Karnataka Times
Trending Stories, Viral News, Gossips & Everything in Kannada

India’s Longest Train: 295 ಕೋಚ್ ಗಳನ್ನು ಹೊಂದಿರುವ ಭಾರತದ ಅತಿ ಉದ್ದದ ಈ ರೈಲು! ಯಾವ ಮಾರ್ಗದಲ್ಲಿ ಗೊತ್ತಾ?

advertisement

ರೈಲು ಪ್ರಯಾಣವು ಜನರಿಗೆ ವಿಶೇಷವಾದ ಅನುಭವ ನೀಡುತ್ತದೆ. ಅದರಲ್ಲಿ ಪ್ರಯಾಣಿಸುವ ಮೂಲಕ ಜನರು ವಿಭಿನ್ನ ರೀತಿಯ ಅನುಭವವನ್ನು ಪಡೆಯುತ್ತಾರೆ. ಇದೊಂದು ಕೈಗೆಟುಕುವ ಸಾರಿಗೆ ಮಾತ್ರವಲ್ಲ ಬದಲಾಗಿ ಆರಾಮದಾಯಕವು ಹೌದು. ವಾಸ್ತವವಾಗಿ, ಜನರು ರೈಲು ಪ್ರಯಾಣವನ್ನು ತುಂಬಾ ಆನಂದಿಸುತ್ತಾರೆ. ಭಾರತದಲ್ಲಿರುವ ಮದ್ಯಮ ವರ್ಗದ ಜನರಿಗೆ ಇದು ಉತ್ತಮ ಸಂಪರ್ಕ ಕಲ್ಪಿಸುವ ಸಾಧನವಾಗಿದೆ.

ಇನ್ನು ಭಾರತೀಯ ರೈಲ್ವೆ ವಿಶ್ವದ ಎರಡನೇ ಅತಿ ದೊಡ್ಡ ರೈಲು ಜಾಲವಾಗಿದೆ. ಹಾಗಾಗಿ ಭಾರತದಲ್ಲಿ ಇದನ್ನು ಲೈಫ್ ಲೈನ್ ಎಂದು ಕೂಡ ಕರೆಯುತ್ತಾರೆ. ವ್ಯಾಪಾರ, ಶಿಕ್ಷಣ, ಆರ್ಥಿಕತೆಯ ರೈಲ್ವೆಗಳನ್ನು ಕೂಡ ಆಧರಿಸಿದೆ. ಸಾಮನ್ಯವಾಗಿ ಒಂದು ಇಂಜಿನ್ ಇಲ್ಲವೇ 2 ಇಂಜಿನ್ ಗಳು ಎಲ್ಲ ಭೋಗಿಗಳ ಭಾರವನ್ನು ನಿಭಾಯಿಸುವುದನ್ನು ನಾವು ನೋಡುತ್ತೇವೆ. ಆದರೆ ನಾವಿಂದು ಭಾರತದ ಅತಿ ಉದ್ದದ (India’s Longest Train) ಅಂದರೆ 6 ಇಂಜಿನ್ ಹಾಗೂ 295 ಕೋಚ್ ಹೊಂದಿರುವ ಸೂಪರ್‌ ವಾಸುಕಿ ರೈಲಿನ (Super Vasuki Train) ವಿಶೇಷತೆ ತಿಳಿಯೋಣ.

ಭಾರತದ ಅತಿ ಉದ್ದದ ರೈಲು:

 

Image Source: Adda247

 

ಸೂಪರ್ ವಾಸುಕಿ (Super Vasuki) ಇದು ಭಾರತದ ಅತಿ ಉದ್ದದ (India’s Longest Train) (3.5 ಕಿಮೀ) ಮತ್ತು ಭಾರವಾದ ಸರಕು ಸಾಗಣೆ ಮಾಡುವ ರೈಲ್ ಆಗಿದೆ. 15 ಆಗಸ್ಟ್ 2022ರಂದು ಭಾರತೀಯ ರೈಲ್ವೆ ಇಲಾಖೆ ಪ್ರಾರಂಭಿಸಿದೆ. ಅಂದರೆ 75 ನೆಯ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಪ್ರಾರಂಭಿಸಲಾಗಿದೆ. 295 ಲೋಡ್ ವ್ಯಾಗನ್‌ಗಳು 27,000 ಟನ್ ಕಲ್ಲಿದ್ದಲನ್ನು ಛತ್ತೀಸ್‌ಗಢದ ಕೊರ್ಬಾ ಮತ್ತು ನಾಗಪುರದ ರಾಜನಂದಗಾವೊ ನಡುವೆ ಸಾಗಿಸಿತು. ಇದು 6 ಲೊಕೊಗಳ ಎಂಜಿನ್ ಸಾಮರ್ಥ್ಯ ಹೊಂದಿದೆ. 5 ರೇಕ್‌ಗಳ ಗೂಡ್ಸ್ ರೈಲುಗಳನ್ನು ಒಂದು ಘಟಕವಾಗಿ ಸಂಯೋಜಿಸಿ ರೈಲನ್ನು ರಚಿಸಲಾಗಿದೆ. ಭಾರತೀಯ ರೈಲ್ವೆ ಇಲಾಖೆ ಪ್ರಕಾರ, ಇದುವರೆಗೆ ಓಡಿದ ಅತ್ಯಂತ ಉದ್ದವಾದ ಮತ್ತು ಭಾರವಾದ ಸರಕು ಸಾಗಣೆ ರೈಲು ಇದಾಗಿದೆ.

