Savings Account: ಸೇವಿಂಗ್ಸ್ ಅಕೌಂಟ್ ನಲ್ಲಿ ಹೆಚ್ಚು ಹಣ ಇಟ್ಟವರಿಗೆ ಆದಾಯ ಇಲಾಖೆ ಹೊಸ ಸೂಚನೆ!
ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಪ್ರತಿಯೊಬ್ಬರ ಬಳಿಯೂ ಕೂಡ ಬ್ಯಾಂಕ್ ಅಕೌಂಟ್ (Bank Account) ಇದ್ದೇ ಇರುತ್ತದೆ. ಇನ್ನು ಬ್ಯಾಂಕ್ ಅಕೌಂಟ್ ನಲ್ಲಿ ಎರಡು ರೀತಿಯಾದಂತಹ ಖಾತೆಯನ್ನು ತೆರೆಯಲು ಎಲ್ಲರಿಗೂ ಅವಕಾಶ ನೀಡಲಾಗಿದೆ. ಒಂದು ಸೇವಿಂಗ್ಸ್ ಅಕೌಂಟ್ ಆದರೆ ಮತ್ತೊಂದು ಕರೆಂಟ್ ಅಕೌಂಟ್ (Current Account) ಆಗಿರುತ್ತದೆ. ಇನ್ನು ಕರೆಂಟ್ ಅಕೌಂಟ್ ಬಿಸಿನೆಸ್ ಮಾಡುವವರು ಹೆಚ್ಚಾಗಿ ಬಳಸುತ್ತಾರೆ. ಇನ್ನು ಸೇವಿಂಗ್ಸ್ ಅಕೌಂಟ್ (Savings Account) ಅನ್ನು ಸಾಮಾನ್ಯವಾಗಿ ಎಲ್ಲರೂ ಕೂಡ ಹೊಂದಿರುತ್ತಾರೆ.
ಇನ್ನು ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಪ್ರತಿಯೊಬ್ಬರ ಹೆಸರಿನಲ್ಲಿಯೂ ಅವರದೇ ಆದಂತಹ ಬ್ಯಾಂಕ್ ಅಕೌಂಟ್ ಖಾತೆ ಇದ್ದೇ ಇರುತ್ತದೆ. ಇನ್ನು ಮಕ್ಕಳಿಗೆ ಸ್ಕಾಲರ್ಶಿಪ್, ಉದ್ಯೋಗಿಗಳಿಗೆ ಸ್ಯಾಲರಿ, ವಯಸ್ಸಾದವರಿಗೆ ಪಿಂಚಣಿ ಹೀಗೆ ಹಲವಾರು ರೀತಿಯಾದಂತಹ ಉಪಯೋಗ ಪಡೆಯಲು ಬ್ಯಾಂಕ್ ಅಕೌಂಟ್ ತುಂಬಾ ಮುಖ್ಯವಾದ ದಾಖಲೆ ಎಂದು ಹೇಳಿದರೆ ತಪ್ಪಾಗಲಾರದು. ನಮಗೆಲ್ಲರಿಗೂ ತಿಳಿದಿರುವಂತೆ ಇಷ್ಟು ದಿನ ಸರ್ಕಾರ ನಿಗದಿಪಡಿಸಿರುವ ಆದಾಯಕ್ಕಿಂತ ಹೆಚ್ಚಿನದಾಗಿ ಆದಾಯವನ್ನು ಪಡೆಯುತ್ತಿದ್ದರೆ ಅದಕ್ಕೆ ತೆರಿಗೆಯನ್ನು ಕಟ್ಟಬೇಕು.
Savings Account Minimum Balance:
ಇನ್ನು ಇದೀಗ ಆದಾಯ ತೆರಿಗೆಯಿಂದ ಸಿಕ್ಕಿರುವಂತಹ ಹೊಸ ನಿಯಮದ ಪ್ರಕಾರ ಸೇವಿಂಗ್ಸ್ ಅಕೌಂಟ್ ಅಲ್ಲಿ ಇರುವಂತಹ ಬ್ಯಾಲೆನ್ಸ್ ಮೊತ್ತಕ್ಕೂ ಕೂಡ ತೆರಿಗೆಯನ್ನು ವಿಧಿಸಲಾಗುತ್ತದೆ ಎಂದು ತಿಳಿದುಬಂದಿದೆ. ಸಾಮಾನ್ಯವಾಗಿ ಉಳಿತಾಯ ಖಾತೆಯಲ್ಲಿ ಹಣವನ್ನು ಇಡಲು ಯಾವುದೇ ರೀತಿಯಾದಂತಹ ಮಿತಿ ಇಲ್ಲ ಎಂಬುದು ಎಲ್ಲರಿಗೂ ತಿಳಿದಿರುವಂತಹ ವಿಷಯವಾಗಿದೆ. ಆದರೆ ಇದೀಗ ಕೆಲವು ಮಿತಿಗಳನ್ನು ಒಳಪಟ್ಟಂತಹ ಹೊಸ ನಿಯಮ ಒಂದನ್ನು ಆದಾಯ ತೆರಿಗೆ ಇಲಾಖೆಯು ಜಾರಿ ಮಾಡಿದೆ.
