Karnataka Times
Trending Stories, Viral News, Gossips & Everything in Kannada

FASTag: ಫಾಸ್ಟ್ ಟ್ಯಾಗ್ ವಿಚಾರವಾಗಿ ಹೊಸ ಆದೇಶ ಹೊರಡಿಸಿದ ಕೇಂದ್ರ ಸರ್ಕಾರ! ಎಲ್ಲ ವಾಹನ ಮಾಲೀಕರಿಗೆ ಕಡ್ಡಾಯ

advertisement

ನಮ್ಮೆಲ್ಲರಿಗೂ ತಿಳಿದಿರುವಂತೆ ಒಂದು ವಾಹನಕ್ಕೆ FASTag ಎಂಬುದು ಬಹಳ ಮುಖ್ಯವಾದ ದಾಖಲೆ ಎಂದರೆ ತಪ್ಪಾಗಲಾರದು. ಇನ್ನು ಸಾಮಾನ್ಯವಾಗಿ ಜನರು ಒಂದೇ ವಾಹನಕ್ಕೆ ಹಲವಾರು ರೀತಿಯಾದಂತಹ FASTag ಗಳನ್ನು ಕೊಂಡುಕೊಂಡಿರುವುದು ಮತ್ತು ವಿವಿಧ ವಾಹನಗಳಿಗೆ ಒಂದೇ FASTag ಬಳಸುತ್ತಿರುವುದು ಗಮನಕ್ಕೆ ಬಂದಿದ್ದು, ಅದನ್ನು ಸರಿಪಡಿಸುವಂತಹ ಸಲುವಾಗಿ ಮತ್ತು ತಡೆರಹಿತ ವಾಹನ ಚಾಲನೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಈ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ.

ಇನ್ನು ಏಪ್ರಿಲ್ 1 ರಿಂದಲೇ ಈ ಹೊಸ ನಿಯಮ ಜಾರಿಗೆ ಬಂದಿದೆ. ಅಂದರೆ ನ್ಯಾಷನಲ್ ಹೈವೇ ಅಥಾರಿಟಿಸ್ ಆಫ್ ಇಂಡಿಯಾ (NHAI) ‘ಒಂದು ವಾಹನ, ಒಂದು ಫಾಸ್ಟ್ಯಾಗ್’ ಎಂಬ ನಿಯಮವನ್ನು ಜಾರಿಗೆ ತಂದಿದೆ. ಇನ್ನು ಫೆಬ್ರವರಿ ತಿಂಗಳಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಗ್ರಾಹಕರು ಮತ್ತು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (PPBL) ವ್ಯಾಪಾರಿಗಳು ತಮ್ಮ ಖಾತೆಗಳನ್ನು ಇತರ ಬ್ಯಾಂಕ್ ಖಾತೆಗಳಿಗೆ ಬದಲಾಯಿಸಿಕೊಳ್ಳುವಂತೆ ಸೂಚನೆಯನ್ನು ನೀಡಿತ್ತು ಮತ್ತು ಅದರ ಗಡುವು ಮಾರ್ಚ್ 15ರವರೆಗೂ ನೀಡಲಾಗಿತ್ತು.

ಬಹು FASTag ಬಳಸುವಂತಿಲ್ಲ:

advertisement

ಇನ್ನು ಈ ಬದಲಾವಣೆಯಿಂದಾಗಿ ಪೇಟಿಎಂ FASTag ಬಳಸುತ್ತಿರುವವರು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿದ್ದಂತಹ ಪರಿಸ್ಥಿತಿ ಬಂದಿತು. ಇನ್ನು ಅವರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಇದೀಗ ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ಈ ಹೊಸ ನಿಯಮವನ್ನು ಜಾರಿಗೆ ತಂದಿದೆ. ಇನ್ನು ಈ ನಿಯಮದ ಅನುಸಾರ ಇಷ್ಟು ದಿನ ಬಹು FASTag ಬಳಸುತ್ತಿದ್ದ ಬಳಕೆದಾರರು ಇನ್ನು ಮುಂದೆ ಬಹುFASTag ಬಳಸುವಂತಿಲ್ಲ ಎನ್ನುವ ನಿಯಮ ಜಾರಿಗೆ ಬಂದಿದೆ.

Image Source: ET Auto

ಫಾಸ್ಟ್ಯಾಗ್ ಭಾರತದಲ್ಲಿನ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯಾಗಿದೆ. ಇದನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ವಹಿಸುತ್ತದೆ. ಇನ್ನು ಇದರಲ್ಲಿ ಯಾವುದೇ ರೀತಿಯಾದಂತಹ ಸಮಸ್ಯೆಗಳು ಎದುರಾಗದಂತೆ ಮತ್ತು ತಡೆರಹಿತ ವಾಹನ ಚಾಲನೆಯನ್ನು ಸವಾರರು ಮಾಡುವಂತೆ ಈ ರೀತಿಯಾದಂತಹ ಒಂದೇ ವಾಹನ ಒಂದೇ FASTag ಎಂಬ ನಿಯಮವನ್ನು ಜಾರಿಗೆ ತರಲಾಗಿದೆ, ಎಂದು ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ತಿಳಿಸಿದೆ.

ಇನ್ನು ಈ ನಿಯಮವನ್ನು ಜಾರಿಗೆ ತಂದಿರುವುದರಿಂದ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯ ಸಾಮರ್ಥ್ಯವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು NHAI ತಿಳಿಸಿದೆ. ಇನ್ನು ಸುಮಾರು 98 ಪ್ರತಿಶತ ಅಂದರೆ ಎಂಟು ಕೋಟಿಗೂ ಹೆಚ್ಚು ಬಳಕೆದಾರರು ಈ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಬಳಸುತ್ತಿದ್ದಾರೆ ಮತ್ತು ಟೋಲ್ ಪಾವತಿ ಮಾಡಲು ಈಗಾಗಲೇ ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್ (RFID)ಎಂಬ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಇದರ ಮೂಲಕ ವಾಹನ ಸವಾರರು ನೇರವಾಗಿ ಅಥವಾ ಪ್ರಿಪೇಡ್ ಲಿಂಕ್ ಮೂಲಕ ತಮ್ಮ ಉಳಿತಾಯ ಖಾತೆಯಿಂದ ಟೋಲ್ ಪಾವತಿ ಮಾಡಬಹುದಾಗಿದೆ.

advertisement

Leave A Reply

Your email address will not be published.