Karnataka Times
Trending Stories, Viral News, Gossips & Everything in Kannada

Electricity: ಉಚಿತ ವಿದ್ಯುತ್ ಪಡೆದವರಿಗೂ ಹಾಗೂ ಪಡೆಯದವರಿಗೂ ಸಿಹಿಸುದ್ದಿ! ರಾಜ್ಯ ಸರ್ಕಾರದ ಹೊಸ ನಿರ್ಧಾರ

advertisement

ಇನ್ನೇನು ಲೋಕಸಭಾ ಚುನಾವಣೆಯ ಸಮಯವು ಹತ್ತಿರವಾಗುತ್ತಿದೆ. ಇನ್ನು ರಾಜ್ಯದಲ್ಲಿ ಇದೀಗ ಎಲ್ಲೆಡೆ ಚುನಾವಣೆಯ ಸಿದ್ಧತೆಗಳು ಬಿರುಸಿನಿಂದ ಸಾಗಿದೆ. ಇದರ ಮಧ್ಯದಲ್ಲಿ ರಾಜ್ಯದ ಜನತೆಗೆ ಇದೀಗ ಹೊಸ ಸಿಹಿ ಸುದ್ದಿ ಒಂದನ್ನು ನೀಡಲಾಗಿದೆ. ಇನ್ನು ಬೇಸಿಗೆ ಸಮಯದಲ್ಲಿ ಎಲ್ಲರ ಮನೆಯಲ್ಲಿಯೂ ವಿದ್ಯುತ್ (Electricity) ಬಳಕೆ ಹೆಚ್ಚಾಗಿರುತ್ತದೆ. ಇನ್ನು ವಿದ್ಯುತ್ ಬೆಲೆ ಈಗಾಗಲೇ ಹೆಚ್ಚಾಗಿದ್ದು ಇನ್ನೂ ರಾಜ್ಯದ ಜನದ ಮೇಲಿನ ಭಾರವನ್ನು ಇಳಿಸುವ ಸಲುವಾಗಿ ರಾಜ್ಯ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗವು ಬೆಲೆಯನ್ನು ಇಳಿಕೆ ಮಾಡಿದೆ.

ಇನ್ನು ರಾಜ್ಯ ಸರ್ಕಾರವು ಈಗಾಗಲೇ ಗೃಹಜೋತಿ (Gruha Jyothi) ಎಂಬ ಯೋಜನೆ ಅಡಿಯಲ್ಲಿ ಪ್ರತಿ ಮನೆಗೂ ಕೂಡ 200 ಯೂನಿಟ್ ಅಷ್ಟು ವಿದ್ಯುತ್ತನ್ನು ಉಚಿತವಾಗಿ ನೀಡುವಂತಹ ಕಾರ್ಯಕ್ರಮವನ್ನು ನಿಯೋಜಿಸಿತು. ಮತ್ತು ಅದಕ್ಕೆ ನೋಂದಾಯಿಸಿಕೊಳ್ಳುವಂತೆ ಅರ್ಜಿಗಳನ್ನು ಕೂಡ ಕರೆಯಲಾಗಿತ್ತು. ಇನ್ನು ಯೋಜನೆಯಲ್ಲಿ ಉಚಿತವಾಗಿ ವಿದ್ಯುತ್ ಪಡೆಯುತ್ತಿರುವಂತಹ ಗ್ರಾಹಕರನ್ನು ಹೊರತುಪಡಿಸಿ ಮಿಕ್ಕ ಜನತೆಗೆ ಈ ಬೆಲೆ ಇಳಿಕೆಯು ಸಹಾಯಕವಾಗಲಿದೆ.

