Karnataka Times
Trending Stories, Viral News, Gossips & Everything in Kannada

KSRTC: ಬೆಳ್ಳಂಬೆಳಿಗ್ಗೆ ರಾಜ್ಯದ ಜನತೆಗೆ KSRTC ಸಿಹಿಸುದ್ದಿ! ಖಾಸಗಿ ಬಸ್ ಗಳಿಗೆ ಟೆನ್ಷನ್ ಶುರು

advertisement

ಈಗಂತೂ ಸರಕಾರಿ ಬಸ್ ನಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಬಸ್ ಸಂಚಾರ ಅಧಿಕವಾದಂತೆ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಬಿಡುಗಡೆ ಮಾಡಲು ಮುಂದಾಗುತ್ತಿತ್ತು,ಯುಗಾದಿ ಹಬ್ಬದ ಪ್ರಯುಕ್ತ ಪ್ರಯಾಣ ಮಾಡುವ ಜನರಿಗೆ ರಾಜ್ಯ ಸರಕಾರದ ಸಾರಿಗೆ ಇಲಾಖೆ ಹೊಸ ವಿಚಾರ ಒಂದನ್ನು ಪ್ರಸ್ತಾಪಿಸಿದೆ. ಹಾಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಈ ಒಂದು ವಿಚಾರ ರಾಜ್ಯದ ಜನತೆಗೆ ದೊಡ್ಡ ಖುಷಿ ನೀಡುತ್ತಿದೆ.

ಹೆಚ್ಚುವರಿ ಬಸ್
ಯುಗಾದಿ ಹಬ್ಬದ ಪ್ರಯುಕ್ತ ಪ್ರಯಾಣ ಮಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದೆ ಎಂಬುದನ್ನು ಗಮನಿಸಿದ ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಯೂ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ 2000 ಕ್ಕೂ ಹೆಚ್ಚು ಬಸ್ ವ್ಯವಸ್ಥೆ ಮಾಡಲು ಮುಂದಾಗಿದೆ. ಇದು ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಅನೇಕ ಭಾಗದಲ್ಲಿ ಈ ಬಸ್ ಪ್ರಯಾಣ ಮಾಡಲಿದೆ. ಹಾಗಾಗಿ ನೀವು ಕೂಡ ಸರಕಾರಿ ಬಸ್ ಪ್ರಯಾಣ ಮಾಡುವವರಾಗಿದ್ದರೆ ಈ ಸುದ್ದಿ ನಿಮಗೂ ಅನುಕೂಲಕರ ಮಾಹಿತಿ ಆಗಲಿದೆ.

Ksrtc ugadi buses
Image Source: Business Standard

advertisement

ಸಾಲು ಸಾಲು ರಜೆ
ಎಪ್ರಿಲ್ ತಿಂಗಳಿನಂದು ಕೆಲಸ ಮಾಡುವ ವರ್ಗಕ್ಕೆ ಸಾಲು ಸಾಲು ರಜೆಗಳು ಒಟ್ಟಿಗೆ ಸಿಗಲಿದೆ. ಬಹುತೇಕ ಕಂಪೆನಿಗಳಲ್ಲಿ 6, 7ತಾರೀಖಿನಂದು ಶನಿವಾರ, ಭಾನುವಾರ ಆದ ಕಾರಣ ರಜೆ ಇದೆ. ಅದೇ ರೀತಿ ಎಪ್ರಿಲ್ 9 ರಂದು ಯುಗಾದಿ ಹಬ್ಬ ಕೂಡ ಇದೆ. ಹಾಗಾಗಿ ಸೋಮವಾರ ಮಾತ್ರ ಆಫೀಸ್ ಇರುವ ಕಾರಣ ಅದೊಂದು ದಿನ ರಜೆ ಮಾಡಿದರೆ ರಜೆ ಒಟ್ಟು 4 ದಿನ ರಜೆ ಸಿಕ್ಕಂತಾಗಲಿದೆ.

ಎಪ್ರಿಲ್ 11 ರಂದು ಗುರುವಾರ ಮತ್ತೆ ಹಬ್ಬ ಇರುವುದರಿಂದ ಬಳಿಕ ಮತ್ತೆ ಪುನಃ 13,14ರಂದು ಶನಿವಾರ ಮತ್ತು ಭಾನುವಾರದ ರಜೆ ಇರಲಿದೆ. ಹಾಗಾಗಿ ಸಾಲು ಸಾಲು ರಜೆ ಸಿಕ್ಕ ಕಾರಣ ಸರಕಾರಿ ಬಸ್ ನಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಳವಾಗಲಿದೆ. ಹಾಗಾಗಿ ಹೆಚ್ಚುವರಿ ಬಸ್ ಬಿಡುಗಡೆ ಮಾಡಲು ರಸ್ತೆ ಸಾರಿಗೆ ಸಂಸ್ಥೆ ತಿಳಿಸಿದೆ. KSRTC ಬಸ್ ಹೆಚ್ಚುವರಿಯಾಗಿ 200 ಬಸ್ ಅನ್ನು ಬಿಡುಗಡೆ ಮಾಡಲಿದೆ.

Ksrtc ugadi buses
Image Source: Business Standard

ಒಟ್ಟು ಎಷ್ಟು ಬಸ್ ಇರಲಿದೆ?
ವಾಯುವ್ಯ ಸಾರಿಗೆ ರಸ್ತೆ ಸಾರಿಗೆ ಸಂಸ್ಥೆಯಿಂದ 145ಬಸ್, KKRTC ನಲ್ಲಿ 200 ಬಸ್, KSRTC 1,750 ಬಸ್, BMTC 200 ಬಸ್ ಹೀಗೆ ಒಟ್ಟು ನಾಲ್ಕೂ ನಿಗಮದಿಂದ 2,275 ಬಸ್ ಗಳು ಬಿಡುಗಡೆ ಆಗಲಿದೆ. ಬಸ್ ರಶ್ ಇರುವ ಚಿಂತೆ ಬಿಟ್ಟು ನೀವು ಕೂಡ ಹಬ್ಬದ ಸಂದರ್ಭದಲ್ಲಿ ಪ್ರಯಾಣ ಮಾಡಲು ಸರಕಾರಿ ಬಸ್ ಬಳಸಬಹುದು.

advertisement

Leave A Reply

Your email address will not be published.