Karnataka Times
Trending Stories, Viral News, Gossips & Everything in Kannada

PMAY: 2025 ರೊಳಗೆ ಈ ಕೆಲಸ ಮಾಡಲಿದೆ ಭಾರತ ಸರ್ಕಾರ! ಬಾಡಿಗೆ ಮನೆಯಲ್ಲಿದ್ದವರಿಗೆ ಸಿಹಿಸುದ್ದಿ

advertisement

ಮನುಷ್ಯನ ಜೀವನದ ಆಸೆಯಲ್ಲಿ ವಾಸಿಸಲು ಯೋಗ್ಯವಾದ ಒಂದೊಳ್ಳೆ ಸುಸಜ್ಜಿತ ಮನೆ ಕಟ್ಟ ಬೇಕು ಎಂಬ ಆಸೆ ಇರುವುದನ್ನು ನಾವು ಕಾಣಬಹುದು. ಇತ್ತೀಚಿನ ದಿನದಲ್ಲಿ ಮನೆ ಕಟ್ಟುವುದು ಒಂದು ಸಾಹಸಮಯ ಕೆಲಸವೇ ಆಗಿದೆ. ಕಟ್ಟಡ ಸಾಮಾಗ್ರಿಗಳ ಬೆಲೆ ಅಧಿಕವಾಗುವ ಜೊತೆಗೆ ಮರಳು ಕೂಡ ಸುಲಭಕ್ಕೆ ಲಭ್ಯವಾಗುತ್ತಿಲ್ಲ. ಹಾಗಾಗಿ ಮನೆ ಕಟ್ಟಬೇಕೆಂಬ ಆಸೆ ಇದ್ದವರಿಗೆ ಕೇಂದ್ರ ಸರಕಾರದ ಈ ಯೋಜನೆ ಮೂಲಕ ಹಣಕಾಸಿನ ನೆರವು ಸಿಗಲಿದ್ದು, ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಯೋಜನೆಯ ಹೆಸರೇನು?

PMAY ಯೋಜನೆ ಅಂದರೆ ಪ್ರಧಾನ ಮಂತ್ರಿ ಆವಾಸ್ ಯೋಜನೆ (PM Awas Yojana) ಅಡಿಯಲ್ಲಿ ಲಕ್ಷಾಂತರ ಭಾರತೀಯರಿಗೆ ಮನೆಕಟ್ಟುವ ಕನಸ್ಸನ್ನು ನನಸ್ಸು ಗೊಳಿಸಬಹುದಾಗಿದೆ. ಭಾರತದ ಮೂಲ ಭೂತ ಸಮಸ್ಯೆ ಪರಿಗಣಿಸುವಾಗ ವಸತಿ ಸಮಸ್ಯೆ ಕೂಡ ಇರುವುದು ಮನದಟ್ಟಾಗಿದೆ ಹಾಗಾಗಿ ಮನೆ ಕಟ್ಟುವವರಿಗೆ ನೆರವಾಗಬೇಕೆಂಬ ಉದ್ದೇಶಕ್ಕೆ ಕೇಂದ್ರ ಸರಕಾರದ ಅವಧಿಯಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ.

 

Image Source: MagicBricks

 

ಗುರಿ ಹೊಂದಿದೆ:

advertisement

2025ರ ಒಳಗಾಗಿ 1 ಕೋಟಿ ಮನೆ ನಿರ್ಮಾಣದ ಗುರಿ ಹೊಂದಿರಲಾಗಿದ್ದು ಬಡತನದಿಂದ ಮನೆ ಕಟ್ಟಲು ಪರದಾಟ ಮಾಡುವವರಿಗೆ ಈ ಯೋಜನೆ (PM Awas Yojana) ಬಹಳ ಅನುಕೂಲಕರವಾಗಿದೆ. ಭಾರತದ ನಿವಾಸಿಗಳಾಗಿ ಪಟ್ಟಣ ಅಥವಾ ಗ್ರಾಮಾಂತರ ಭಾಗದಲ್ಲಿ ವಾಸ ಮಾಡುವವರಿಗೆ ಈ ಒಂದು ಸೌಲಭ್ಯ ಸಿಗಲಿದೆ. ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಈ ಯೋಜನೆ ಉಪಯುಕ್ತ ಆಗಿದ್ದು ಮನೆ ಕಟ್ಟುವವರಿಗೆ ಸಬ್ಸಿಡಿ ರೂಪದಲ್ಲಿ ಹಣವನ್ನು ನೀಡಲಾಗುವುದು. ಇದಕ್ಕಾಗಿ ಬಜೆಟ್ ನಲ್ಲಿ ಕೂಡ ಪ್ರತ್ಯೇಕ ಹಣ ಕಾಯ್ದಿರಿಸಲಾಗಿದೆ.

