Karnataka Times
Trending Stories, Viral News, Gossips & Everything in Kannada

Gruha Lakshmi Scheme: ಪುರುಷರ ಖಾತೆಗೂ ಬೀಳಲಿದೆ ಗೃಹಲಕ್ಷ್ಮಿ ಹಣ! ಆದರೆ ಇಂತಹವರಿಗೆ ಮಾತ್ರ, ಇಲ್ಲಿದೆ ಟ್ವಿಸ್ಟ್

advertisement

Gruha Lakshmi Scheme 2024: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎನ್ನುವ ಪ್ರಣಾಳಿಕೆ ಯೊಂದಿಗೆ ಹೆಚ್ಚಿನ ಮತವನ್ನು ಪಡೆದಿತ್ತು.‌ಇದಾದ ಬಳಿಕ ರಾಜ್ಯ ಸರಕಾರದ ಮೂಲಕ ಗ್ಯಾರಂಟಿ ಯೋಜನೆಗಳು( guarantee schemes)  ಕೂಡ ಜಾರಿಗೆ ಬಂದವು.ಇಂದು‌ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ,ಶಕ್ತಿ ಯೋಜನೆ ಇತ್ಯಾದಿ‌ ಎಲ್ಲ ಯೋಜನೆಗಳ ಸೌಲಭ್ಯ ವನ್ನು ಜನತೆ ಪಡೆಯುತ್ತಿದೆ.ಅದರಲ್ಲೂ ಇಂದು ಹೆಚ್ಚು ಪ್ರಚಲಿತ ದಲ್ಲಿರುವ ಯೋಜನೆ ಎಂದರೆ ಅದು ಗೃಹಲಕ್ಷ್ಮಿ ಯೋಜನೆ. ಇದೀಗ ಪುರುಷರಿಗೂ ಈ ಯೋಜನೆ ಅನ್ವಯವಾಗಲಿದೆ,ಎರಡು ಸಾವಿರ ಖಾತೆಗೆ ಜಮೆಯಾಗಲಿದೆ ಎನ್ನುವ ಮಾಹಿತಿ ವೈರಲ್ ಆಗುತ್ತಿದೆ. ಹಾಗಿದ್ದಲ್ಲಿ ಪುರುಷರಿಗೂ ಅನ್ವಯವಾಗುತ್ತ ಎನ್ನುವ ಸ್ಪಷ್ಟನೆ ಇಲ್ಲಿದೆ.

ಮಹಿಳೆಯರಿಗೆ ಗೃಹಲಕ್ಷ್ಮಿ ಭಾಗ್ಯ 
ಈಗಾಗಲೇ ರಾಜ್ಯ ಸರಕಾರವು ಮನೆಯ ಹಿರಿಯ ಮಹಿಳೆಗೆ ಆರ್ಥಿಕ ವಾಗಿ ಸಹಾಯ ಮಾಡುವ ನಿಟ್ಟಿನಲ್ಲಿ ಎರಡು ಸಾವಿರ ರೂಪಾಯಿ ಯನ್ನು ಖಾತೆಗೆ ಜಮೆ ಮಾಡುತ್ತಿದೆ.‌ಈಗಾಗಲೇ ನೋಂದಣಿ ಮಾಡಿದ ಮಹಿಳೆಯರಿಗೆ ಏಳು ಕಂತಿನ ವರೆಗೆ ಹಣ ಜಮೆಯಾಗಿದ್ದು ಎಂಟನೇ ಕಂತಿನ ಹಣ ಇನ್ನಷ್ಟೆ ಜಮೆಯಾಗಬೇಕಿದೆ.ಎಂಟನೇ ಕಂತಿನ ಹಣ ಈ ತಿಂಗಳ 20 ರ ಒಳಗೆ ಮಹಿಳೆಯರ ಖಾತೆಗೆ ಜಮೆಯಾಗಬಹುದು ಎನ್ನಲಾಗಿದೆ.

