Karnataka Times
Trending Stories, Viral News, Gossips & Everything in Kannada

Govt Employees: ಸರಕಾರದ ಉದ್ಯೋಗಸ್ಥರಿಗೆ ಹೊಸ ರೂಲ್ಸ್ ಜಾರಿ!

advertisement

ಇತ್ತೀಚಿನ ದಿನದಲ್ಲಿ ಅಕ್ರಮ ಆಸ್ತಿ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಲೇ ಇದೆ‌. ಅದರಲ್ಲೂ ಉನ್ನತ ಹುದ್ದೆಯಲ್ಲಿರುವವರೆ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಮೋಸ ಮಾಡುತ್ತಿದ್ದಾರೆ. ಹಾಗಾಗಿ ಅಕ್ರಮ ಆಸ್ತಿ ಹೊಂದಿರುವವರು ಈ ಆಸ್ತಿಯನ್ನು ಗಳಿಸಿದ್ದಕ್ಕೆ ಲೆಕ್ಕ ತೆತ್ತದೇ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನಬಹುದು. ಸರಕಾರಿ ಉದ್ಯೋಗ (Govt Employees) ದಲ್ಲಿರುವವರೆ ಈ ರೀತಿ ಅಧಿಕವಾಗಿ ಮೋಸ ಮಾಡುತ್ತಿದ್ದು ಸರಕಾರಿ ನೌಕರರ ಆಸ್ತಿಯ ವಿವರ ಕಲೆ ಹಾಕಲು ಸರಕಾರ ನಿರ್ಧಾರ ಕೈಗೊಂಡಿದೆ.

ಆಸ್ತಿಯನ್ನು ಹೊಸದಾಗಿ ಪಡೆಯುವುದು,ಅಥವಾ ಇದ್ದ ಆಸ್ತಿಯನ್ನು ಮಾರಾಟ ಮಾಡುವುದು ಹಾಗೂ ನೂತನವಾಗಿ ಆಸ್ತಿ ಪತ್ರ ಬದಲಾಯಿಸಲು, ವಂಶಾವಳಿಯಿಂದ ಬಂದ ಆಸ್ತಿ , ಸ್ವಂತ ಆಸ್ತಿ ಹೀಗೆ ನಾನಾ ವಿಧದಲ್ಲಿ ಆಸ್ತಿ ಸಂಗ್ರಹ ಮಾಡಿದ್ದ ಸರಕಾರಿ ನೌಕರರುಈ ಬಗ್ಗೆ ಸರಕಾರಕ್ಕೆ ಅಧಿಕೃತ ಮಾಹಿತಿ ನೀಡಲೇ ಬೇಕಿದೆ. ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಣೆ ಮಾಡುವವರಿಗೆ ಕೂಡ ಇದೆ ನಿಯಮ ಜಾರಿಗೆ ತಂದಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಮಹತ್ವದ ಆದೇಶ ಹೊರಹಾಕಿದೆ.

ಏನಿದೆ ಅದರಲ್ಲಿ?

ಪೊಲೀಸ್ ಇಲಾಖೆ ಸಿಬಂದಿ ಹಾಗೂ ನೌಕರರಿ ಸ್ಥಿರ ಅಥವಾ ಚರ ಆಸ್ತಿಯನ್ನು ಖರೀದಿ ಅಥವಾ ಮಾರಾಟಮಾಡಬೇಕಾದರೆ ಸಲ್ಲಿಸಬೇಕಾದ ದಾಖಲಾತಿ ಬಗ್ಗೆ ವಿವರವಾಗಿ ಹೇಳಲಾಗಿದೆ. ಈ ಮೂಲಕ ಎಲ್ಲ ಪೊಲೀಸ್ ಅಧಿಕಾರಿಗಳ ಮತ್ತು ಸಿಬಂದಿಗೆ ಈ ಬಗ್ಗೆ ಸೂಚನೆ ನೀಡಬೇಕು ಎಂದು ಸಹ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇದಕ್ಕೆ ಅನುಮತಿ ಮನವಿಯನ್ನು ಸಲ್ಲಿಸಬೇಕಿದೆ. ರಾಜ್ಯ ನಾಗರಿಕ ಸೇವಾ ನಿಯಮ 2021ರ ಸೆಕ್ಷನ್ 24ರ ಅನ್ವಯ ಕೆಲವು ಆದೇಶ ಜಾರಿಗೆ ತರಲಾಗುತ್ತದೆ.

