Karnataka Times
Trending Stories, Viral News, Gossips & Everything in Kannada

Women Schemes: 30 ಸಾವಿರ ರೂ ಬಡ್ಡಿ ನೀಡುವ ಕೇಂದ್ರದ ಈ ಯೋಜನೆ ಮಹಿಳೆಯರಿಗಾಗಿ ಮಾತ್ರ! ಬಂಪರ್ ಕೊಡುಗೆ

advertisement

“Mahila Samman Savings Certificate”: ಸರ್ಕಾರ ನಡೆಸುತ್ತಿರುವಂತಹ ಕೆಲ ಪೋಸ್ಟ್ ಆಫೀಸ್ (Post Office)ಯೋಜನೆಗಳು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಸಹಕರಿಸುತ್ತಿದೆ. ಮಹಿಳೆಯರು ತಾವು ದುಡಿದ ಹಣದಲ್ಲಿ ಸ್ವಲ್ಪ ಹಣವನ್ನು ಉಳಿಸಿ ಇಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ, ಅದರಿಂದ ನಿರೀಕ್ಷೆಗೂ ಮೀರಿದಂತಹ ಲಾಭವನ್ನು ಪಡೆಯಬಹುದು. ಅದರಂತೆ ಸರ್ಕಾರ ಜಾರಿಗೊಳಿಸಿರುವ ಮಹಿಳಾ ಸಮ್ಮನ್ ಉಳಿತಾಯ ಯೋಜನೆ(mahila Samman saving certificate scheme) ಯು ಅಲ್ಪಾವಧಿಯ ಹೂಡಿಕೆಯ ಮೇಲೆ ಭಾರಿ ಬಡ್ಡಿ ದರವನ್ನು ನೀಡುತ್ತಿದೆ.

ಸರ್ಕಾರವು 7.5% ಇಂಟರೆಸ್ಟ್ ನೀಡುತ್ತಿದೆ ( Key Features of the Scheme)

ಮಹಿಳಾ ಸಮ್ಮನ್ ಉಳಿತಾಯ ಯೋಜನೆ, ಮಹಿಳೆಯರಿಗೋಸ್ಕರ ಸರ್ಕಾರ ನಡೆಸುತ್ತಿರುವಂತಹ ವಿಶೇಷ ಪೋಸ್ಟ್ ಆಫೀಸ್ ಯೋಜನೆ(post office scheme) ಇದಾಗಿದ್ದು ಇದರಲ್ಲಿ ಮಹಿಳೆಯರ ಅಲ್ಪಾವಧಿಯ ಹೂಡಿಕೆಯ ಮೇಲೆ ಅದ್ಭುತ ಆದಾಯವನ್ನು ನೀಡುತ್ತಿದ್ದಾರೆ. ಹೌದು ಗೆಳೆಯರೇ ನೀವೇನಾದ್ರೂ ಈ ಯೋಜನೆಯ ಅಡಿ ಎರಡು ಲಕ್ಷ ಹಣವನ್ನು ಅಲ್ಪಾವಧಿಗಳ ಕಾಲ ಹೂಡಿಕೆ ಮಾಡಿದರೆ ನಿಮ್ಮ ಹಣಕ್ಕೆ ಸರ್ಕಾರದ ವತಿಯಿಂದ ಬರೋಬ್ಬರಿ 7.5% ನಷ್ಟು ಬಡ್ಡಿ ಹಣ ದೊರಕಲಿದೆ.

