Karnataka Times
Trending Stories, Viral News, Gossips & Everything in Kannada

NHAI: ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಬಳಿ ಮನೆ, ಅಂಗಡಿ ಕಟ್ಟುವವರಿಗೆ ಹೊಸ ರೂಲ್ಸ್! ಬೆಳ್ಳಂಬೆಳಿಗ್ಗೆ ಆದೇಶ

advertisement

ಸಾಮಾನ್ಯವಾಗಿ ಹೈವೇ ಮತ್ತು ಎಕ್ಸ್ಪ್ರೆಸ್ ಗಳನ್ನು ನಿರ್ಮಿಸುವ ಮೂಲ ಉದ್ದೇಶ ಎಂದರೆ, ತ್ವರಿತ ಗತಿಯಲ್ಲಿ ಪ್ರಯಾಣವು ಆಗಲಿ ಮತ್ತು ಆದಷ್ಟು ಬೇಗನೆ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಪ್ರಯಾಣಿಕರು ಹೋಗಿ ತಲುಪುವಂತಹ ಸೌಲಭ್ಯಕ್ಕಾಗಿ. ಇತ್ತೀಚಿನ ದಿನಗಳಲ್ಲಿ ಹಲವಾರು ಹೈವೇಗಳು ನಿರ್ಮಾಣವಾಗುವುದು ನಾವೆಲ್ಲರೂ ನೋಡೇ ಇರುತ್ತೇವೆ. ಅವು ಸರ್ಕಾರದಿಂದ ಮನ್ನಣೆ ಪಡೆದು ನಡೆಯುವಂತಹ ಕಾರ್ಯವಾಗಿದೆ. ಇನ್ನು ಹೈವೇ ಅಕ್ಕ ಪಕ್ಕದಲ್ಲಿ ಕಟ್ಟಡಗಳ ನಿರ್ಮಾಣ, ಇವು ಕಾನೂನಿನ ಪ್ರಕಾರ ಜರಗಿಸಬಹುದೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವ ಅವಶ್ಯಕತೆ ಎಲ್ಲರಿಗೂ ಇದೆ.

ಕಾನೂನಿನ ಪ್ರಕಾರ ಹೈವೇ ಅಕ್ಕ ಪಕ್ಕದಲ್ಲಿ ನಿರ್ಮಾಣ ಕೆಲಸ ಮಾಡಬಹುದೇ ಅಥವಾ ಇಲ್ಲವೇ ಎಂಬುದರ ಬಗ್ಗೆ ತಿಳಿದುಕೊಳ್ಳೋಣ:

ತ್ವರಿತ ಪ್ರಯಾಣ ಮತ್ತು ಸಾರಿಗೆಗಾಗಿ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ ವೇ ಅಕ್ಕಪಕ್ಕದ ನಿವೇಶನಗಳು ಹೆಚ್ಚಾಗಿ ಖಾಲಿ ಬಿಡುವುದನ್ನು ಸಾಮಾನ್ಯವಾಗಿ ಎಲ್ಲರೂ ಗಮನಿಸಿರಬಹುದು. ರಸ್ತೆಗಳನ್ನು ವಿಸ್ತರಿಸಬೇಕಾದರೆ ಯಾವುದೇ ರೀತಿಯ ಅಡಚಣೆಯಾಗದಂತೆ ತಡೆಯುವುದು ಇದರ ಮುಖ್ಯ ಉದ್ದೇಶ. ಹೀಗಿದ್ದರು ದೇಶದ ಅನೇಕ ಭಾಗಗಳಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಅನೇಕ ಮನೆಗಳು ಅಥವಾ ಶಾಪಿಂಗ್ ಸಂಕೀರ್ಣಗಳನ್ನು ನಿರ್ಮಿಸಲಾಗಿದೆ. ಮತ್ತು ನಂತರ ಅವುಗಳನ್ನು ಅಕ್ರಮ ನಿರ್ಮಾಣ ಎಂದು ಕೆಡವಿ ಹಾಕಲಾಗಿದೆ.

