Karnataka Times
Trending Stories, Viral News, Gossips & Everything in Kannada

OnePlus: ಮಾರುಕಟ್ಟೆಗೆ ಬಂತು ಒನ್ ಪ್ಲಸ್ ಕಂಪನಿಯ ಬೆಂಕಿ ಫೋನ್! DSLR ರೀತಿಯ ಕ್ಯಾಮರಾ ಕಡಿಮೆ ಬೆಲೆಗೆ

advertisement

OnePlus ಕಂಪನಿಯ ಹೊಸ ಫೋನ್ ಆಗಿರುವ OnePlus Ace 3V ಇಂದು ಚೈನಾದಲ್ಲಿ ಲಾಂಚ್ ಆಗೋದಕ್ಕೆ ಹೊರಟಿದೆ. ಇವತ್ತಿನ ಈ ಲೇಖನದಲ್ಲಿ ಈ ಫೋನಿನಲ್ಲಿ ಏನೆಲ್ಲಾ ಇದೆ ಅನ್ನೋದನ್ನ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ. Android 14 ಆಪರೇಟಿಂಗ್ ಸಿಸ್ಟಮ್ ಜೊತೆಗೆ ಬರುವಂತಹ ಈ ಫೋನ್ 1.5k ರೆಸೊಲ್ಯೂಷನ್ ಇರುವಂತಹ OLED ಸ್ಕ್ರೀನ್ ಜೊತೆಗೆ ಸಿಗಲಿದೆ. ಈ ಫೋನ್ ಬೆಸ್ಟ್ ಹಾಗೂ ಪವರ್ ರೆಸಿಸ್ಟಂಟ್ ಆಗಿದೆ. ಈಗಾಗಲೇ ಈ ಸ್ಮಾರ್ಟ್ ಫೋನ್ ಮಾರ್ಚ್ 21ರಂದು ಚೈನಾದಲ್ಲಿ ಅಧಿಕೃತವಾಗಿ ಲಾಂಚ್ ಆಗಿದೆ.

OnePlus Ace 3V Storage:

 

Image Source: Gadgets 360

 

advertisement

OnePlus Ace 3V ಸ್ಮಾರ್ಟ್ ಫೋನ್ ನಿಮಗೆ ಎರಡು ಸ್ಟೋರೇಜ್ ವೇರಿಯಂಟ್ ನಲ್ಲಿ ಸಿಗಲಿದೆ. 12GB RAM 256GB ಸ್ಟೋರೇಜ್ ಹಾಗೂ 12GB RAM 512GB ಸ್ಟೋರೇಜ್ ವೇರಿಯಂಟ್ ನಲ್ಲಿ. ಮೊದಲ ವೇರಿಯಂಟ್ ಬೆಲೆ ಸರಿ ಸುಮಾರು 26,800 ಆಗಿದ್ದು, ಎರಡನೇ ವೇರಿಯಂಟ್ ಬೆಲೆ 33800 ಆಗಿರಲಿದೆ ಅನ್ನೋದಾಗಿ ಅಂದಾಜು ಹಾಕಬಹುದು. ಕಂಪನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ. 2160Hz PWM ಡಿಮಿಂಗ್ ಇದರಲ್ಲಿ ಇರಲಿದ್ದು, ಈ ಮೂಲಕ ಈ ಮೊಬೈಲ್ನಲ್ಲಿ ಕಂಟೆಂಟ್ ಗಳನ್ನು ನೋಡೋದು ಇನ್ನಷ್ಟು ಸುಲಭವಾಗಲಿದೆ ಹಾಗೂ ಕ್ಲಿಯರ್ ಆಗಿರಲಿದೆ. ಅಂದರೆ ಈ ಮೊಬೈಲ್ನಲ್ಲಿ ಯಾವುದೇ ಕಂಟೆಂಟ್ ನೋಡೊದ್ರಿಂದ ನಿಮಗೆ ಕಣ್ಣಿನ ಸಮಸ್ಯೆ ಆಗುವುದಿಲ್ಲ ಎಂದು ಹೇಳಬಹುದಾಗಿದೆ. ಸಂಸ್ಥೆ ತನ್ನ ಗ್ರಾಹಕರ ಹಿತ ದೃಷ್ಟಿಯಿಂದ ಈ ಫೀಚರ್ ಅನ್ನು ಜಾರಿಗೆ ತಂದಿದೆ.

OnePlus Ace 3V Specification:

 

Image Source: GSMArena.com

 

  • OnePlus Ace 3V ಸ್ಮಾರ್ಟ್ಫೋನ್ನಲ್ಲಿ ಇರುವಂತಹ ಪ್ರೊಸೆಸರ್ ವಿಚಾರಕ್ಕೆ ಬರೋದಾದ್ರೆ Qualcomm Snapdragon 7+ Gen 3 Chipset ಅನ್ನು ನಾವು ನೋಡಬಹುದಾಗಿದೆ, 16GB ವರೆಗೂ ಕೂಡ ನೀವು ನಿಮ್ಮ RAM ಅನ್ನು ಎಕ್ಸ್ಪ್ಯಾಂಡ್ ಮಾಡಬಹುದಾಗಿದೆ. LPDDR5x ಮಾದರಿಯ RAM ಅನ್ನು ಸ್ಮಾರ್ಟ್ ಫೋನ್ನಲ್ಲಿ ಡಿಸೈನ್ ಮಾಡಲಾಗಿದೆ.
  • 5000mAh ಸಾಮರ್ಥ್ಯ ಇರುವಂತಹ ದೀರ್ಘಕಾಲಿಕ ಬ್ಯಾಟರಿಯನ್ನು ಮೊಬೈಲ್ ನಲ್ಲಿ ನೀಡಲಾಗಿದೆ. 100 ವ್ಯಾಟ್ ಇರುವಂತಹ ಫಾಸ್ಟ್ ಚಾರ್ಜರ್ ಅನ್ನು ಕೂಡ ನೀವು ಈ ಸ್ಮಾರ್ಟ್ಫೋನ್ (Smartphone) ಜೊತೆಗೆ ಪಡೆದುಕೊಳ್ಳಬಹುದಾಗಿದೆ.
  • 6.4 ಇಂಚಿನ ಡಿಸ್ಪ್ಲೇ ಅನ್ನು ಈ ಸ್ಮಾರ್ಟ್ ಫೋನ್ ಜೊತೆಗೆ ಕಾಣಬಹುದಾಗಿದೆ. ಮುಂದಿನ ದಿನಗಳಲ್ಲಿ ಇದು ಅತಿ ಶೀಘ್ರದಲ್ಲೇ ಭಾರತಕ್ಕೆ ಕೂಡ ಲಾಂಚ್ ಆಗುವ ನಿರೀಕ್ಷೆ ಇದೆ. ಹೀಗಾಗಿ ನ್ಯಾಯಯುತವಾದ ಬೆಲೆಯಲ್ಲಿ OnePlus Ace 3V ಸ್ಮಾರ್ಟ್ಫೋನ್ ಮುಂದಿನ ದಿನಗಳಲ್ಲಿ ಭಾರತದ ಗ್ರಾಹಕರಿಗೆ ಇಷ್ಟ ಆಗೋದಿರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಮಾರುಕಟ್ಟೆಯ ಪರಿಣಿತರು ಹೇಳಿದ್ದಾರೆ.

advertisement

Leave A Reply

Your email address will not be published.