Karnataka Times
Trending Stories, Viral News, Gossips & Everything in Kannada

Cocoa: ಅಡಿಕೆ, ತೆಂಗಿಗಿಂತಲೂ ಈ ಬೆಳೆ ಬೆಳೆದರೆ ಲಕ್ಷ ಗಟ್ಟಲೆ ಆದಾಯ! ಕೆಜಿಗೆ 700 ರೂ ದಾಖಲೆ ದರ

advertisement

ಕರಾವಳಿ ಹಾಗೂ ಮಲೆನಾಡ ಭಾಗದಲ್ಲಿ ಪ್ರಮುಖ ಕೃಷಿ ವಿಚಾರದಲ್ಲಿ ತೆಂಗು, ಕಂಗು, ಕಾಫಿ ಎಲ್ಲವೂ ಸೇರಿರುವುದನ್ನು ನಾವು ಕಾಣಬಹುದು. ಅದರಲ್ಲೂ ತೆಂಗು ಮತ್ತು ಅಡಿಕೆ (Arecanut) ಬೆಳೆಗೆ ಅದರದ್ದೇ ಆದ ಪ್ರಾಮುಖ್ಯತೆ ಹಾಗೂ ಪ್ರಾತಿನಿಧ್ಯ ಇದ್ದು ಕೆಲ ಸಂದರ್ಭದಲ್ಲಿ ನಿರೀಕ್ಷೆ ಮಾಡಿದ್ದಷ್ಟು ಈ ಬೆಳೆ ಲಾಭ ತಂದುಕೊಡದು, ಈ ನಿಟ್ಟಿನಲ್ಲಿ ಕೆಲವೊಂದು ಕೃಷಿ ವಿಧಾನವನ್ನು ನೀವು ಕೂಡ ಅಳವಡಿಸಿಕೊಂಡರೆ ಅಧಿಕ ಲಾಭದ ಜೊತೆಗೆ ನಿಮ್ಮ ಆರ್ಥಿಕ ಸ್ಥಿತಿಯೂ ಸುಧಾರಣೆ ಆಗಲಿದೆ.

ಬಾಯಿಗೆ ರುಚಿ ನೀಡುವ ಬೆಳೆ

ನಾವೆಲ್ಲ ಚಾಕಲೇಟ್ ಅನ್ನು ತಿಂದಿರುತ್ತೇವೆ‌. ಆದರೆ ಈ ಚಾಕಲೇಟ್ ಹೇಗೆ ತಯಾರು ಆಗುತ್ತೆ ಎಂಬ ಪ್ರಶ್ನೆಗೆ ಉತ್ತರ ದೊರೆಯದು ಎನ್ನಬಹುದು. ಈ ಚಾಕಲೇಟ್ ಅನ್ನು ಮಾಡುವುದು ಕೊಕೋ (Cocoa Plant) ದಿಂದಾಗಿದ್ದು ಇಂದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಕೋ ಬೆಳೆಗೆ ಅಧಿಕ ಲಾಭ ಇದೆ. ಇದು ಕೃಷಿ ಮಾಡುವ ರೈತರಿಗೆ ವರ್ಷಕ್ಕೆ ಲಕ್ಷಾಂತರ ರೂಪಾಯಿ ಗಳಿಕೆ ಮಾಡಬಹುದಾಗಿದ್ದು ಈ ಕೃಷಿಯ ಕೆಲ ಮಹತ್ವದ ಮಾಹಿತಿ ಇಲ್ಲಿದೆ

