾಗಿ ಬಳಸಿಕೊಳ್ಳಬಹುದು. ಚಾಲ್ತಿ ಖಾತೆಗೆ ಓವರ್ ಡ್ರಾಫ್ಟ್ ಸೌಲಭ್ಯ ಇದೆ. ಇದರಿಂದಾಗಿ ಖಾತೆಯಲ್ಲಿ ಇರುವ ಹಣಕ್ಕಿಂತಲೂ ಹೆಚ್ಚಿನ ಹಣವನ್ನು ಖರ್ಚು ಮಾಡಲು ಸಾಧ್ಯವಿದೆ. ಇದನ್ನು ಬ್ಯಾಂಕ್ ನಿಯಮದ ಅನುಸಾರ ಹಿಂತಿರುಗಿಸಬೇಕು.
ಒಟ್ಟಿನಲ್ಲಿ ನೀವು ಬ್ಯಾಂಕ್ ನಲ್ಲಿ ಹೊಸದಾಗಿ ಖಾತೆ ತೆರೆಯುವುದಿದ್ದರೆ ಯಾವ ಉದ್ದೇಶಕ್ಕೆ ಬ್ಯಾಂಕು ಖಾತೆ ತೆರೆಯುತ್ತೀರಿ ಎಂಬುದನ್ನು ನೋಡಿ ಅದಕ್ಕೆ ಸಂಬಂಧಪಟ್ಟಂತೆ ಬ್ಯಾಂಕ್ ನಲ್ಲಿ ಖಾತೆ ಆರಂಭಿಸಬಹುದು.