post office schemes
Image Source: Times Now

ಕೇವಲ ಎರಡು ವರ್ಷದ ಹೂಡಿಕೆ ಯೋಜನೆ

advertisement

2023ರ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಸಲುವಾಗಿ ಈ ಸಣ್ಣ ಉಳಿತಾಯ ಯೋಜನೆಯನ್ನು ಜಾರಿಗೆ ತಂದಿದ್ದು, ಇದರಲ್ಲಿ ಮಹಿಳೆಯರು ಗರಿಷ್ಠ ಎರಡು ಲಕ್ಷ ರೂಪಾಯಿ ಹಣವನ್ನು ಕೇವಲ ಎರಡು ವರ್ಷಗಳವರೆಗೂ ಹೂಡಿಕೆ ಮಾಡಬೇಕು, ಹೂಡಿಕೆ ಮಾಡಿರುವ ಹಣದ ಆಧಾರದ ಮೇಲೆ ಅಲ್ಪಾವಧಿಯಲ್ಲಿ ಅದ್ಭುತ ಬಡ್ಡಿ ದರದೊಂದಿಗೆ ಲಾಭವನ್ನು ಪಡೆಯಬಹುದು.

ಹತ್ತು ವರ್ಷದ ಹೆಣ್ಣು ಮಗುವಿಗೂ ಈ ಯೋಜನೆ ಲಭ್ಯ

ಮಹಿಳೆಯರ ಅಭಿವೃದ್ಧಿಗಾಗಿ, ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯನ್ನು ಜಾರಿಗೊಳಿಸಿರುವಂತಹ ಸರ್ಕಾರ ಅಲ್ಪಾವಧಿಯಲ್ಲಿ ಮಹಿಳೆಯರು ಹೂಡಿಕೆ ಮಾಡಿರುವಂತಹ ಹಣಕ್ಕೆ 7.5% ಬಡ್ಡಿ ಹಣವನ್ನು ನೀಡುವುದರ ಜೊತೆಗೆ 80C ಆದಾಯ ತೆರಿಗೆ ಕಾಯ್ದೆಡಿ(income tax act), ಹೂಡಿಕೆ ತೆರಿಗೆಯಿಂದ ವಿನಾಯಿತಿ(tax exemption)ಯನ್ನು ನೀಡುತ್ತಿದ್ದಾರೆ. ಇನ್ನು ಮುಖ್ಯವಾಗಿ ಈ ಯೋಜನೆಯನ್ನು 10 ವರ್ಷಕ್ಕಿಂತ ಕೆಳ ವಯಸ್ಸಿನ ಹೆಣ್ಣು ಮಕ್ಕಳಿಗೂ ತೆರೆಯಬಹುದು.

India TV Hindi

ಈ ರೀತಿ ನಿಮ್ಮ ಎರಡು ಲಕ್ಷದ ಹೂಡಿಕೆಗೆ 30 ಸಾವಿರ ಲಾಭ ದೊರಕುತ್ತದೆ

ಮಹಿಳಾ ಸಮ್ಮನ್ ಉಳಿತಾಯ ಯೋಜನೆಯಲ್ಲಿ ನೀವೇನಾದರೂ 2 ಲಕ್ಷ ರೂಪಾಯಿ ಹಣವನ್ನು 2 ವರ್ಷಗಳ ಕಾಲ ಹೂಡಿಕೆ ಮಾಡಿದರೆ ನಿಮ್ಮ ಹಣಕ್ಕೆ 7.5% ಬಡ್ಡಿ ದೊರಕುತ್ತದೆ. ಅದರಂತೆ ಮೊದಲ ವರ್ಷ ₹15 ಸಾವಿರ, ಎರಡನೇ ವರ್ಷ ₹16,125 ಬಡ್ಡಿ ಹಣ ನಿಮ್ಮ ಹೂಡಿಕೆಯನ್ನು ಸೇರಲಿದೆ. ಇದರಿಂದಾಗಿ ಹೂಡಿಕೆಯ ಅವಧಿ ಮುಗಿದ ಬಳಿಕ ನಿಮ್ಮ ಎರಡು ಲಕ್ಷದ ಜೊತೆಗೆ ₹31,125 ಲಾಭವನ್ನು ಪಡೆಯಲಿದ್ದೀರಿ.

advertisement

Leave A Reply

Your email address will not be published.