Image Source: Gulfhindi

advertisement

ಅಂದರೆ ಸುಮಾರು 15 ವರ್ಷಗಳ ನಂತರ ರಾಜ್ಯ ವಿದ್ಯುತ್ ಶಕ್ತಿ ನಿಯಂತ್ರಣ ಮಂಡಳಿಯು ವಿದ್ಯುತ್ ಬೆಲೆಯನ್ನು ಕಡಿಮೆ ಮಾಡಿದೆ. ಇನ್ನು ಪ್ರಸ್ತುತದಲ್ಲಿ ಒಂದು ಮನೆಯಲ್ಲಿ 100 ಯೂನಿಟ್ ಗಿಂತ ಹೆಚ್ಚಾಗಿ ವಿದ್ಯುತ್ ಬಳಸುವವರು ಪ್ರತಿ ಯೂನಿಟ್ ಗೆ ಏಳು ರೂ ಪಾವತಿ ಮಾಡಬೇಕಿತ್ತು. ಇನ್ನು ಒಂದು ಕುಟುಂಬದ ಸದಸ್ಯರು 100 ಯೂನಿಟ್ ಗಿಂತ ಕಡಿಮೆಯಾಗಿ ಬಳಸುತ್ತಿರುವುದಾದರೆ ಪ್ರತಿ ಯೂನಿಟ್ ಗೆ 4.75 ರೂ ಪಾವತಿ ಮಾಡಬೇಕಿತ್ತು. ಇನ್ನು ಸಾಮಾನ್ಯವಾಗಿ ನೋಡುವುದಾದರೆ 100 ಯೂನಿಟ್ ಗಳಿಗಿಂತ ಹೆಚ್ಚಾಗಿ ಬಳಸುವಂತವರ ಜನಸಂಖ್ಯೆಯ ಅಧಿಕವಿದೆ.

ಕಾರಣ ಮನೆಯಲ್ಲಿ ಇರುವಂತಹ ರೆಫ್ರಿಜರೇಟರ್, ಎಸಿ ಅಂತಹ ವಸ್ತುಗಳನ್ನು ಬಳಸುವ ಕಾರಣ ಹೆಚ್ಚಾದ ವಿದ್ಯುತ್ ಶಕ್ತಿಯನ್ನು ಗ್ರಾಹಕರು ಅನುಭವಿಸುತ್ತಾ ಇದ್ದಾರೆ. ಇನ್ನು ಮುಂದೆ ರಾಜ್ಯದ ವಿದ್ಯುತ್ ನಿಯಂತ್ರಣ ಆಯೋಗವು ನಿಗದಿಪಡಿಸಿರುವಂತೆ ವಿದ್ಯುತ್ ಬೆಲೆ ಪ್ರತಿ ಯೂನಿಟ್ ಗೆ 1.10ರೂ ಕಡಿಮೆ ಮಾಡಲಾಗಿದೆ. ಇನ್ನು 100 ಯೂನಿಟ್ ವಿದ್ಯುತ್ ಗಿಂತ ಅಧಿಕವಾಗಿ ವಿದ್ಯುತ್ ಬಳಸುತ್ತಿರುವವರು ಪ್ರತಿ ಯೂನಿಟ್ ಗೆ 5.90 ರೂಗಳನ್ನು ಮತ್ತು 100 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುತ್ತಿರುವವರು ಪ್ರತಿ ಯೂನಿಟ್ ಗೆ 4.75 ರೂಗಳನ್ನು ಪಾವತಿ ಮಾಡಬೇಕಾಗುತ್ತದೆ.

Image Source: Paytm

ಇನ್ನು ರಾಜ್ಯ ವಿದ್ಯುತ್ ಶಕ್ತಿ ನಿಯಂತ್ರಣ ಮಂಡಳಿಯು ಇದನ್ನು ಅಧಿಕೃತವಾಗಿ ಏಪ್ರಿಲ್ 1 2024 ರಿಂದಲೇ ಜಾರಿಯಲ್ಲಿ ಇರುವಂತೆ ಸೂಚನೆಯನ್ನು ಹೊರಡಿಸಿದೆ. ಇದರೊಂದಿಗೆ ರಾಜ್ಯದ ಎಲ್ಲಾ ಎಸ್ಕಾಂ ಗಳು ಏಕರೂಪದ ವಿದ್ಯುತ್ ದರವನ್ನು ನಿಗದಿಪಡಿಸುವಂತೆ ಸೂಚನೆ ಹೊರಡಿಸಲಾಗಿದೆ. ಈ ಯೋಚನೆಯು ಗೃಹಜೋತಿ ಯೋಜನೆ ಬಳಸುತ್ತಿರುವವರನ್ನು ಹೊರತುಪಡಿಸಿ ಮಿಕ್ಕ ಜನರಿಗೆ ಸಿಗಲಿದೆ. ಮತ್ತು ಇದು ರಾಜ್ಯದ ಜನತೆಗೆ ಹೊಸ ಸಿಹಿ ಸುದ್ದಿ ಆಗಿದೆ.

advertisement

Leave A Reply

Your email address will not be published.