Karnataka Times
Trending Stories, Viral News, Gossips & Everything in Kannada

Gruha Jyoti: ಉಚಿತ 200 ಯೂನಿಟ್ ವಿದ್ಯುತ್ ಪಡೆಯುತ್ತಿದ್ದವರಿಗೆ ಆಘಾತ, ಕೇಂದ್ರ ಇಂಧನ ಸಚಿವರ ಹೊಸ ಹೇಳಿಕೆ

advertisement

Gruha Jyoti Scheme Karnataka: ರಾಜ್ಯ ಸರಕಾರವು ಚುನಾವಣೆ ಪ್ರಣಾಳಿಕೆ ಯಲ್ಲಿ ಮಾತು ಕೊಟ್ಟಂತೆ ಐದು ಗ್ಯಾರಂಟಿ ಯೋಜನೆಗಳನ್ನು‌ ಜಾರಿ ಗೊಳಿಸುವ ಮೂಲಕ ಸೌಲಭ್ಯ ‌ಗಳ ವಿತರಣೆ ಜನತೆಗೆ ‌ಮಾಡುತ್ತಿದೆ.‌ಅದರಲ್ಲಿ ಮುಖ್ಯವಾಗಿ ಗೃಹಜ್ಯೋತಿ ಯೋಜನೆಯು ಒಂದಾಗಿದ್ದು ಉಚಿತ ವಿದ್ಯುತ್ ಅನ್ನು ಪ್ರತಿಯೊಂದು ‌ಮನೆಯು ಪಡೆಯುತ್ತಿದೆ. ಆದ್ರೆ ವಿದ್ಯುತ್ ‌ಕೊರತೆ ಈ ಬೇಸಿಗೆಯಲ್ಲಿ ಬಹಳಷ್ಟು ಉಂಟಾಗಿದೆ. ನೀರಿಲ್ಲದೆ ಬಹಳಷ್ಟು ‌ಜನರು ತೊಂದರೆ ಅನುಭವಿಸಿದ್ದಾರೆ. ಈಗ ಗೃಹಜ್ಯೋತಿ ‌ಯೋಜನೆಯ ಮೂಲಕ ಜನರು ಬೇಕಾಬಿಟ್ಟಿ ಯಾಗಿ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ.‌ ಸರಕಾರ ಇಷ್ಟೆಲ್ಲ ಯೋಜನೆ ಜಾರಿ ಮಾಡಿ ಮುಂದೆ ಸರಕಾರ ಕಷ್ಟಕ್ಕೆ ಬೇಳಲಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ಉಚಿತ ವಿದ್ಯುತ್(free electricity for up to 200 units)
ಗೃಹಜ್ಯೋತಿ ಯೋಜನೆಯಡಿ ಜನತೆಗೆ 200 ಯುನಿಟ್‌ವರೆಗೂ ಉಚಿತ ವಿದ್ಯುತ್‌ ಅನ್ನು ನೀಡಲಾಗುತ್ತಿದೆ. ಮನೆಯ ವಾರ್ಷಿಕ ವಿದ್ಯುತ್‌ ಬಳಕೆಯ ಆಧಾರದ ಮೇಲೆ ಶೇ. 10 ರಷ್ಟು ಹೆಚ್ಚುವರಿ ಸೇರಿ 200 ಯುನಿಟ್‌ವರೆಗೂ ವಿದ್ಯುತ್‌ ಉಚಿತ ನೀಡಲಾಗುತ್ತಿದ್ದು ಇದರ ಬಳಕೆ ಹೆಚ್ಚಾದರೆ ಹೆಚ್ಚುವರಿ ವಿದ್ಯುತ್ ಬಿಲ್ ಪಾವತಿ ಮಾಡಬೇಕಾಗುತ್ತದೆ.

