Karnataka Times
Trending Stories, Viral News, Gossips & Everything in Kannada

Gruha Lakshmi: ಗೃಹಲಕ್ಷ್ಮಿ 7ನೇ ಕಂತಿನ ಹಣದ ಕುರಿತು ಬೆಳ್ಳಂಬೆಳಗ್ಗೆ ಸಿಹಿಸುದ್ದಿ ನೀಡಿದ ರಾಜ್ಯ ಸರ್ಕಾರ

advertisement

ಮಹೀಳೆಯರ ಅಭಿವೃದ್ಧಿ ಗಾಗಿ ಸರಕಾರ ಈಗಾಗಲೇ ಹಲವು ಯೋಜನೆಯನ್ನು ಜಾರಿ ಗೊಳಿಸಿದ್ದು ಅದರಲ್ಲಿ ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆಯು ಕೂಡ ಒಂದಾಗಿದೆ.‌ಮನೆಯ ಯಜಮಾನಿ ಎಂದು ಗುರುತಿಸಿಕೊಂಡಿರುವ ಮಹೀಳೆಗೆ ತಿಂಗಳಿನಲ್ಲಿ ಎರಡು ಸಾವಿರ ರೂಪಾಯಿ ಜಮೆ ಮಾಡುವ ಯೋಜನೆ ಇದಾಗಿದ್ದು ಹೆಚ್ಚಿನ ಮಹೀಳೆಯರು ಈ ಯೋಜನೆಗೆ ನೊಂದಣಿ ಮಾಡಿದ್ದಾರೆ. ಈಗಾಗಲೆ ನೊಂದಣಿ ಮಾಡಿದ ಕೆಲವು ಮಹೀಳೆಯರಿಗೆ ಅಷ್ಟೆ ಈ ಹಣ ಜಮೆಯಾಗಿದ್ದು ಕೆಲವು ನೊಂದಣಿ ಮಾಡಿದ ಮಹೀಳೆಯರಿಗೆ ಹಣ ಜಮೆ ಯಾಗಿಲ್ಲ‌‌‌. ಈಗಾಗಲೇ ಆಧಾರ್ ಜೋಡಣೆ,, ಇ-ಕೆವೈಸಿ ಅಪ್ಡೆಟ್, ಬ್ಯಾಂಕ್ ಖಾತೆ ನಿಷ್ಕ್ರಿಯ ಆರಂಭ ಸೇರಿದಂತೆ ಹಲವು ಸಮಸ್ಯೆಗಳಿಂದಾಗಿ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ ಹಣ ಬಂದಿಲ್ಲ ಇದಕ್ಕಾಗಿ ಸರಕಾರ ಹಲವು ರೀತಿಯ ಕ್ರಮಗಳನ್ನು ಕೂಡ ತೆಗೆದುಕೊಂಡಿದೆ.

ಏಳನೆ ಕಂತಿನ ಹಣ ಜಮೆ?

 

 

ಈಗಾಗಲೇ ಆರು ಕಂತಿನ ಹಣ ಮಹೀಳೆಯರ ಖಾತೆಗೆ ಬಂದಿದ್ದು ಏಳನೇ ಕಂತಿನ ಹಣಕ್ಕಾಗಿ ಮಹೀಳೆಯರು ಕಾದು ಕುಳಿತಿದ್ದಾರೆ. ಈಗಾಗಲೇ ಏಳನೆ ಕಂತಿನ ಹಣವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲು ಮಹೀಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿದ್ದತೆಯನ್ನು ಮಾಡಿದ್ದು ಇಂದು ಈ ಹಣವನ್ನು ಹಣಕಾಸು ಇಲಾಖೆಗೆ ಕಳುಹಿಸಲಾಗುತ್ತದೆ. ತದನಂತರದಲ್ಲಿ ಮಹೀಳೆಯರ ಖಾತೆಗೆ ನೇರವಾಗಿ ಡಿಬಿಡಿ ಮೂಲಕ ವರ್ಗಾವಣೆ ಮಾಡಲಾಗುತ್ತೆ. ಅದ್ರೆ ಎಲ್ಲರ ಖಾತೆಗೂ ಹಣ ಒಟ್ಟಿಗೆ ಜಮೆ ಯಾಗುವುದಿಲ್ಲ.‌ ಈ ಮಾರ್ಚ್ 10 ರ ಒಳಗೆ ಗೃಹಲಕ್ಷ್ಮಿ ಹಣ (Gruha Lakshmi Money) ಎಲ್ಲಾ ಮಹೀಳಾ ಖಾತೆಗೂ ಜಮೆ ಯಾಗಬಹುದು.

advertisement

ಹಣ ಜಮೆಯಾಗದವರ ಪಟ್ಟಿ:

ಈಗಾಗಲೇ ಗೃಹಲಕ್ಷ್ಮಿ ಹಣ (Gruha Lakshmi Money) ನೊಂದಣಿ ಮಾಡಿದ ಸುಮಾರು 40% ಹಣ ಜಮೆ ಯಾಗಿಲ್ಲ. ಇದಕ್ಕಾಗಿ ಸರಕಾರ ಹಲವು ಸೂಚನೆಯನ್ನು ಈಗಾಗಲೇ ನೀಡಿದ್ದು ಇದೀಗ ಯಾರೆಗೆಲ್ಲ ಹಣ ಜಮೆ ಯಾಗಿಲ್ಲ ಅಂತವರ ಪಟ್ಟಿ ಯನ್ನು ಕೂಡ ಸಿದ್ದತೆ ಮಾಡಿದೆ. ಇಂತಹ ದಾಖಲೆ, ಖಾತೆಗಳನ್ನು ಪರಿಶೀಲನೆ ಮಾಡಿ ಏನು ಸಮಸ್ಯೆ ಎಂಬುದನ್ನು ಅರಿತು ಖಾತೆಗೆ ಹಣ ಜಮೆ ಮಾಡಲಿದೆ. ಈ ತಿಂಗಳಿನಲ್ಲಯೇ ಹಣ ಬಾರದವರಿಗೆ ಒಟ್ಟಿಗೆ ಎಲ್ಲ ಕಂತಿನ ಹಣ ಹಾಕಲಿದೆ.

ಸಮಸ್ಯೆ ಬಗೆಹರಿಸಿಕೊಳ್ಳಿ:

ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಹಣ ಬಾರದೇ ಇದ್ದಲ್ಲಿ 8147500500 ಸಂಖ್ಯೆಗೆ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ ಸಂದೇಶ ಕಳುಹಿಸಿರಿ. ಈ ಸಂಖ್ಯೆಗೆ ಸಂದೇಶ ಕಳುಹಿಸಿದ ತಕ್ಷಣವೇ ನಿಮ್ಮ ಗೃಹಲಕ್ಷ್ಮಿ ಅರ್ಜಿಯ ಪರಿಸ್ಥಿತಿ ಏನಾಗಿದೆ ಸಂದೇಶ ಬರಲಿದೆ. ಇಲ್ಲದಿದ್ದಲ್ಲಿ ನಿಮ್ಮ ಹತ್ತಿರ ಸೇವಾ ಕೇಂದ್ರ ಗಳಲ್ಲಿ ವಿಚಾರಿಸಿ ನಿಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳಿ.

advertisement

Leave A Reply

Your email address will not be published.