advertisement

3.5 ಕಿಮೀ ಉದ್ದ:

 

Image Source: NTV

 

3.5 ಕಿಮೀ ಉದ್ದದ ಸೂಪರ್ ವಾಸುಕಿ (Super Vasuki) 295 ಲೋಡ್ ವ್ಯಾಗನ್‌ಗಳೊಂದಿಗೆ ಮತ್ತು ಇದು 6 ಲೊಕೊಗಳ ಎಂಜಿನ್ ಸಾಮರ್ಥ್ಯ ಹೊಂದಿದೆ. ಈ ಕೋಚ್ ಗಳನ್ನು ಎಣಿಸುತ್ತಾ ಕಾಲ್ನಡಿಗೆಯಲ್ಲಿ ಹೊರಟರೆ ಒಂದು ಗಂಟೆಗಳ ಕಾಲ ಸಮಯ ಕಳೆಯುತ್ತದೆ.ಆದರೆ ಈ ರೈಲು ಸುಮಾರು 27,000 ಟನ್ ಕಲ್ಲಿದ್ದಲನ್ನು ಒಂದೇ ಬಾರಿಗೆ ಹೊತ್ತೊಯ್ಯುತ್ತದೆ .ಇದು ಭಾರತೀಯ ರೈಲ್ವೇ ಒಂದೇ ರೈಲು ವ್ಯವಸ್ಥೆಯಲ್ಲಿ ಸಾಗಿಸಿದ ಅತ್ಯಧಿಕ ಇಂಧನ ಸಾಗಣೆಯಾಗಿದೆ. ರೈಲ್ವೆ ಇಲಾಖೆಯು ಮುಂಬರುವ ದಿನಗಳಲ್ಲಿ ಈ ರೀತಿಯ ರೈಲುಗಳನ್ನು ಹೆಚ್ಚಾಗಿ ಬಳಸಲು ಯೋಜಿಸಿದೆ.

ಮೂರು ಪಟ್ಟು ಹೆಚ್ಚು ಸಾಮರ್ಥ್ಯ:

ವಿಶೇಷವಾಗಿ ವಿದ್ಯುತ್ ಕೇಂದ್ರಗಳ ಇಂಧನ ಕೊರತೆಯನ್ನು ತಡೆಗಟ್ಟಲು ಗರಿಷ್ಠ ಬೇಡಿಕೆಯ ಋತುವಿನಲ್ಲಿ ಕಲ್ಲಿದ್ದಲು ಸಾಗಿಸಲು ಈ ರೈಲು ಬಳಕೆಗೆ ನಿರ್ಧರಿಸಲಾಗಿದೆ.ಇನ್ನು ವರದಿಗಳ ಪ್ರಕಾರ, ಈ ರೈಲಿನಲ್ಲಿ ಸಾಗಿಸುವ ಒಟ್ಟು ಕಲ್ಲಿದ್ದಲು ಒಂದು ಪೂರ್ಣ ದಿನಕ್ಕೆ 3000 ಮೆಗಾವ್ಯಾಟ್ ವಿದ್ಯುತ್ ಸ್ಥಾವರವನ್ನು ಉರಿಸಲು ಬಳಸಲಾಗುತ್ತದೆ. ಇದು ಒಂದು ಪ್ರಯಾಣದಲ್ಲಿ ಸುಮಾರು 9,000 ಟನ್ ಕಲ್ಲಿದ್ದಲನ್ನು ಸಾಗಿಸುವ ಅಸ್ತಿತ್ವದಲ್ಲಿರುವ ರೈಲ್ವೆಯ ಸಾಮರ್ಥ್ಯಕ್ಕಿಂತ ಮೂರು ಪಟ್ಟು ಹೆಚ್ಚು ಸಾಮರ್ಥ್ಯ ಹೊಂದಿದೆ.

advertisement

Leave A Reply

Your email address will not be published.