Electricity energy savings examples Electricity energy savings essay 10 ways to save electricity at home what are 10 ways to save energy 7 ways to save electricity 100 ways to save electricity 5 ways to conserve energy examples of energy conservation
Image Source: Deccan Herald

advertisement

ಸಾಲದ ಸುಳಿಗೆ ಸಿಲುಕಲಿವೆ
ಇದೀಗ ಗೃಹಜ್ಯೋತಿ ಯೋಜನೆಯ ಬಗ್ಗೆ ಕೇಂದ್ರ ಸರಕಾರವು ಹೇಳಿಕೆಯೊಂದನ್ನು ನೀಡಿದ್ದು ಸಾಲ ಮಾಡಿ ಉಚಿತ ವಿದ್ಯುತ್‌ ನೀಡುವ ರಾಜ್ಯಗಳು ಸಾಲದ ಸುಳಿಗೆ ಸಿಲುಕಲಿವೆ ಎಂದು ತಿಳಿಸಿದೆ.ರಾಜ್ಯ ಸರ್ಕಾರ ಬೇಕಾಬಿಟ್ಟಿಯಾಗಿ ಯೋಜನೆಗಳನ್ನು ಜಾರಿಗೊಳಿಸಿದೆ.ರಾಜ್ಯ ಸರಕಾರದ ಬಳಿಯೇ ಸಾಕಷ್ಟು ಹಣವಿದ್ದರೆ ಹೀಗೆ ಯೋಜನೆಗಳನ್ನು ಜಾರಿ ಗೊಳಿಸದರೆ ಅರ್ಥ ಇದೆ ಆದರೆ, ಸಾಲ ಮಾಡಿ ಇಂತಹ ಯೋಜನೆ ಜಾರಿ ಮಾಡಿದರೆ ಮುಂದಿನ ದಿನದಲ್ಲಿ ಕಷ್ಟ ವಾಗಬಹುದು.ಇಂದು ಉಚಿತ ವಿದ್ಯುತ್ ನೀಡಿದರೆ ಮುಂದಕ್ಕೆ ಸರ್ಕಾರಗಳು ಬೆಲೆ ತೆರಬೇಕಾಗುತ್ತದೆ.

ಕೇಂದ್ರ ಇಂಧನ ಸಚಿವರ ಹೇಳಿಕೆ
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಕೇಂದ್ರ ಇಂಧನ ಸಚಿವ ಆ‌ರ್.ಕೆ. ಸಿಂಗ್ (RK Singh) ಮಾಹಿತಿ ನೀಡಿದ್ದಾರೆ.ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಸರ್ಕಾರವು ಪ್ರತಿ ಮನೆಗೆ 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಸೇರಿದಂತೆ ಹಲವಾರು ಸೌಲಭ್ಯ ಗಳನ್ನು ಜನತೆಗೆ ನೀಡುತ್ತಿದೆ. ಇದರಿಂದ ಪಂಜಾಬ್‌ನ ಎಎಪಿ ಸರ್ಕಾರದ ಈಗಾಗಲೇ 2 ವರ್ಷಗಳಲ್ಲಿ 47,000 ಕೋಟಿ ರೂಪಾಯಿಗಳಷ್ಟು ಸಾಲ ಕೂಡ ಮಾಡಿದೆ.ಸಾಲ ಮಾಡಿ ಉಚಿತ ವಿದ್ಯುತ್‌ ನೀಡಿದರೆ ಸಾಲದ ಸುಳಿಯಲ್ಲಿ ರಾಜ್ಯ ಸರಕಾರ ಸಿಲುಕಬೇಕಾಗುತ್ತದೆ ಎಂದು ಹೇಳಿದ್ದಾರೆ.ಸಾಲದ ಸುಳಿಗೆ ರಾಜ್ಯವನ್ನು ಯಾವತ್ತಿಗೂ ಸಿಲುಕಿಸಬಾರದು. ಉಚಿತ ಯೋಜನೆಯಿಂದಲೇ ಅನೇಕ ರಾಜ್ಯ ಸರ್ಕಾರಗಳು ಸಾಲದ ಸುಳಿಯಲ್ಲಿ ಸಿಲುಕುತ್ತಿವೆ ಎಂದರು.

Image Source: Hindustan Times

advertisement

Leave A Reply

Your email address will not be published.