Karnataka Times
Trending Stories, Viral News, Gossips & Everything in Kannada

Gruha Lakshmi: ಎಲ್ಲಾ ತಿಂಗಳ ಗೃಹಲಕ್ಹ್ಮಿ ಹಣ ಬೇಕಿದ್ದವರು ಕೂಡಲೇ ಈ ಕೆಲಸ ಮಾಡಿ, ಲಕ್ಹ್ಮೀ ಹೆಬ್ಬಾಳ್ಕರ್ ಹೇಳಿಕೆ

advertisement

ಮಹಿಳೆಯರ ಅಭಿವೃದ್ಧಿಗಾಗಿ ಸರಕಾರವು ಹಲವು ರೀತಿಯ ಸೌಲಭ್ಯ ಗಳನ್ನು ಘೋಷಣೆ ಮಾಡುತ್ತಿದೆ. ಇಂದು ಮಹಿಳೆಯರು ಕೂಡ ಶಿಕ್ಷಣ ವಂತರಾಗಿ ಉತ್ತಮ‌, ಪ್ರತಿಷ್ಠಿತ ಕಂಪನಿಯ ಸಂಸ್ಥೆ ಗಳಲ್ಲಿ ಉದ್ಯೋಗ ವನ್ನು ಗಿಟ್ಟಿಸಿಕೊಳ್ತಾ ಇದ್ದಾರೆ. ಉತ್ತಮ ವೇತನದ ಜೊತೆಗೆ ಮನೆಯ ಜವಾಬ್ದಾರಿ ಯನ್ನು ಕೂಡ ನಿಭಾಯಿಸುವ ಸಾಮರ್ಥ್ಯ ಮಹಿಳೆಯರಿಗೆ ಇದೆ. ಅದೇ ರೀತಿ ಬಡ ವರ್ಗದ ಮಹಿಳೆಯರನ್ನು ಆರ್ಥಿಕ ವಾಗಿ ಸಬಲ ಮಾಡಬೇಕು. ಅವರಿಗೂ ತಮಗೆ ಬೇಕಾದ ಮೂಲಭೂತ ವಸ್ತುಗಳನ್ನು ಖರೀದಿ ಮಾಡುವಂತೆ ಆಗಬೇಕು ಎಂದು ಈ ಭಾರಿ ರಾಜ್ಯ ಸರಕಾರವು ಮಹಿಳಾ ಪರವಾದ ಯೋಜನೆಗಳಾದ ಶಕ್ತಿ ಯೋಜನೆ ಮತ್ತು ಗೃಹಲಕ್ಷ್ಮಿ (Gruha Lakshmi) ಯೋಜನೆಯನ್ನು ಜಾರಿಗೆ ತಂದಿದೆ.

ಗೃಹಲಕ್ಷ್ಮಿ (Gruha Lakshmi) ಹಣ ಖಾತೆಗೆ ಜಮೆ

ಈ ಯೋಜನೆಯ ಅಡಿಯಲ್ಲಿ ರಾಜ್ಯದ ಎಲ್ಲಾ ಬಡ ವರ್ಗದ ಮಹಿಳೆಗೆ, ರೇಷನ್ ಕಾರ್ಡ್ (Ration Card) ನಲ್ಲಿ ಯಜಮಾನಿ, ಮುಖ್ಯ ಮಹಿಳೆ ಎಂದು ನಮೂದಾಗಿದ್ದ ಮಹಿಳೆಯ ಖಾತೆಗೆ ಪ್ರತಿ ತಿಂಗಳು 2000 ರೂ ಗಳನ್ನು ನೀಡುವ ಮೂಲಕ ಮಹಿಳೆಯರಿಗೆ ಆರ್ಥಿಕ ನೆರವನ್ನು ನೀಡುತ್ತಿದೆ. ಈಗಾಗಲೇ ಆರು ಕಂತಿನ ವರೆಗೆ ಮಹಿಳೆಯರಿಗೆ ಹಣ ಬಿಡುಗಡೆಯಾಗಿದ್ದು ಮಾರ್ಚ್ ತಿಂಗಳ ಏಳನೇ ಕಂತಿನ ಹಣ ಕೆಲವು ಮಹಿಳೆಯರಿಗಷ್ಟೆ ಜಮೆಯಾಗಿದ್ದು ಹಂತ ಹಂತವಾಗಿ ಆಯಾ ಜಿಲ್ಲೆಗೆ ಹಣ ಬಿಡುಗಡೆ ಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಮಾಹಿತಿ ನೀಡಿದ್ದಾರೆ.

Image Source: 123RF

advertisement

ಹಣ ಬೇಕಿದ್ದವರು ಈ ಕೆಲಸ ಮಾಡಿ

ಗೃಹಲಕ್ಷ್ಮಿ ಯೋಜನೆಗೆ ನೊಂದಣಿ ಮಾಡಿದ್ರು ಹಣ ಜಮೆಯಾಗಿಲ್ಲ‌, ಒಂದು ಕಂತಿನ ಹಣವೂ ಬಂದಿಲ್ಲ ಎಂದಾದರೆ ಮೊದಲಿಗೆ ನೀವು ನಿಮ್ಮ‌ಆಧಾರ್ ಕಾರ್ಡ್ (Aadhaar Card), ರೇಷನ್ ಕಾರ್ಡ್ (Ration Card), ಬ್ಯಾಂಕ್ ಪುಸ್ತಕ ಇತ್ಯಾದಿ ದಾಖಲೆಗಳನ್ನು ಚೆಕ್ ಮಾಡಿಕೊಳ್ಳಿ. ನಿಮ್ಮ ಆಧಾರ್ ಸೀಡಿಂಗ್ ಆಗಿಲ್ಲ ಮತ್ತು ಬ್ಯಾಂಕ್ ಖಾತೆ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿಲ್ಲ ರೇಷನ್ ಕಾರ್ಡ್ ನಲ್ಲಿ ಇಕೆವೈ ಸಿ, ಎನ್.ಪಿ.ಸಿ.ಐ ಮ್ಯಾಪಿಂಗ್ (NPCI Mapping) ಬಾಕಿ ಇದೆ ಎಂದಾದರೆ ಖಂಡಿತ ನಿಮಗೆ ಈ ಗೃಹಲಕ್ಷ್ಮಿ ಹಣ ಜಮೆಯಾಗುವುದಿಲ್ಲ. ಹಾಗಾಗಿ ಈ ಕೆಲಸ ಮೊದಲು ಮಾಡಿ.

Image Source: TV9 Kannada

ಮತ್ತೆ ಅರ್ಜಿ ಸಲ್ಲಿಸಿ

ಒಂದು ವೇಳೆ ನಿಮ್ಮ ದಾಖಲೆಗಳು ಸರಿ ಇಲ್ಲದೆ ಹಣ ಬಂದಿಲ್ಲ ಎಂದಾದರೆ ಮತ್ತೆ ಹೊಸದಾಗಿ ಗೃಹಲಕ್ಷ್ಮಿ (Gruha Lakshmi) ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಪೋಸ್ಟ್ ಆಫೀಸ್ ನಲ್ಲಿ ಹೊಸದಾಗಿ ಬ್ಯಾಂಕ್ ಖಾತೆಯನ್ನು ತೆರೆಯುವ ಮೂಲಕ ಮತ್ತೆ ಈ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

advertisement

Leave A Reply

Your email address will not be published.