ರಾಜ್ಯ ಹೆದ್ದಾರಿಗಳು ಮತ್ತು ಇತರ ಪ್ರಮುಖ ರಸ್ತೆಗಳ ಪಕ್ಕದಲ್ಲಿ ಮನೆಗಳು ಅಥವಾ ವಾಣಿಜ್ಯ ಸ್ಥಳಗಳು ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸುವುದನ್ನು ತಡೆಯಲು ಅಧಿಕಾರಿಗಳು ನಿಗದಿಪಡಿಸಿದ ಮಾರ್ಗಸೂಚಿಗಳ ಬಗ್ಗೆ ತಿಳಿದಿರಬೇಕು. ಪ್ರತಿಯೊಂದು ರಾಜ್ಯದಲ್ಲೂ, ಹೆದ್ದಾರಿಯಿಂದ ಕಟ್ಟಡಗಳ ಅಂತರಕ್ಕೆ ನಿಯಮಗಳು ವಿಭಿನ್ನವಾಗಿವೆ. ಇದರ ಗೊಂದಲ ನಿವಾರಣೆಗೆ ನಗರದ ಮಹಾನಗರ ಪಾಲಿಕೆಯಿಂದ(Multi National Corporation) ಮಾಹಿತಿ ಪಡೆಯಬಹುದು.

advertisement

Image Source: 99acres

NHAI Rules:

ಪ್ರಸ್ತುತ ಕರ್ನಾಟಕದಲ್ಲಿ, ಕಟ್ಟಡ ನಿರ್ಮಾಣ ಮಾಡುವವರು, ಡೆವಲಪರ್‌ಗಳು 40 ಮೀಟರ್‌ ನಿರ್ವಹಿಸುವಂತೆ ಕಟ್ಟಡಗಳು ಅಥವಾ ವಾಣಿಜ್ಯ ಸ್ಥಳಗಳನ್ನು ನಿರ್ಮಿಸಬಹುದು ಎಂದು ಮಾರ್ಗಸೂಚಿಗಳು ಹೇಳುತ್ತವೆ. ಹೆದ್ದಾರಿ ರಸ್ತೆಯ ಮಧ್ಯದಿಂದ ಸರಿಸುಮಾರು (130 ಅಡಿ) ದೂರ ಮತ್ತು ಪ್ರಮುಖ ಜಿಲ್ಲಾ ರಸ್ತೆಗಳಿಗೆ, ನಿಯಮವು 25 ಮೀಟರ್ (ಸುಮಾರು 82 ಅಡಿ) ಸಿಟಿ ಕಾರ್ಪೊರೇಷನ್ ಮಿತಿಯೊಳಗೆ, ರಸ್ತೆಯಿಂದ 12 ಮೀಟರ್ (ಸುಮಾರು 40 ಅಡಿ) ದೂರದಲ್ಲಿ ಕಟ್ಟಡಗಳನ್ನು ನಿರ್ಮಿಸಬಹುದು. ಪಟ್ಟಣ ಮತ್ತು ಗ್ರಾಮ ಪಂಚಾಯತಿಗಳಲ್ಲಿ ಮಿತಿ 6 ಮೀಟರ್ (ಅಂದಾಜು 20 ಅಡಿ) ಬಿಟ್ಟು ಕಟ್ಟಡದ ನಿರ್ಮಾಣ ಮಾಡಬಹುದು.

ಇನ್ನು ಪ್ರತಿಯೊಂದು ವರ್ಗದ ರಸ್ತೆಗಳಿಗೂ ವಿಭಿನ್ನ ನಿಯಮಗಳಿರುತ್ತವೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಮತ್ತು ಸಂಬಂಧಪಟ್ಟ ಸರ್ಕಾರಗಳಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (NOC) ಪಡೆಯುವ ಮೂಲಕ ಕಟ್ಟಡಗಳನ್ನು ನಿರ್ಮಿಸಬಹುದು. ಇನ್ನು ಈ ರೀತಿಯಾಗಿ ಕಟ್ಟಡ ನಿರ್ಮಾಣ ಮಾಡುವವರು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ (NHAI) ಅನುಮತಿ ಪಡೆಯಬೇಕು, ಅವರ ಶಿಫಾರಸ್ಸಿನ ಮೇರೆಗೆ ಹೆದ್ದಾರಿ ಸಚಿವಾಲಯವು (Highway Ministry) NOC ನೀಡುತ್ತದೆ. ಅದರ ನಂತರವೇ ಸಂಬಂಧಿಸಿದ ಅಭಿವೃದ್ಧಿ ಪ್ರಾಧಿಕಾರ ಅಥವಾ ಜಿಲ್ಲಾ ಪಂಚಾಯಿತಿಯು ನಿರ್ಮಾಣದ ನಕ್ಷೆ (Jilla panchayat road Map)ಅಥವಾ ವಿನ್ಯಾಸವನ್ನು ರವಾನಿಸುತ್ತದೆ.

advertisement

Leave A Reply

Your email address will not be published.