Karnataka Times
Trending Stories, Viral News, Gossips & Everything in Kannada

CM Siddaramaiah: ಕರ್ನಾಟಕದಲ್ಲಿ 60 ವರ್ಷ ದಾಟಿದ ಎಲ್ಲರೂ ಈ ಕಾರ್ಡ್ ಮಾಡಿಸಿಕೊಳ್ಳಿ! ಸಿದ್ದರಾಮಯ್ಯ ಆದೇಶ, ಇಲ್ಲಿದೆ ಬೆನಿಫಿಟ್ಸ್

advertisement

ಹಿರಿಯನಾಗರಿಕರಿಗೆ ಅನುಕೂಲ ಆಗಲಿ ಎಂಬ ನಿಟ್ಟಿನಲ್ಲಿ ಅರವತ್ತು ವರ್ಷ ಆದ ಬಳಿಕ ಉಪಯುಕ್ತ ಆಗಲಿ ಎಂದು ಅನೇಕ ಯೋಜನೆ ಜಾರಿಗೆ ತರಲಾಗುತ್ತಿದೆ ಅಂತಹ ಯೋಜನೆಯ ಸದುಪಯೋಗ ಹಿರಿಯ ನಾಗರಿಕರಿಗೆ ಸಿಗಬೇಕು ಎಂಬ ಹಿನ್ನೆಲೆಯಲ್ಲಿ ಹಿರಿಯನಾಗರಿಕರ ಗುರುತು ಚೀಟಿಯನ್ನು ನೀಡಲಾಗುತ್ತಿದೆ. ಅನೇಕರಿಗೆ ಈ ಗುರುತು ಚೀಟಿ (Identity Card) ಯಾಕಾಗಿ ನೀಡ್ತಾರೆ?, ಅದರ ಪ್ರಯೋಜನ ಏನು?, ಅದನ್ನು ಪಡೆಯುವುದು ಹೇಗೆ? ಎಂಬ ಅರಿವಿರಲಾರದು ಈ ನಿಟ್ಟಿನಲ್ಲಿ ಈ ಮಾಹಿತಿ ನಿಮಗೆ ಬಹಳ ಸಹಕಾರಿ ಆಗಲಿದೆ.

ಹಿರಿಯ ನಾಗರಿಕರ ಗುರುತು ಚೀಟಿ ಎಂದರೇನು?

ಹಿರಿಯ ನಾಗರಿಕರು ಗುರುತು ಚೀಟಿ (Identity Card) ಪಡೆಯುವುದರಿಂದ ಅನೇಕ ಸರಕಾರಿ ಪ್ರಯೋಜನೆಯನ್ನು ಪಡೆಯಬಹುದು. ನೀವು ಗುರುತು ಪರಿಚಯ ಇಲ್ಲದ ಸ್ಥಳಕ್ಕೆ ಹೋಗಿ ತೊಂದರೆ ಅಥವಾ ಅಪಘಾತ ಆದರೆ ಆಗ ಈ ಚೀಟಿ ಸಹಕಾರ ನೀಡಲಿದೆ. ಅದೇ ತರ ಸರಕಾರದ ಪೆನ್ಶನ್, ರಿಯಾಯಿತಿ ಹಾಗೂ ಉಚಿತ ದರದ ವಿಮಾನ ರೈಲ್ವೇ ಹಾಗೂ ಬಸ್ ನ ಪ್ರಯಾಣಕ್ಕೆ ಕೂಡ ಈ ಗುರುತು ಚೀಟಿ (Identity Card) ಬಳಕೆಗೆ ಬರಲಿದೆ. ಕೇಂದ್ರ ಮತ್ತು ರಾಜ್ಯ ಸರಕಾರದಿಂದ ನೀಡಲಾಗುವ ಸೌಲಭ್ಯ ಪಡೆಯಲು ಕೂಡ ಈ ಒಂದು ಯೋಜನೆ ಉಪಯುಕ್ತ ಆಗಲಿದೆ.

ಯಾರು ಈ ಚೀಟಿ ವಿತರಿಸುತ್ತಾರೆ?