ಯಾರು ಅರ್ಹರು?

  • ಈ ಒಂದು ಯೋಜನೆಗೆ ಬಡವರ್ಗದವರು ಅರ್ಹರಾಗಿದ್ದಾರೆ.
  • ಕುಟುಂಬದ ವಾರ್ಷಿಕ ಆದಾಯ 6ಲಕ್ಷ ರೂಪಾಯಿಗಿಂತ ಕಡಿಮೆ ಯಾಗಿರಬೇಕು.
  • ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಈ ಯೋಜನೆ ಸಿಗಲಿದ್ದು ಬೇಕಾದ ಕಡಿಮೆ ಬಡ್ಡಿದರದ ಸಾಲ ಸೌಲಭ್ಯ ನೀಡಲಾಗುವುದು.
  • ಮನೆಯ ವಿಸ್ತೀರ್ಣ 30ಚದರ ಅಡಿಗಿಂತ ಅಧಿಕ ಇರಬಾರದು.
  • ಈ ಯೋಜನೆ ಅಡಿಯಲ್ಲಿ ಮಹಿಳೆಯ ಹೆಸರಲ್ಲಿ ಸಾಲ ಸೌಲಭ್ಯ ನೀಡಲಾಗುವುದು.
  • 6ಲಕ್ಷ ರೂಪಾಯಿ ಗರಿಷ್ಠ ಸಾಲ ಸಿಗಲಿದ್ದು ಅದರಲ್ಲಿ 2.67ಲಕ್ಷ ರೂಪಾಯಿ ಸಹಾಯಧನ ಸಿಗಲಿದೆ.
  • ಸಹಾಯಧನದ ಮೊತ್ತ ಮಹಿಳೆಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.
  • ಕಡಿಮೆ ಆದಾಯ ಹೊಂದಿರುವ ವರ್ಗದವರಿಗೆ ಕುಟುಂಬದ ವಾರ್ಷಿಕ ಆದಾಯ 6 ಲಕ್ಷದಿಂದ 12 ಲಕ್ಷದ ಒಳಗೆ ಇರಬೇಕು.ಮನೆ ವಿಸ್ತೀರ್ಣ 60 ಚದರ ಮೀಟರ್ ಗಿಂದ ಅಧಿಕ ಇರಬಾರದು. 9ಲಕ್ಷ ರೂಪಾಯಿ ಸಾಲ ಸಿಗಲಿದ್ದು 2.35ಲಕ್ಷದ ವರೆಗೆ ಸಹಾಯಧನ ಸಿಗಲಿದೆ.
  • ಮಧ್ಯಮ ವರ್ಗದ ಅಡಿಯಲ್ಲಿ ಕುಟುಂಬದ ವಾರ್ಷಿಕ ಆದಾಯವು 12-18ಲಕ್ಷದ ಒಳಗೆ ಇರಬೇಕು.ಮನೆ ವಿಸ್ತೀರ್ಣ 160ಚದರ ಮೀಟರ್ ಗಿಂತ ಅಧಿಕ ಇರಬಾರದು. ಗರಿಷ್ಠ 12 ಲಕ್ಷ ರೂಪಾಯಿ ವರೆಗೆ ಸಾಲ ಸಿಗಲಿದ್ದು 2.30 ಲಕ್ಷದ ತನಕ ಸಬ್ಸಿಡಿ ಸಿಗಲಿದೆ.

ಅರ್ಜಿ ಎಲ್ಲಿ ಸಲ್ಲಿಸುವುದು:

ಪ್ರಧಾನ ಮಂತ್ರಿ ಆವಾಸ್ ಯೋಜನೆ (PM Awas Yojana) ಗೆ ಅರ್ಜಿ ಸಲ್ಲಿಸುವವರು ಆನ್ ಲೈನ್ ಮೂಲಕವಾದರೆ https://pmaymis.gov.in/ ವೆಬ್‌ಸೈಟ್‌ ನಲ್ಲಿ ಭೇಟಿ ನೀಡಿ ಅರ್ಜಿ ಹಾಕಬಹುದು ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್ , ಕರ್ನಾಟಕ ಒನ್, ಗ್ರಾಹಕ ಸೇವಾ ಕೇಂದ್ರದ ಮೂಲಕ ಭೇಟಿ ನೀಡಿ ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಲೆ ಸಮೇತ ನೀಡಿದರೆ ನೀವು ಯೋಜನೆಯ ಫಲಾನುಭವಿಗಳಾಗಬಹುದು.

advertisement

Leave A Reply

Your email address will not be published.