Gruha Lakshmi Scheme 2024 for men
Image Credit: Zee News

advertisement

ಯಾವ ಪುರುಷರಿಗೆ ಈ ಹಣ?(Gruha Lakshmi Scheme 2024 for men) 
ಈ ಯೋಜನೆಯು ರೇಷನ್ ಕಾರ್ಡ್ ನಲ್ಲಿ ದಾಖಲಾಗಿದ್ದ ಮೊದಲ ಮಹಿಳೆಯ ಅಂದರೆ ಮನೆಯ ಮುಖ್ಯ ಮಹಿಳೆಯ ಖಾತೆಗೆ ಹಣ ಜಮೆ ಮಾಡುತ್ತಿದೆ.ಅದ್ರೆ ಕೆಲವೊಂದು ಕಡೆ ಒಬ್ಬ ವ್ಯಕ್ತಿ ಅಂದರೆ ಒಬ್ಬರೇ ಜೀವನ ನಡೆಸುವಂತಹ ವ್ಯಕ್ತಿಯು ಸಹ ಇದ್ದಾರೆ. ಈಗಾಗಲೇ 100 ರಲ್ಲಿ 8% ನಷ್ಟು ಜನ ಒಬ್ಬರೇ ಜೀವನ ನಡೆಸುವ ವ್ಯಕ್ತಿ ಇದ್ದಾರೆ. ಇಂತಹ ಪುರುಷ ವ್ಯಕ್ತಿಗೆ, ಯಾವುದೇ ಮಹಿಳೆಯು ಕೂಡ ಮನೆಯಲ್ಲಿ ಇಲ್ಲ ಎಂದಾದರೆ ಆ ಹಣ ಪುರುಷ ಖಾತೆಗೆ ಜಮೆ ಮಾಡುವ ಬಗ್ಗೆ ಸರಕಾರ ಈಗಾಗಲೇ ಈ ಬಗ್ಗೆ ಚರ್ಚೆ ಮಾಡಿದೆ. ಹೀಗಾಗಿ ಈ ಹಣ ಪುರುಷರ ಖಾತೆಗೂ ಬೀಳಲಿದೆ ಎನ್ನುವ ಸುದ್ದಿ ವೈರಲ್ ಆಗಿದೆ.

ಲೋಕಸಭೆ ಚುನಾವಣೆ ಗೆಲ್ಲದಿದ್ದರೆ ಗ್ಯಾರಂಟಿ ರದ್ದು ಆಗುತ್ತಾ?
ಈಗಾಗಲೇ ಲೋಕ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲದಿದ್ದರೆ ಗ್ಯಾರಂಟಿ ಯೋಜನೆಗಳು ರದ್ದು ಆಗುತ್ತದೆ ಎಂಬ ಮಾತುಗಳು ಬಹಳಷ್ಟು ವೈರಲ್ ಆಗುತ್ತಿದೆ.‌ಆದ್ರೆ ಕಾಂಗ್ರೆಸ್ ರದ್ದು ಮಾಡುವ ತಿರ್ಮಾನ ಮಾಡಿಲ್ಲ ವಾದರೂ ಕೇಂದ್ರದಲ್ಲಿ ಯಾವ ಪಕ್ಷ ಬರಲಿದೆ ಅನ್ನೋ ‌ಮೇಲೆ ಗ್ಯಾರಂಟಿ ಯೋಜನೆಗಳ ನಿಲುವು ಇರಲಿದೆ.ಅಂದರೆ ಕೇಂದ್ರ ಸರಕಾರದ ನಿರ್ಣಯ ದ ಮೇಲೆ ಈ ಯೋಜನೆಗಳು ನಿಲ್ಲಬಹುದು ಎನ್ನಲಾಗಿದೆ.

Gruha Lakshmi Scheme 2024 for men
Image Credit: Zee News

advertisement

Leave A Reply

Your email address will not be published.