ಆದಾಯ ಇಲಾಖೆಯ (Income Tax) ವತಿಯಿಂದ ಇದೀಗ ಜಾರಿಯಾಗಿರುವ ಹೊಸ ನಿಯಮದ ಪ್ರಕಾರ ಸರ್ಕಾರದ ಆದಾಯದ ಮಿತಿ ಅಂದರೆ 7 ಲಕ್ಷಕ್ಕಿಂತಲೂ ಹೆಚ್ಚಾಗಿ ಸೇವಿಂಗ್ಸ್ ಅಕೌಂಟ್ ಅಲ್ಲಿ ಅಥವಾ ಉಳಿತಾಯ ಖಾತೆಯಲ್ಲಿ ನಾವು ಹಣವನ್ನು ಡೆಪಾಸಿಟ್ ಮಾಡಿದಾಗ ಅದಕ್ಕೆ ಸಿಗುವಂತಹ ಬಡ್ಡಿಯ ಮೊತ್ತ ಹೆಚ್ಚಾಗಿರುತ್ತದೆ. ಇನ್ನು 7 ಲಕ್ಷಕ್ಕಿಂತಲೂ ಅಂದರೆ ಬ್ಯಾಂಕಿನಿಂದ ಸಿಗುವಂತಹ ಬಡ್ಡಿಯ ಮೊತ್ತವನ್ನು 7 ಲಕ್ಷ ಆದಾಯಕ್ಕೆ ಸೇರಿಸಿದಾಗ ಅದು 7 ಲಕ್ಷಕ್ಕೆ ಮೀರಿದ ಆದಾಯ ಎಂದು ಪರಿಗಣಿಸಲಾಗುತ್ತದೆ ಮತ್ತು ಈ ರೀತಿಯಾಗಿ ಪರಿಗಣಿಸಲಾದಂತಹ ಆದಾಯಕ್ಕೆ ನಾವು ತೆರಿಗೆಯನ್ನು ಕಟ್ಟಬೇಕಾದಂತ ನಿಯಮ ಇದೆ.
ಪ್ರಸ್ತುತ ಉಳಿತಾಯ ಖಾತೆಯಲ್ಲಿ ನಾವು 7 ಲಕ್ಷ ಹಣ ಡಿಪೋಸಿಟ್ ಮಾಡಿದ್ದೇವೆ ಎಂದು ಆದಲ್ಲಿ ಅದಕ್ಕೆ ಬ್ಯಾಂಕಿನಿಂದ ಆರು ಪರ್ಸೆಂಟ್ ಬಡ್ಡಿ ಸಿಗುತ್ತದೆ ಎಂದರೆ ವಾರ್ಷಿಕವಾಗಿ 6,000 ಹೆಚ್ಚುವರಿ ಹಣ ನಮಗೆ ಸಿಗುತ್ತದೆ. ಇನ್ನು ನಮಗೆ ಸಿಗುವಂತಹ ಒಟ್ಟು ಮೊತ್ತ 706000 ಆಗಿರುತ್ತದೆ. ಇನ್ನು ಸರ್ಕಾರದ ಪ್ರಕಾರ 7 ಲಕ್ಷಕ್ಕಿಂತ ಹೆಚ್ಚಾಗಿ ಹಣ ಇದ್ದರೆ ಅವರು ಆದಾಯ ತೆರಿಗೆ ಕಟ್ಟಬೇಕಾಗುತ್ತದೆ. ಇದರಿಂದ ಬ್ಯಾಂಕಿನಿಂದ ಸಿಗುವಂತಹ ಬಡ್ಡಿಯ ಮೊತ್ತಕ್ಕೂ ಕೂಡ ನಾವು ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ.
ಇನ್ನು ಈ ರೀತಿಯಾಗಿ ಬಡ್ಡಿಯ ಮೊತ್ತವನ್ನು ಪಡೆದು ತೆರಿಗೆಯನ್ನು ಪಾವತಿ ಮಾಡದೆ ಇದ್ದಲ್ಲಿ , ಅಂತವರ ಮೇಲೆ ತೆರಿಗೆ ವಂಚನೆ ಎಂಬ ಪ್ರಕರಣದಡಿ ಅವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತದೆ ಮತ್ತು ದಂಡ ವಿಧಿಸಲಾಗುತ್ತದೆ ಮತ್ತು ಆದಾಯ ತೆರಿಗೆ ಇಲಾಖೆಯು ಅವರ ವಿರುದ್ಧ ಪ್ರಕರಣವನ್ನು ದಾಖಲಿಸುತ್ತದೆ. ಇನ್ನು ಸರ್ಕಾರ ವಿಧಿಸಿರುವಂತಹ ಆದಾಯದ ಮಿತಿಯನ್ನು ಮೀರಿ ಹಣ ಸಂಪಾದನೆ ಮಾಡುತ್ತಿದ್ದರೆ, ಅದರ ವಿಷಯವಾಗಿ ಆದಾಯ ತೆರಿಗೆ ಇಲಾಖೆಗೆ ವ್ಯಕ್ತಿಯು ತಿಳಿಸಬೇಕು ಎಂಬ ನಿಯಮವು ಕೂಡ ಇದೆ.