Karnataka Times
Trending Stories, Viral News, Gossips & Everything in Kannada

Mini Wrangler: ಮಹೀಂದ್ರ ಥಾರ್ ಗೆ ಕಾಂಪಿಟೇಷನ್ ನೀಡಲು ಬರುತ್ತಿದೆ ಮಿನಿ ಜೀಪ್! ಬೆಲೆ ಕೇಳಿ ಯುವಕರು ಖುಷ್

advertisement

ಆಫ್ ರೋಡಿಂಗ್ ಸೆಗ್ಮೆಂಟ್ ನ ಕಾರುಗಳು ಎಂದಾಗ ಎಲ್ಲರ ತಲೆಯಲ್ಲಿ ಬರುವ ಮೊದಲ ಹೆಸರು ಮಹಿಂದ್ರ ಥಾರ್ (Mahindra Thar). ಮಹಿಂದ್ರಾ ಥಾರ್ ಕಾರ್ ಕೊಡುವ ಫೀಚರ್ಸ್ ಗಳು ಹಾಗೂ ಇಲ್ಲಿಯವರೆಗೂ ಉಳಿಸಿಕೊಂಡು ಬಂದಿರುವ ಹೆಸರು ಇದನ್ನು ಮೊದಲ ಆಯ್ಕೆಯನ್ನಾಗಿಸಿದೆ. ಇದು ಅತ್ಯಂತ ಸದೃಢ ಎನ್ನಬಹುದಾದ ಕಾರು ಕೂಡ ಹೌದು. ಹಾಗೆಂದು ಈ ಕಾರಿಗೆ ಕಾಂಪಿಟಿಷನ್ ಇಲ್ಲ ಎಂದಲ್ಲ. ಮಾರುತಿ ಸುಜುಕಿಯ ಜಿಮ್ನಿ (Maruti Suzuki Jimny), ಫೋರ್ಸ್ ಮೋಟಾರ್ಸ್ ನ ಗೂರ್ಖಾ (Gurkha)ಕೂಡ ಥಾರ್ ಗೆ ಒಳ್ಳೆಯ ಕಾಂಪಿಟಿಷನ್ ನೀಡಿದೆ. ಇದಲ್ಲದೆ ಇನ್ನು ದುಬಾರಿ ಹಲವಾರು ಕಾರುಗಳಿವೆ. ಆದರೂ ಮಹಿಂದ್ರ ಧಾರ್ ಬೆಲೆಯಲ್ಲಿ ಮಜಾ ನೀಡುವ ಬೇರೆ ವಾಹನಗಳು ಅಷ್ಟೊಂದು ಯಶಸ್ವಿ ಆಗಿಲ್ಲ. ಆದರೆ ಈಗ ಮಹಿಂದ್ರಾ ಥಾರ್ ನ ಅನಭಿಷಿಕ್ತ ದೊರೆ ಎಂಬ ಪಟ್ಟವನ್ನು ಕಸಿದುಕೊಳ್ಳಲು ಜೀಪ್ ತಯಾರಿ ನಡೆಸುತ್ತಿದೆ.

ಜೀಪ್ ಮಿನಿ ರಾಂಗ್ಲರ್ (Jeep Mini Wrangler) ಆಫ್ ರೋಡಿಂಗ್ ಕಾರು

ಜೀಪ್ ಮಿನಿ ರಾಂಗ್ಲರ್ (Jeep Mini Wrangler) ಕಾರು ಆಫ್ ರೋಡಿಂಗ್ ಸೆಗ್ಮೆಂಟ್ ಗಾಗಿ ಲಾಂಚ್ ಆಗುವ ಸಿದ್ಧತೆ ಭರದಿಂದ ನಡೆಸುತ್ತಿದ್ದು ಈ ಕಾರಿನ ಫೀಚರ್ಸ್ ಗಳು ಹಾಗೂ ಇದರ ಬೆಲೆ ಅತ್ಯಂತ ಸನಿಹದ ಕಾಂಪಿಟಿಷನ್ ನೀಡಲಿದೆ ಎಂದು ಹೇಳಲಾಗುತ್ತಿದೆ. ಆನ್ ಪೇಪರ್ ಅಥವಾ ಫೀಚರ್ಸ್ ಗಳ ಪಟ್ಟಿಯನ್ನು ನೋಡಿದಲ್ಲಿ ಈ ಮಾತು ಹೌದು ಎಂದು ಅನಿಸುತ್ತಿದೆ. ಹಾಗಾದರೆ ಥಾರ್ ನ ಮೊನೋಪಲಿ ಕೊನೆಗೊಳ್ಳಲು ಜೀಪ್ ಕಾರಣ ಆಗುತ್ತದೆಯೇ?

