Karnataka Times
Trending Stories, Viral News, Gossips & Everything in Kannada

RBI: ಬೈಕು ಕಾರು ಮನೆ ಮೇಲೆ ಲೋನ್ ಮಾಡಿದ್ದವರಿಗೆ ಬೆಳ್ಳಂಬೆಳಿಗ್ಗೆ ಸಿಹಿಸುದ್ದಿ! ರಿಸರ್ವ್ ಬ್ಯಾಂಕ್ ಹೊಸ ನಿರ್ಧಾರ

advertisement

RBI Monetary Policy 2024 : ಇಂದು ಹೆಚ್ಚಿನ‌ ಜನರಿಗೆ ಸಾಲದ ಅವಶ್ಯಕತೆ ಹೆಚ್ಚು ಇರುವುದರಿಂದ ಬ್ಯಾಂಕ್ ಸಾಲಕ್ಕಾಗಿ ಹೆಚ್ಚು ಅವಲಂಬಿತರಾಗಿ ಇರುತ್ತಾರೆ.ಅದ್ರೆ ಬಡ್ಡಿ ಹೆಚ್ಚು ಅನ್ನುವ ಕಾರಣಕ್ಕಾಗಿ ಬ್ಯಾಂಕ್ ಸಾಲ ಬೇಕಿದ್ದರೂ ಹಿಂಜರಿಯುತ್ತಾರೆ.ಇದೀಗ ಈ ಬಗ್ಗೆ ಗುಡ್ ನ್ಯೂಸ್ ಒಂದು ಬಂದಿದ್ದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ರೆಪೋ ದರವನ್ನು(Repo Rate) ಯಥಾಸ್ಥಿತಿಯಲ್ಲಿ ಇರಿಸುವ ಮೂಲಕವೇ ಸಾಲಗರರಿಗೆ ನೆಮ್ಮದಿಯ ಸುದ್ದಿ ನೀಡಿದೆ.ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಹಣಕಾಸು ನೀತಿ ಸಮಿತಿಯು ಏಳನೇ ಬಾರಿಯು ರೆಪೊ ದರವನ್ನು ಶೇಕಡಾ 6.5 ಕ್ಕೆ ಬದಲಾಯಿಸದೆ ಇರಲು ನಿರ್ಧಾರ ‌ಮಾಡಿದೆ‌‌ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್(Governor Shaktikanta Das )ತಿಳಿಸಿದ್ದಾರೆ.

ಯಾವುದೇ ಬದಲಾವಣೆ ಇಲ್ಲ
ದೇಶದಲ್ಲಿ ಚಿಲ್ಲರೆ ಹಣದುಬ್ಬರವನ್ನು ಕಾಯ್ದುಕೊಂಡು ಬರುವಲ್ಲಿ ಬೆಲೆಯಲ್ಲಿ ಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಇಡಲು ಭಾರತೀಯ ರಿಸರ್ವ್‌ ಬ್ಯಾಂಕ್ ನಿರ್ಧಾರ ಮಾಡಿದೆ.ಈಗಿರುವ ಶೇ 6.5 ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ ತಿಂಗಳ EMI ಕಟ್ಟುತ್ತಿದ್ದ ಎಲ್ಲರಿಗು ದೊಡ್ಡ ರಿಲೀಫ್ ಸಿಕ್ಕಿದೆ.

RBI Monetary Policy 2024 Highlights: RBI keeps repo rate unchanged
Image Source: DNA India

advertisement

ಬಡ್ಡಿದರ ಇಳಿಕೆ?
ರೆಪೊ ದರದಲ್ಲಿ ಹೆಚ್ಚಳವಾಗದೇ ಇರುವುದರಿಂದ ಗೃಹ ಸಾಲದ ಬಡ್ಡಿದರ ಇಳಿಕೆಗೆ ಕಾರಣವಾಗುತ್ತಿದೆ, ಇನ್ನು‌ ಆರ್‌ಬಿಐ ರೆಪೊ ದರ ಮೊದಲಿನಷ್ಟೇ ಅಂದ್ರೆ 6.50% ರಲ್ಲೇ ಉಳಿಸಿಕೊಳ್ಳಲಿದ್ದು ಕಳೆದ ವರ್ಷ ಫೆಬ್ರವರಿ 8, 2023 ರಂದು ರೆಪೋ ದರವನ್ನು ಹೆಚ್ಚು ಮಾಡಿತ್ತು.ಇನ್ನು ಹಣದುಬ್ಬರ ನಿಯಂತ್ರಣ ಮಾಡಲು ಬೇಕಾದ ಹಲವು ರೀತಿಯ ರೂಪು ರೇಷೆಗಳನ್ನು ಅಳವಡಿಕೆ ಮಾಡಿದ್ದು ಆರ್ಥಿಕ ಸ್ಥಿತಿಗತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ ಎಂದುಶಕ್ತಿ‌ ದಾಸ್‌ ಈ ಬಗ್ಗೆ ಹೇಳಿದರು.

ರೆಪೋ ದರ ಎಂದರೇನು?
ರೆಪೋ ದರ ಎಂದರೆ ರಿಸರ್ವ್ ಬ್ಯಾಂಕ್ ದೇಶದ ವಾಣಿಜ್ಯ ಬ್ಯಾಂಕುಗಳಿಗೆ ನೀಡುವಂತಹ ಸಾಲದ ಮೇಲಿನ ಬಡ್ಡಿ ಮೊತ್ತವೇ ರೆಪೋ ದರ ಆಗಿದೆ. ಮಾರುಕಟ್ಟೆಯಲ್ಲಿ ಹಣದ ಸಮಸ್ಯೆ ‌ಇತ್ಯಾದಿ ಎದುರಾದಾಗ ರಿಸರ್ವ್‌ ಬ್ಯಾಂಕ್‌, ರೆಪೋ ದರವನ್ನು ಇಳಿಸುತ್ತದೆ. ಆರ್‌ಬಿಐನಿಂದ ಕಡಿಮೆ ಬಡ್ಡಿಗೆ ಹಣ ದೊರೆತರೆ ಅದರ ಲಾಭವನ್ನು ಬ್ಯಾಂಕುಗಳು ತನ್ನ ಗ್ರಾಹಕರಿಗೂ ನೀಡುತ್ತದೆ. ಇದರಿಂದ ಕಡಿಮೆ ಬಡ್ಡಿದರದಲ್ಲಿ ಸಾಲಗಳು ದೊರೆಯುತ್ತದೆ.‌ಇದೀಗ ರೆಪೋ ದರವನ್ನು ಯಥಾಸ್ಥಿತಿ ಯಲ್ಲಿ ಮುಂದುವರಿಸಲು ಅರ್ ಬಿ‌ಐ ಚಿಂತನೆ ನಡೆಸಿದೆ.

RBI Monetary Policy 2024 Highlights: RBI keeps repo rate unchanged
Image Source: DNA India

advertisement

Leave A Reply

Your email address will not be published.