 

Image Source: Micoope

 

ಈ ವಿಶೇಷ ಗುರುತಿನ ಚೀಟಿ (Identity Card) ಅಥವಾ ಹಿರಿಯ ನಾಗರಿಕರ ಗುರುತಿನ ಚೀಟಿಯನ್ನು ಸರಕಾರದ ವತಿಯಿಂದ ನೀಡಲಾಗುತ್ತದೆ‌. ಅದನ್ನು ಸರಕಾರದಿಂದ ಆದೇಶ ಬಂದು ಆ ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ವಿಶೇಷ ಚೇತನರ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಈ ಒಂದು ಹಿರಿಯ ನಾಗರಿಕರ ಗುರುತು ಚೀಟಿಯನ್ನು ನೀಡಲಾಗುತ್ತದೆ.

advertisement

ಈ ಗುರುತಿನ ಚೀಟಿ ಅಗತ್ಯ:

  • ಆಧಾರ್ ಕಾರ್ಡ್ ಹೊಂದಿರಬೇಕು.
  • ಆಧಾರ್ ಕಾರ್ಡ್ ಲಿಂಕ್ ಹೊಂದಿರುವ ಮೊಬೈಲ್ ಸಂಖ್ಯೆ ಅಗತ್ಯ.
  • ಮನೆ ದೂರವಾಣಿ ಸಂಖ್ಯೆ.
  • ತುರ್ತು ಸಂದರ್ಭದಲ್ಲಿ ಸಂಪರ್ಕ ಸಂಖ್ಯೆ.
  • ಜನನ ದೃಢೀಕರಣ ಪತ್ರ ಇರಬೇಕು.
  • 2ಭಾವಚಿತ್ರ ಹೊಂದಿರಬೇಕು.
  • ರಕ್ತದ ಗುಂಪು ಹಾಗೂ ಇತರ ವೈಯಕ್ತಿಕ ವಿವರಣೆ ಜೊತೆಗೆ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಹಾಕಬಹುದು.

ಹೇಗೆ ಅರ್ಜಿ ಹಾಕುವುದು?

ಮೊದಲಿಗೆ ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಬೇಕು. https://sevasindhu.Karnataka.gov.in ಗೆ ಭೇಟಿ ನೀಡಿ.ಬಳಿಕ ಅದರಲ್ಲಿ ಆಧಾರ್ ಕಾರ್ಡ್ (Aadhaar Card) ನಂಬರ್ ಕೇಳಲಿದೆ ಅದಕ್ಕೆ ಲಿಂಕ್ ಇರುವ ನಂಬರ್ ಗೆ OTP ಬರಲಿದೆ. ರಕ್ತದ ರಿಪೋರ್ಟ್, Male or Female ಎಂಬ ಆಯ್ಕೆ ಬರಲಿದ್ದು ಎಲ್ಲ ಫಿಲಪ್ ಮಾಡಿ Allow ನೀಡಿ.

ಬಳಿಕ Candidate ಮೊಬೈಲ್ ನಂಬರ್ ಹಾಕಿ Password Create ಮಾಡಿಕೊಳ್ಳಬೇಕು. ಬಳಿಕ ರಿ ಸೆಂಡ್ OTP ಎಂದು ಬರಲಿದ್ದು ಅದರಲ್ಲಿ OTP ಹಾಕಿದರೆ ರಿಜಿಸ್ಟ್ರೇಶನ್ ಆಗಲಿದೆ. ಇದೆಲ್ಲ ಆದ ಬಳಿಕ ಸೇವಾ ಸಿಂಧುವಿನಲ್ಲಿ ಲಾಗಿನ್ ಗೆ ಹೋಗಿ ಪಾಸ್ ವರ್ಡ್ ಹಾಕಬೇಕು. ಆಗ Application For ಸೀನಿಯರ್ ಸಿಟಿಜನ್ ಎಂದು ಬರಲಿದೆ.

ಆ ಅರ್ಜಿ ಫಾರ್ಮಿನಲ್ಲಿ ವಿಳಾಸ, ದಾಖಲಾತಿ ಮೊಬೈಲ್ ಸಂಖ್ಯೆ ಎಲ್ಲ ಫಿಲಪ್ ಮಾಡಬೇಕು. ಅರ್ಜಿದಾರರ ಹೆಸರು, ವಿಳಾಸ, ವಯಸ್ಸು, ರಕ್ತದ ಗುಂಪು ಎಲ್ಲ ವಿವರವಾಗಿ ಸರಿಯಾಗಿ ಕ್ಲಿಕ್ ಮಾಡಿರಿ. ನಿಮ್ಮ ಎಲ್ಲ ದಾಖಲಾತಿ ಅಪ್ಲೋಡ್ ಮಾಡಬೇಕು. E sign ಹಾಗೂ OTP ಎಂದು ಬರಲಿದೆ. ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ಸಂಖ್ಯೆಗೆ ಮತ್ತೊಮ್ಮೆ OTP ಬರಲಿದೆ Verify OTP ಬರಲಿದೆ. ಹೀಗೆ ನೀವು 2 ರಿಂದ ಮೂರು ವಾರಕ್ಕೆ ಗುರುತು ಚೀಟಿ ಸಿಗಲಿದೆ.

advertisement

Leave A Reply

Your email address will not be published.