Karnataka Times
Trending Stories, Viral News, Gossips & Everything in Kannada

2000 Note: ಎಲೆಕ್ಷನ್ ಗೂ ಮುನ್ನವೇ 2000 ರೂ ನೋಟಿನ ಬಗ್ಗೆ ರಿಸರ್ವ್ ಬ್ಯಾಂಕ್ ಹೊಸ ಆದೇಶ

advertisement

ಎರಡು ಸಾವಿರ ಮುಖ ಬೆಲೆಯ ನೋಟ (2000 Note) ನ್ನು ಕೇಂದ್ರ ಸರಕಾರವು ಹಿಂಪಡೆಯುವ ನಿರ್ಧಾರ ಮಾಡುತ್ತಿದ್ದಂತೆ ಜನರ ಬಳಿ ಸಂಗ್ರಹವಾಗಿದ್ದ ಎರಡು ಸಾವಿರ ಮುಖ ಬೆಲೆಯ ನೋಟನ್ನು ವಿನಿಮಯ ಮಾಡಿಕೊಳ್ಳುವಂತೆ ಈಗಾಗಲೇ ಅನೇಕ ಸಲ ಸೂಚನೆ ನೀಡಿತ್ತು, ಹಾಗಿದ್ದರೂ ಜನರ ಬಳಿಯಲ್ಲೇ ಶೇಖರಣೆ ಆಗಿರುವ ನೋಟು ಇನ್ನೂ ಕೂಡ RBIಗೆ ಹಿಂದಿರುಗಿಲ್ಲ ಈ ಬಗ್ಗೆ ಹೊಸದಾದ ಸೂಚನೆಯನ್ನು ಕೇಂದ್ರ ಸರಕಾರ ತಿಳಿಸಿದ್ದು ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಹಿಂದೆ ಕೂಡ ಒಂದು ಸಾವಿರ ಮೌಲ್ಯದ ನೋಟನ್ನು ಅಮಾನ್ಯ ಮಾಡಲಾಗಿದ್ದು ಅದು ಸಂಪೂರ್ಣವಾಗಿ ಮೌಲ್ಯ ರಹಿತವಾಗಿತ್ತು. ಆದರೆ ಎರಡು ಸಾವಿರ ಮುಖ ಬೆಲೆ ಮೌಲ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ಇರುವ ಕಾರಣ ಅದರ ವಿನಿಮಯಕ್ಕೆ ಈಗಾಗಲೇ ಅನೇಕ ಸಲ ಅವಕಾಶ ನೀಡಲಾಗಿದೆ. ಅಂಚೆ ಕಚೇರಿ, ಸರಕಾರದ ಸೇವಾ ಸಂಸ್ಥೆಗಳು ಹಾಗೂ ಬ್ಯಾಂಕ್ ನಲ್ಲಿ ನಿಮ್ಮ ನೋಟನ್ನು ನೀಡುವಂತೆ RBI ಸೂಚನೆಯನ್ನು ಈಗಾಗಲೇ ನೀಡಿದ್ದು 2,000 ಮುಖ ಬೆಲೆಯ ನೋಟಿನ ಬಗ್ಗೆ ಹೊಸದಾದ ಕ್ರಮ ತೆಗೆದುಕೊಂಡಿರುವುದಾಗಿ ತಿಳಿಸಿ ಆದೇಶ ಹೊರಡಿಸಲಾಗಿದೆ.

