Karnataka Times
Trending Stories, Viral News, Gossips & Everything in Kannada

GruhaLakshmi-AnnaBhagya: ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್!

advertisement

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ರಾಜ್ಯದ ಎಲ್ಲ ಮಹಿಳೆಯರಿಗೆ ಅನುಕೂಲವಾಗಲಿ ಎಂಬ ಉದ್ದೇಶಕ್ಕೆ ಅನೇಕ ಯೋಜನೆ ಜಾರಿಗೆ ತಂದಿದ್ದು ಅದರಲ್ಲಿ ಈ ಹಿಂದಿನ ಚುನಾವಣೆ ಅವಧಿಯಲ್ಲಿ ಗ್ಯಾರೆಂಟಿ ಯೋಜನೆ ಘೋಷಣೆ ಮಾಡಿದ್ದು ಅದರಲ್ಲಿಯೂ ಮಹಿಳೆಯರದ್ದು ಸಿಂಹಪಾಲಾಗಿದೆ. ಮಹಿಳೆಯರಿಗಾಗಿ ಶಕ್ತಿ ಯೋಜನೆ, ಗೃಹಲಕ್ಷ್ಮೀ (Gruha Lakshmi) ಯೋಜನೆ ಜಾರಿಗೆ ತಂದಿದ್ದು ಅನ್ನ ಭಾಗ್ಯ (Anna Bhagya) ಯೋಜನೆ ಅಡಿಯಲ್ಲಿ ಸಿಗುವ ಹಣ ಕೂಡ ಮಹಿಳೆಯರ ಖಾತೆಗೆ ಜಮೆ ಆಗಲಿದೆ.

ಒಲಿದ ಭಾಗ್ಯ

ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ 2000 ರೂಪಾಯಿ ಮೊತ್ತ ನೀಡಲಾಗುತ್ತಿದೆ. ಅದನ್ನು ರಾಜ್ಯದ ಮಹಿಳೆಯರು ಅರ್ಜಿ ಸಲ್ಲಿಸಿ ಆಯ್ಕೆ ಆದ ಫಲಾನುಭವಿಗಳಿಗೆ ನೀಡಲಾಗುತ್ತಿದ್ದು ಈ ಮೊತ್ತ ಅನೇಕರಿಗೆ ನೆರವಾಗುತ್ತಿದೆ. ಕಂತಿನ ಪ್ರಕಾರ ಹಣ ಬಿಡುಗಡೆ ಮಾಡಲಾಗುತ್ತಿದ್ದು ಅನೇಕರಿಗೆ ಹಣ ಬರಲು ಕೂಡ ಇನ್ನು ಬಾಕಿ ಇದೆ. ಈ ನಡುವೆ ಅನ್ನ ಭಾಗ್ಯದಿಂದ ಅಕ್ಕಿ ಬದಲು ಅಕ್ಕಿಯ ಹಣವನ್ನು ಮನೆಯ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ.

Image Source: Prokerala

 

GruhaLakshmi-AnnaBhagya ಯೋಜನೆಯಲ್ಲಿ ಅನೇಕ ಸಮಸ್ಯೆ:

