Karnataka Times
Trending Stories, Viral News, Gossips & Everything in Kannada

SUV Car: 55.6Km ಮೈಲೇಜ್ ಕೊಡೋ ಈ ಕಾರಿನ ಮುಂದೆ ಮಾರುತಿ ಸುಜುಕಿ ಕೂಡ ಫೇಲ್! ಬೆಲೆ ಎಷ್ಟು ಗೊತ್ತಾ?

advertisement

ಸ್ನೇಹಿತರೆ, ಆಟೋಮೊಬೈಲ್ ಮಾರುಕಟ್ಟೆಯಲ್ಲಿ ತನ್ನ ಆಕರ್ಷಕವಾದ ಬಣ್ಣ ಹಾಗೂ ಲಕ್ಷಣಗಳಿಂದಾಗಿ ಭಾರಿ ಜನಪ್ರಿಯತೆ ಪಡೆದುಕೊಂಡಿರುವಂತಹ ಮಾಧ್ಯಮ ಗಾತ್ರದ ಐಷಾರಾಮಿ ವೋಲ್ವೋ SUV Car (Volvo SUV) ಆಧುನಿಕ ಫಿಚರ್ಸ್ಗಳನ್ನು ಒಳಗೊಂಡಿದ್ದು, ಇದರ ವಿನ್ಯಾಸ ಆಸನಗಳ ವ್ಯವಸ್ಥೆ ಹಾಗೂ ಹೇರಳವಾದ ಸ್ಥಳವು ವಾಹನ ಸವಾರರಿಗೆ ಬಹಳ ಆರಾಮದಾಯಕವಾದ ಅನುಭವವನ್ನು ನೀಡುತ್ತದೆ. 2024ಕ್ಕೆ ಮಾರುಕಟ್ಟೆಗೆ ಲಗ್ಗೆ ಇಟ್ಟು ಅತಿ ಹೆಚ್ಚು ಮಾರಾಟವಾಗಿರುವಂತಹ ಈ ಕಾರಿನ ಅಸಲಿ ಬೆಲೆ, ಮೈಲೇಜ್ ಹಾಗೂ ಪವರ್ ಕೆಪ್ಯಾಸಿಟಿ ಎಷ್ಟಿದೆ? ಎಂಬ ಎಲ್ಲ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ಸಂಪೂರ್ಣವಾಗಿ ತಿಳಿದುಕೊಳ್ಳಿ.

ವೋಲ್ವೋ XC90ಯ ಅತ್ಯವಶ್ಯಕ ಗುಣಲಕ್ಷಣಗಳೇನು?

ಮಾರುತಿ ಸುಜುಕಿ (Maruti Suzuki) ಕಂಪನಿಯ ಎಲ್ಲಾ ಆಧುನಿಕ ಕಾರುಗಳಿಗೆ ಸೆಡ್ಡು ಹೊಡೆಯುವಂತಹ ವೈಸಷ್ಟತೆಯನ್ನು ಹೊಂದಿರುವ ವೋಲ್ವೋ XC90 (Volvo XC90) ಸಹಜವಾಗಿ ಅತಿ ಹೆಚ್ಚಿನ ನ್ಯೂನ್ಯತೆಗಳನ್ನು ಹೊಂದಿದ್ದು, ಇದರಲ್ಲಿರುವಂತಹ ಸಣ್ಣ ಡ್ಯಾಶ್ ಬೋರ್ಡ್ ಡಿಸ್ಪ್ಲೇ ಸ್ಕ್ರೀನ್, ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಎಲ್ಇಡಿ, 2.0 ಲೀಟರ್ ಟರ್ಬೋ ಚಾರ್ಜ್ ಹಾಗೂ ನಾಲ್ಕು ಸಿಲಿಂಡರ್ ಇಂಜಿನ್ಗಳನ್ನು ವೋಲ್ವೋ ಹೈಬ್ರಿಡ್ XC90 ಕಾರ್ನಲ್ಲಿ ಹಾಕಲಾಗಿದೆ.