Image Source: Samacharnama

ಇನ್ನೂ ಪೂರ್ತಿ 2000 Note ಬಂದಿಲ್ಲ

RBI ನ ಎರಡು ಸಾವಿರ ಮುಖಬೆಲೆಯ ಪೂರ್ತಿ ನೋಟು ಇದುವರೆಗೆ ಹಿಂದಿರುಗಿಲ್ಲ ಎನ್ನಬಹುದು. ಇದುವರೆಗೆ ಫೆಬ್ರವರಿ ತಿಂಗಳಲ್ಲಿ ಒಟ್ಟು 97% ನಷ್ಟು ಹಣ RBIಗೆ ಹಿಂದಿರುಗಿದ್ದು ಉಳಿದಂತೆ 8,470ಕೋಟಿ ರೂಪಾಯಿ ಹಣ ಇನ್ನೂ ಕೂಡ ಜನರ ಬಳಿಯಲ್ಲೇ ಸಂಗ್ರಹಿತವಾಗಿದೆ ಹಾಗಾಗಿ ಈ ಹಣ ವಾಪಾಸ್ಸು ನೀಡಲು RBI ಅವಕಾಶವನ್ನು ನೀಡಿದೆ.

advertisement

2000 Note ಸ್ಥಗಿತ ನಿರ್ಧಾರ

ಲೋಕಸಭೆ ಚುನಾವಣೆ ಇರುವ ಹಿನ್ನೆಲೆಯಲ್ಲಿ ಕೆಲ ಪ್ರಮುಖ ನಿರ್ಣಯಕ್ಕೆ RBI ಬಂದಿದೆ. ಈಗಾಗಲೇ ಮಾರ್ಚ್ ತಿಂಗಳ ಅಂತ್ಯದಲ್ಲಿದ್ದು ಇದು ಹಣಕಾಸು ವರ್ಷದ ಅಂತ್ಯವಾಗಲಿದೆ. ಹಾಗಾಗಿ ದೇಶದಾದ್ಯಂತ 19 ವಿತರಣಾ ಸಂಸ್ಥೆಯಲ್ಲಿ 2000 ಮುಖ ಬೆಲೆಯ ನೋಟಿನ ವಿನಿಮಯ ಅಥವಾ ಠೇವಣಿ ಸಾಧ್ಯವಿಲ್ಲ ಎಂದು ಹೇಳಿದೆ. ಈ ಮೂಲಕ ಎಪ್ರಿಲ್ ಒಂದರವರೆಗೆ ಕೂಡ ನೋಟು ವಿನಿಮಯ ತಾತ್ಕಾಲಿಕ ಸ್ಥಗಿತವಾಗಲಿರುವುದಾಗಿ ತಿಳಿಸಿದ್ದಾರೆ.

Image Source: ET Government

ಯಾವಾಗ ಪುನಃ ಅವಕಾಶ

ಎಪ್ರಿಲ್ ಒಂದರಂದು ಎರಡು ಸಾವಿರ ಮುಖ ಬೆಲೆಯ ನೋಟಿನ ವಿನಿಮಯ ತತ್ಕಾಲಿಕ ಸ್ಥಗಿತವಾಗಿದ್ದು ಎಪ್ರಿಲ್ 2ರಿಂದ 19ವಿತರಣಾ ಸಂಸ್ಥೆಗಳಲ್ಲಿ ನೋಟು ವಿನಿಮಯ ಮಾಡಿಕೊಳ್ಳಲು ಅವಕಾಶ ಸಿಗಲಿದೆ ಎಂದು ಹೇಳಬಹುದು. ಹಾಗಾಗಿ ಚುನಾವಣೆಯಲ್ಲಿ ದೊಡ್ಡ ಮೊತ್ತದ ಹಣ ಬಂದರೂ ಅದರ ವಿನಿಮಯ ಕೂಡ ಮಾಡಲಾಗದು, ಒಂದು ವೇಳೆ ಎಪ್ರಿಲ್ 2ರ ಬಳಿಕ ಹಣ ವಿನಿಮಯಕ್ಕೆ ಬಯಸಿದರೂ ದೊಡ್ಡ ಮೊತ್ತವಿದ್ದರೆ ಸೂಕ್ತ ದಾಖಲೆಯನ್ನು ನೀಡುವುದು ಅತ್ಯವಶ್ಯಕ ವಾಗಿದೆ.

advertisement

Leave A Reply

Your email address will not be published.