advertisement

ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ (GruhaLakshmi-AnnaBhagya) ಈ ಎರಡು ಯೋಜನೆಗೂ ಕೂಡ ಅನೇಕ ಸಮಸ್ಯೆ ಏರ್ಪಟ್ಟಿದೆ. ಗೃಹಲಕ್ಷ್ಮೀ ಯೋಜನೆಯಲ್ಲಿ ಅನೇಕ ತಾಂತ್ರಿಕ ಸಮಸ್ಯೆ ಬಂದಿದೆ. ಅಷ್ಟು ಮಾತ್ರವಲ್ಲದೆ ಅರ್ಜಿ ಹಾಕಿದ್ದವರ ಮಾಹಿತಿ ಕೂಡ ಸರಿಯಾಗಿ ಇಲ್ಲದೆ ಸಮಸ್ಯೆ ಉಂಟಾಗಿತ್ತು ಈ ಹಿನ್ನೆಲೆಯಲ್ಲಿ ಸಮಸ್ಯೆ ನಿವಾರಣೆಗೆ ಸರ್ವ ಪ್ರಯತ್ನ ಮಾಡಲಾಗುತ್ತಲೇ ಇದೆ. ಇನ್ನು ಅನ್ನಭಾಗ್ಯ ಯೋಜನೆ ಫಲಾನುಭವಿಗಳಾಗಲು ಸರಿಯಾಗಿ ರೇಶನ್ ಕಾರ್ಡ್ ಇನ್ನು ಬಂದಿಲ್ಲ, ತಿದ್ದುಪಡಿ ಬಾಕಿ ಇದೆ ಎಂದು ಅನೇಕರು ಈ ಯೋಜನೆಯಿಂದಲೂ ಹಿಂದೆ ಸರಿಯುತ್ತಿದ್ದಾರೆ.

GruhaLakshmi-AnnaBhagya ಅರ್ಜಿದಾರರಿಗೆ ಗುಡ್ ನ್ಯೂಸ್:

ಅನ್ನಭಾಗ್ಯ (Anna Bhagya)ಮತ್ತು ಗೃಹಲಕ್ಷ್ಮೀ (Gruha Lakshmi)ಅರ್ಜಿದಾರರಿಗೆ ಇಲ್ಲೊಂದು ಶುಭ ಸುದ್ದಿ ಕಾಯುತ್ತಿದೆ. ಫೆಬ್ರವರಿ ತಿಂಗಳಲ್ಲಿ ನೀಡಲಾಗುವ ಉಚಿತ ಅಕ್ಕಿ ಅಂದರೆ ಅನ್ಮಭಾಗ್ಯ ಯೋಜನೆಯ ಹಣ ಕೆಲವು ಫಲಾನುಭವಿಗಳಿಗೆ ಇನ್ನು ಕೂಡ ಈ ಹಣ ಬಂದಿಲ್ಲವಾಗಿದೆ. 65%- 70%ವರೆಗೆ ಹಣ ಬರಲು ಇನ್ನೂ ಕೂಡ ಬಾಕಿ ಇದೆ. ಹಾಗಾಗಿ ಅನ್ನ ಭಾಗ್ಯದ ಹಣ ಮತ್ತು ಗೃಹಲಕ್ಷ್ಮೀ ಯೋಜನೆಯ ಹಣ ಬರಲು ಬಾಕಿ ಇದ್ದವರಿಗೆ ಶೀಘ್ರವೇ ಅಷ್ಟು ಕಂತಿನ ಹಣ ಒಟ್ಟಿಗೆ ಬರಲಿದೆ.

Image Source: The Indian Express

ಹಣ ಯಾವಾಗ ಬರುತ್ತೆ?

ಗೃಹಲಕ್ಷ್ಮೀ ಹಳೆ ಕಂತಿನ ಹಣ ಮತ್ತು ಅನ್ನಭಾಗ್ಯ (GruhaLakshmi-AnnaBhagya)  ಯೋಜನೆ ಹಣ ಯಾವಾಗ ಬರುತ್ತೆ ಎಂದು ಕಾಯುವವರಿಗೆ ಇಲ್ಲೊಂದು ಶುಭ ಸುದ್ದಿ ಇದೆ. ಈ ಎರಡು ಯೋಜನೆಯ ಮೊತ್ತವು ಎಪ್ರಿಲ್ ‌5ರ ಒಳಗೆ ಹಣ ಜಮೆ ಆಗಲಿದೆ ಎನ್ನಬಹುದು. ಹಾಗಾಗಿ ಹಣ ಬಂದಿಲ್ಲ ಎಂದು ಕಾಯುವವರಿಗೆ ಈ ನ್ಯೂಸ್ ಸಂತಸ ತಂದಿದೆ.

advertisement

Leave A Reply

Your email address will not be published.