Image Source: carandbike

advertisement

ಇನ್ನು ವಿಶೇಷವಾಗಿ ಡಾರ್ಕ್ ಥೀಮ್ ಮತ್ತು ಬ್ರೈಟ್ ಥೀಮ್ಸ್ನ (Dark And Bright Theme) ವಿಶೇಷ ಬಣ್ಣಗಳಲ್ಲಿ ಕಾರನ್ನು ತಯಾರಿಸಲಾಗಿದ್ದು, ಡಾರ್ಕ್ ಥೀಮ್ ಕಾರಿನ ಬಾಹ್ಯದ ಮೇಲೆ ಇರುವಂತಹ ಕಪ್ಪು ಬಣ್ಣದ ತುಣುಕುಗಳು ಅತ್ಯಂತ ಗಮನಾರ್ಹವಾಗಿದೆ. ಇದರೊಂದಿಗೆ ಬೃಹತಾಕಾರದ ಸ್ಟ್ಯಾಂಡರ್ಡ್ ಲ್ಯಾಮಿನೇಟೆಡ್ ಕಿಟಕಿಗಳ(Standard Laminated Window) ವ್ಯವಸ್ಥೆಯನ್ನು ಮಾಡಿದ್ದಾರೆ. ಹಾಗೂ ಹಿಂದಿನ ವೋಲ್ವೋ SUV ಕಾರು (Volvo SUV Car) ಗಳಲ್ಲಿ ಕಾಣಿಸಿದಂತಹ 22 ಇಂಚಿನ ಚಕ್ರ ಹಾಗೂ ಟೈಯರ್ಗಳನ್ನು ಟ್ರಬೋ ಚಾರ್ಜಿಂಗ್ XC90 B6 ಅಲ್ಟಿಮೇಟ್ ನಲ್ಲಿ ಹಾಕಲಾಗಿದೆ.

ಜೊತೆಗೆ ನಾಲ್ಕು ಸಿಲಿಂಡರ್ ಎಂಜಿನ್ ಹಾಗೂ ಟರ್ಬೋ ಚಾರ್ಜ್ ಮತ್ತು ಸೂಪರ್ ಚಾರ್ಜರ್ ಲಭ್ಯವಿದ್ದು, ಪೆಟ್ರೋಲ್ ಹಾಗೂ ಎಲೆಕ್ಟ್ರಿಕಲ್ ಆಯ್ಕೆಯನ್ನು ಹೊಂದಿದೆ. ಸರಾಸರಿ 55 ರಿಂದ 56 kph ಮೈಲೇಜ್ ನೀಡಬಲ್ಲ, ವೋಲ್ವೋ xc90 ಕಾರ್ 420Nm ಟಾರ್ಕ್(torque) ಹಾಗೂ 300 bhp ಪವರ್ (power) ರನ್ನು ಉತ್ಪಾದಿಸುತ್ತದೆ.

Image Source: CarTrade

ಒಟ್ಟು ಏಳು ಜನರು ಕೂರಬಹುದಾದ ಆಟೋಮೆಟಿಕ್ ಟ್ರಾನ್ಸ್ ಮಿಷನ್ನ (Automatic transmission) ಕಾರ್ ಇದಾಗಿದ್ದು ಒಟ್ಟು 68 ಲೀಟರ್ ಫ್ಯೂಲ್ ಟ್ಯಾಂಕ್ ಕೆಪ್ಯಾಸಿಟಿಯ ಜೊತೆಗೆ ಏಳು ಏರ್ ಬ್ಯಾಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಇಷ್ಟೆಲ್ಲ ಆಧುನಿಕ ಹಾಗೂ ಅತ್ಯಾಕಾಶಕ ಫೀಚರ್ಸ್ಗಳನ್ನು ಒಳಗೊಂಡಿರುವಂತಹ ವೋಲ್ವೋ ಎಕ್ಸೆ90 (Volvo XC90) ಭಾರತದಲ್ಲಿ ಕೇವಲ 54.95 ಲಕ್ಷಕ್ಕೆ ಲಭ್ಯವಿದೆ.

advertisement

Leave A Reply

Your email address will not be published.