Image Source: Amazon

advertisement

ಈ ಸಲಹೆ ಪಾಲಿಸಿ

  • ಕೊಕೋ ಬೆಳೆಯು ಗಿಡ ನೆಟ್ಟ ಕೂಡಲೇ ಸಿಗುವ ಫಲ ಅಲ್ಲ ಅದು ದೀರ್ಘಾವಧಿಯ ಕೃಷಿ ಆಗಿದ್ದು ಕಾಯಬೇಕಾಗುವುದು. ಆದ್ದರಿಂದ ತಾಳ್ಮೆ ಬಹಳ ಮುಖ್ಯ.
  • ಕೊಕೋ ಗಿಡ ಯಾವರೀತಿ ನೆಡುತ್ತೀರಿ ಎಂಬ ಆಧಾರದ ಮೇಲೆ ಅದರ ಫಲ ನಿಮಗೆ ತಿಳಿಯಲಿದೆ ಅಂದರೆ ಜಾಗಕ್ಕೆ ಹೊಂದಿಕೊಂಡು ಕೃಷಿ ಮಾಡುವಾಗ ಕಾಂಡ ತೀರ ಮೇಲೆ ಬರದಂತೆ ಗಿಡ ನೆಡಬೇಕು.
  • ಕೊಕೋದಲ್ಲಿ ಮೂರು ಮುಖ್ಯ ತಳಿ ಇದೆ ಫಾರೆಸ್ಟಿಯೊ, ಕ್ರಿಯೆಲ್ಲೊ, ಟ್ರೆನಿಟಾಯೊ ಎಂದು ಅದರಲ್ಲಿ ಯಾವುದು ನಿಮ್ಮ ಭೂಮಿಗೆ ಸೂಕ್ತ ಎಂದು ತಿಳಿಯಿರಿ.
  • ಒಂದು ಮರದಿಂದ 6ರಿಂದ 7ಕೆಜಿ ಕೊಕೋ ಸಿಗಲಿದ್ದು ಇದನ್ನೆ ಸಂಪೂರ್ಣ ನೆಟ್ಟರೆ ಅಧಿಕ ಲಾಭ ಸಿಗಲಿದೆ.
  • ಅಡಿಕೆ ಹಾಗೂ ತೆಂಗಿನ ಮರಕ್ಕೆ ಮಾಡುವ ಪೋಷಣೆ ಈ ಕೊಕೋ ಮರಕ್ಕೆ ಮಾಡಿದರೆ 10- 12kg ಕೊಕೋ ಇಳುವರಿ ಪಡೆಯಬಹುದು.
  • ಇದರ ನಿರ್ವಹಣೆ ಸುಲಭ ಹಾಗೂ ವೆಚ್ಚವೂ ಕೂಡ ತುಂಬಾ ಕಡಿಮೆ.
  • ಇದನ್ನು ಹಣ್ಣಾದ ನಂತರ ಕೊಯ್ದು ಒಡೆದು ಬೀಜವನ್ನು ಸಂಸ್ಕರಣೆ ಮಾಡಲಾಗುತ್ತದೆ.
  • ಇದು ಸೀಸನಲ್ ಬೆಳೆ ಅಲ್ಲ ಹಾಗಾಗಿ ವರ್ಷವಿಡಿ ಬೆಳೆ ಇರಲಿದೆ. ಎಪ್ರಿಲ್ ಮೇ ಕಾಲಕ್ಕೆ ಅಧಿಕ ಬೆಳೆ ಸಿಗಲಿದ್ದು ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಎರಡನೇ ಸೀಸನ್ ಕೊಕೋ ಹಣ್ಣು ಸಿಗಲಿದೆ.
  • ಸೀಸನಲ್ ಸಂದರ್ಭದಲ್ಲಿ 3ದಿನಕ್ಕೊಮ್ಮೆ ಕೊಯ್ಲು ಮಾಡಬೇಕು. ಕೊಕೋ ಹಣ್ಣು ಅಧಿಕ ಇಲ್ಲದೆ ಇದ್ದರೆ 15ದಿನಕ್ಕೊಮ್ಮೆ ಕೊಯ್ಯ ಬೇಕಾಗುತ್ತದೆ.
  • ಇದು ನಿರಂತರ ಆದಾಯ ಕೊಡುವ ಬೆಳೆ ಆಗಿದೆ.
  • ಕೊಕೋ ಬೆಳೆ ಜೊತೆ ಸಮಗ್ರ ಕೃಷಿ ಉತ್ತಮ ಲಾಭ ತಂದುಕೊಡಲಿದೆ.

Cocoa ಬೆಲೆ ಎಷ್ಟು?

ಮಾರುಕಟ್ಟೆಯಲ್ಲಿ ಕೊಕೋ (Cocoa Tree)ಬೆಳೆಗೆ ಬಾರಿ ಬೇಡಿಕೆ ಇದೆ. ಹಾಗಾಗಿ ಬೆಲೆ ಕೂಡ ಇದರದ್ದು ಅಧಿಕವಾಗಿಯೇ ಇದೆ ಎಂದು ಹೇಳಬಹುದು. ಹಿಂದೆಲ್ಲ ಒಂದು ಕೆಜಿ ಹಸಿ ಕೊಕೋಗೆ 65ರೂಪಾಯಿ ಇದ್ದದ್ದು ಮಾರ್ಚ್ ನಲ್ಲಿ ಈ ಬೆಳೆಗೆ 200 ರಿಂದ 210ರೂಪಾಯಿ ಆಗಿದೆ. ಹಾಗಾಗಿ ಹಿಂದಿಗಿಂತಲೂ ಈಗ ಈ ಬೆಳೆಗೆ ಅಧಿಕ ಬೆಲೆ ಸಿಕ್ಕಿದ್ದು ಬೆಳೆ ಬೆಳೆಯುವ ರೈತರಿಗೂ ಒಳ್ಳೆ ಲಾಭ ಸಿಗಲಿದೆ ಎನ್ನಬಹುದು. ಹಸಿ ಬೀಜಕ್ಕೆ 200 ಇರುವುದು ಒಣ ಕೊಕೋ ಬೀಜಕ್ಕೆ 650-700 ಕೆಜಿ ಇರಲಿದೆ. 10ಕೆಜಿ ಹಸಿ ಕೊಕೋದಿಂದ 30-35 ಕೆಜಿ ಒಣ ಕೊಕೋ ಸಿಗಲಿದೆ. ಹಾಗಾಗಿ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆಯುವ ಕೊಕೋ ಜೊತೆಗೆ ಸಮಗ್ರ ಕೃಷಿಯಾಗಿ ಲಿಂಬೆ, ಏಲಕ್ಕಿ, ಕಾಳು ಮೆಣಸನ್ನು ಬೆಳೆಯಬಹುದು.

advertisement

Leave A Reply

Your email address will not be published.