advertisement

ಬಿಗು ರೂಲ್ಸ್

ಈ ಒಂದು ಸೆಕ್ಷನ್ ಅನ್ವಯ ರಾಜ್ಯ ಸರಕಾರದ ಅಧಿನ ಕೆಲಸದಲ್ಲಿ ಇರುವ ಸರಕಾರಿ ನೌಕರನು (Govt Employees) ಸ್ಥಿರ ಮತ್ತು ಚರಾಸ್ತಿ ಹೊಂದಿದ್ದರೆ ಈ ಬಗ್ಗೆ ಖಡ್ಡಾಯವಾಗಿ ಮಾಹಿತಿಯನ್ನು ಸರಕಾರಕ್ಕೆ ನೀಡಬೇಕು ಸರಕಾರಿ ನೌಕರ ಮಾತ್ರವಲ್ಲದೆ ಆತನ ಕುಟುಂಬದವರು ಸಹ ಖರೀದಿ ಮಾಡಿದ್ದರೆ ಆ ಮಾಹಿತಿಯೂ ಸಲ್ಲಿಕೆ ಆಗಬೇಕು. ಗುತ್ತಿಗೆ ಆಧಾರಿತ, ಸ್ವಂತ,ಉಡುಗೊರೆಯಾಗಿ ಯಾವುದೇ ತರ ಆಸ್ತಿ ಪಡೆದರೂ ಸರಕಾರಕ್ಕೆ ಸೂಕ್ತ ದಾಖಲೆ ಸಹಿತ ಮಾಹಿತಿ ನೀಡಲೇ ಬೇಕು ಇಲ್ಲವಾದರೆ ಎರಡು ತಿಂಗಳು ಮಾಹಿತಿ ಸಲ್ಲಿಕೆಗೆ ಅವಕಾಶ ನೀಡಿ ಅಲ್ಲಿ ಕೂಡ ಮಾಹಿತಿ ನೀಡದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತಿನ ನಡಾವಳಿ ಜಾರಿಗೆ ತರಲು ತೀರ್ಮಾನಿಸಲಾಗಿದೆ. ಉಲ್ಲಂಘನೆ ಮಾಡಿದರೆ KSB ನಿಯಮ ಉಲ್ಲಂಘನೆ ವಿರುದ್ದ ಶಿಸ್ತಿನ ಕ್ರಮ ಜಾರಿ ಮಾಡಲಾಗುವುದು ಎಂದು ಸರಕಾರ ತಿಳಿಸಿದೆ.

ನಿಯಮಿತ ಪ್ರಾಧಿಕಾರಕ್ಕೆ ವರದಿ

ಸರಕಾರಿ ಆಧಿಕಾರಿಗಳು ತಮ್ಮ ಆಸ್ತಿ ವಿವರಗಳನ್ನು ನಿಯಮಿತ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು. ನಿಯಮಿತ ಪ್ರಾಧಿಕಾರವು ಸರಕಾರಿ ಅಧಿಕಾರ ನೀಡಿದ್ದ ಮಾಹಿತಿ, ದಾಖಲಾತಿ ಸರಿ ಇದೆ ಅಥವಾ ಇಲ್ಲ ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಬೇಕು. ವಿವರವನ್ನು ಘಟನೋತ್ತವಾಗಿ ಟಿಪ್ಪಣಿ ಮಾಡಲು ಸಹ ಪ್ರಾಧಿಕಾರಕ್ಕೆ ಅಧಿಕಾರ ಇರಲಿದೆ. ನಿಯಮಿತ ಪ್ರಾಧಿಕಾರಕ್ಕೆ ಮೊದಲೇ ತಿಳಿಸದೇ ಯಾವುದೇ ಸ್ಥಿರ ಸುತ್ತನ್ನು ಖರೀದಿ ಅಥವಾ ಮಾರಾಟ ಮಾಡಿದರೆ ಆಗ ಆ ವ್ಯಕ್ಯಿ ವ್ಯವಹಾರ ಮಾಡಿದ್ದ ಎರಡು ತಿಂಗಳ ಒಳಗೆ ಅದಕ್ಕೆ ಪೂರಕವಾದ ದಾಖಲೆಗಳನ್ನು ನೀಡಬೇಕು. ಹಾಗೂ ಸಮರ್ಥನೀಯ ಕಾರಣ ನೀಡಬೇಕು.

advertisement

Leave A Reply

Your email address will not be published.