Image Source: Cartoq

ಜೀಪ್ ನ ರಾಂಗ್ಲರ್ ಮಾದರಿಯಲ್ಲೇ ಹೊಸ ಮಿನಿ ರಾಂಗ್ಲರ್ (Mini Wrangler) ಕೂಡ ಇರಲಿದೆ ಎನ್ನಲಾಗುತ್ತಿದೆ. ಬಾಡಿ ಆನ್ ದ ಫ್ರೇಮ್ ಬಿಲ್ಡ್ ಈ ಕಾರಿನಲ್ಲಿ ಕೂಡ ಕಾಣಸಿಗಲಿದೆ. ಇದು ಸೇಫ್ಟಿ ನೀಡುವುದಷ್ಟೇ ಅಲ್ಲದೆ ಜೊತೆಗೆ ಉತ್ತಮ ರಸ್ತೆಗಳಲ್ಲಿ ಕಂಫರ್ಟೆಬಲ್ ಆದ ಜರ್ನಿ ಕೂಡ ನಿಮ್ಮದಾಗಿಸುತ್ತಿದೆ. ಫೋರ್ ವೀಲ್ ಡ್ರೈವ್ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಇಂಧನದ ಆಯ್ಕೆಗಳು, ಮುಂತಾದ ಬೇಸಿಕ್ ವಿಷಯಗಳನ್ನು ಈ ಕಾರ್ ಪೂರ್ಣಗೊಳಿಸಿ ಮಾರುಕಟ್ಟೆಗೆ ಲಾಂಚ್ ಆಗಲು ಸಿದ್ಧತೆ ನಡೆಸುತ್ತಿದೆ.

ಮಿನಿ ರಾಂಗ್ಲರ್ (Mini Wrangler) ಕಾರ್ ನ ಫೀಚರ್ಸ್

advertisement

ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಡ್ಯುಯಲ್ ಝೋನ್ ಎಸಿ, ಪವರ್ ನ ಮೂಲಕ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಹಾಗೂ ಮೆಮೊರಿ ಆಯ್ಕೆ, ಪ್ಯಾನರೋಮಿಕ್ ಸನ್ ರೂಫ್, ವಯರ್ಲೆಸ್ ಚಾರ್ಜಿಂಗ್, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್, ಇಂಜಿನ್ ಸ್ಟಾರ್ಟ್ ಸ್ಟಾಪ್ ಬಟನ್ ಮುಂತಾದ ಅಗತ್ಯ ಫೀಚರ್ಸ್ಗಳೊಂದಿಗೆ ಈ ಕಾರು ನಿಮ್ಮ ಮುಂದೆ ಬರಲಿದೆ.

Image Source: RushLane

ಸೇಫ್ಟಿ ಹಾಗೂ ಇತರ ಆಕರ್ಷಣೆಗಳು

ಇದು ಇಂಟೀರಿಯರ್ಸ್ ಹಾಗೂ ಫೀಚರ್ಸ್ ಗಳ ವಿಷಯ ಆದರೆ ಇನ್ನು ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್, ಆರು ಏರ್ ಬ್ಯಾಗ್ ಗಳು, ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಮುಂತಾದ ಸೇಫ್ಟಿ ಫೀಚರ್ಸ್ ಗಳು ಕೂಡ ಈ ಕಾರಿನಲ್ಲಿ ಬರಲಿವೆ. ಈ ಎಲ್ಲಾ ಫೀಚರ್ಸ್ ಗಳನ್ನು ನೋಡುತ್ತಿದ್ದರೆ ಈ ಕಾರು ಆಫ್ ರೋಡಿಂಗ್ ಹಾಗೂ ದಿನನಿತ್ಯದ ರೈಡಿಂಗ್ ಗೆ ಹೇಳಿ ಮಾಡಿಸಿದಂತಹ ಕಾರಾಗಲಿದೆ ಎಂದು ಅನಿಸುತ್ತದೆ.

ಜೀಪ್ ರಾಂಗ್ಲರ್ ಕಾರಿನ ಬೆಲೆ

ಇಲ್ಲಿಯವರೆಗೆ ಈ ಕಾರಿನ ಅಧಿಕೃತ ಬೆಲೆಗಳು ಎಷ್ಟು ಎಂದು ತಿಳಿಯದೆ ಇದ್ದರೂ ಈ ಕಾರಿನ ಎಕ್ಸ್ ಶೋರೂಮ್ ಬೆಲೆಗಳು 21ರಿಂದ 25 ಲಕ್ಷಗಳ ನಡುವೆ ಇರಲಿದೆ ಎನ್ನಲಾಗಿದೆ. ಈ ಬೆಲೆಗಳಲ್ಲಿ ಈ ಕಾರು ಲಾಂಚ್ ಆದರೆ ಖಂಡಿತ ಬಹಳ ಕಾರುಗಳಿಗೆ ಇದು ಉತ್ತಮ ಕಾಂಪಿಟೇಟಿವ್ ಆಗಲಿದೆ.

advertisement

Leave A Reply

Your email address will not be published.